ಕೊನೆಗೂ ಪುನೀತ್ ರಾಜ್‌ಕುಮಾರ್ ಬಗ್ಗೆ ಟ್ವೀಟ್ ಮಾಡಿದ ರಶ್ಮಿಕಾ ಮಂದಣ್ಣ. ಅಂಜನಿಪುತ್ರ ಚಿತ್ರಕ್ಕೆ 5 ವರ್ಷ... 

ಡಿಸೆಂಬರ್ 21, 2017ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅಭಿನಯಿಸಿದ ಅಂಜನಿ ಪುತ್ರ ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಬಿಡುಗಡೆಯಾಗಿತ್ತು. ಎ ಹರ್ಷ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು ಕುಮಾರ್ ನಿರ್ಮಾಣ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಮಾತ್ರ ಸಿನಿಮಾ ರಿಲೀಸ್ ಆಗಿದ್ದು 50 ಕೋಟಿ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಮಾಡಿದೆ. ರಮ್ಯಾ ಕೃಷ್ಣ, ಮುಖೇಷ್ ತಿವಾರಿ, ರವಿ ಸಂಕರ್, ವಿ ಮನೋಹರಿ, ಸಾಧು ಕೋಕಿಲ್, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾ ಬಳಗವಿದೆ. 

ಅಂಜನಿಪುತ್ರ ಸಿನಿಮಾ ರಿಲೀಸ್ ಆಗಿ 5 ವರ್ಷಗಳಾಗಿದೆ. ಸಿನಿಮಾ, ಅಪ್ಪು ಮತ್ತು ನಿರ್ದೇಶಕರ ಬಗ್ಗೆ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ. ರಶ್ಮಿಕಾ ಟ್ವೀಟ್‌ನಿಂದ ಆಶ್ಚರ್ಯ ಪಟ್ಟವರಿಗಿಂತ ಖುಷಿ ಪಟ್ಟವರ ಸಂಖ್ಯೆಯೇ ಹೆಚ್ಚು. 

ಬೆಂಗಳೂರು ವಿವಿ ಬಿಕಾಂ ಪಠ್ಯ ಪುಸ್ತಕದಲ್ಲಿ ಪುನೀತ್‌ ರಾಜ್‌ಕುಮಾರ್‌!

ರಶ್ಮಿಕಾ ಟ್ವೀಟ್:

ಅಂಜನಿಪುತ್ರ ಸಿನಿಮಾ ಬಂದು ಆಗಲೇ 5 ವರ್ಷಗಳಾಗಿವೆ. ಪುನೀತ್‌ ರಾಜ್‌ಕುಮಾರ್‌ ಸರ್‌ ಜೊತೆಗಿನ ಮಾತುಕತೆಯ ಬಗ್ಗೆ ಈಗಲೂ ಚಿಂತಿಸುತ್ತಿದ್ದೇನೆ. ನನಗೆ ನನ್ನ ಮೇಲೆ ಇರುವುದಕ್ಕಿಂತಲೂ ಹೆಚ್ಚಿನ ವಿಶ್ವಾಸ ಅವರಿಗೆ ನನ್ನ ಮೇಲಿತ್ತು. ಹೃದಯವಂತ ವ್ಯಕ್ತಿ ಅವರು. ನನ್ನ ಹೃದಯದಲ್ಲಿ ಅವರಿಗಿರುವ ಸ್ಥಾನವನ್ನು ಮತ್ಯಾರೂ ತುಂಬಲಾಗದು. ಈ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದಕ್ಕೆ ಹರ್ಷ ಸರ್‌ಗೆ ಧನ್ಯವಾದಗಳು. ಈ ಸಿನಿಮಾ ನನಗೆ ಬಹಳ ಮುಖ್ಯವಾದದ್ದು’ ಎಂದು ರಶ್ಮಿಕಾ ಟ್ವೀಟ್‌ ಮಾಡಿದ್ದಾರೆ. ಇದರ ಜೊತೆಗೆ ಕನ್ನಡ ಚಿತ್ರರಂಗದಿಂದ ಬ್ಯಾನ್‌ ಆಗೋ ಭೀತಿಯಿಂದ ರಶ್ಮಿಕಾ ಈ ರೀತಿ ಟ್ವೀಟ್‌ ಮಾಡಿದ್ದಾರೆ ಎಂಬ ಕಮೆಂಟ್‌ಗಳೂ ಬರುತ್ತಿವೆ.

ಬ್ಯಾನ್ ಬಿಸಿ:

 ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಆಕ್ಷನ್ ಮಾಡಿ ತೊರಿಸಿದ್ದರು. ರಶ್ಮಿಕಾ ಅವರ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ತನ್ನನ್ನು ಬೆಳೆಸಿದ ಸಂಸ್ಥೆಯನ್ನೇ ಒದ್ದು ಹೋದವಳು ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ರಶ್ಮಿಕಾ ಸಿನಿಮಾ ನೋಡಬಾರದು, ಕರ್ನಾಟಕದಲ್ಲಿ ರಶ್ಮಿಕಾ ಸಿನಿಮಾ ಬ್ಯಾನ್ ಮಾಡಬೇಕು, ಬಾಯ್ಕಟ್ ರಶ್ಮಿಕಾ ಎನ್ನುವ ಪೋಸ್ಟರ್ ಗಳು ಹರಿದಾಡುತ್ತಿವೆ. ರಕ್ಷಿತ್ ಶೆಟ್ಟಿ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಅವಮಾನಿಸಿದ್ದ ಬೆನ್ನಲ್ಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ರಶ್ಮಿಕಾ ಮಂದಣ್ಣಗೆ ಟಾಂಗ್ ಕೊಟ್ಟಿದ್ದರು. ಸಂದರ್ಶನದಲ್ಲಿ ರಿಷಬ್ ಶೆಟ್ಟಿ ರಶ್ಮಿಕಾ ಹೆಸರು ಹೇಳದೆ ಕೈಯಲ್ಲೇ ಆಕ್ಷನ್ ಮಾಡಿ ಅಂಥ ನಟಿಯರ ಜೊತೆ ಕೆಲಸ ಮಾಡಲ್ಲ ಎಂದು ಹೇಳಿದ್ದರು. ರಿಷಬ್ ಶೆಟ್ಟಿ ರಿಯಾಕ್ಷನ್ ಕೂಡ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿವಾದದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಬ್ಯಾನ್ ಎನ್ನುವ ಸುದ್ದಿ ಹರಿದಾಡುತ್ತಿದೆ. ಕನ್ನಡ ಸಿನಿಮಾರಂಗದಿಂದ ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಟಾಲಿವುಡ್ ಅಂಗಳದಲ್ಲಿ ಹೀಗೊಂದು ಗುಸುಗುಸು ಕೇಳಿಬರುತ್ತಿದೆ. 

Scroll to load tweet…