ಕಿರುತೆರೆಯಲ್ಲಿ ಹೊಯ್ಸಳನ ಅಬ್ಬರ: ಪ್ರಶ್ನೆಗೆ ಸರಿಯಾದ ಉತ್ತರ ನೀಡಿದವರಿಗೆ LED TV ಗಿಫ್ಟ್
ಆಗಸ್ಟ್ 13 ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಗುರುದೇವ್ ಹೊಯ್ಸಳ ಸಿನಿಮಾ ಪ್ರಸಾರವಾಗಲಿದೆ.
ಪ್ರೇಕ್ಷಕರ ಮನರಂಜನೆಗಾಗಿ ಸದಾಕಾಲ ಹೊಸತನವನ್ನು ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯದ "ಗುರುದೇವ್ ಹೊಯ್ಸಳ" ಸಿನಿಮಾವನ್ನು(Gurudev Hoysala movie) ಪ್ರಸಾರ ಮಾಡಲು ಸಜ್ಜಾಗಿದೆ. ಸ್ವಾತಂತ್ಯ ದಿನಾಚರಣೆಯ ಪ್ರಯುಕ್ತ ಈ ಸಿನಿಮಾವು ಕಿರುತೆರೆಯಲ್ಲಿ ರಾರಾಜಿಸಲಿದೆ. ಇದೇ ಆಗಸ್ಟ್ 13 ರಂದು ಭಾನುವಾರ ಸಂಜೆ 6 ಗಂಟೆಗೆ ಈ ಸಿನಿಮಾ ಪ್ರದರ್ಶನ ಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ(Star Suvarna) ವಾಹಿನಿಯು ಪ್ರೇಕ್ಷಕರಿಗಾಗಿ ಉಡುಗೊರೆಯನ್ನು ನೀಡಲು ಸಜ್ಜಾಗಿದೆ. 'ಗುರುದೇವ್ ಹೊಯ್ಸಳ' ಸಿನಿಮಾವನ್ನು ಟಿವಿಯಲ್ಲಿ ನೋಡಿ, ಅಲ್ಲಿ ಕೇಳುವ 2 ಸರಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರಿಗೆ 43 ಇಂಚಿನ LED TV ಯನ್ನು ಗಿಫ್ಟ್ ಆಗಿ ಕೊಡುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ರೈತರ ಪರ ಧ್ವನಿ ಎತ್ತಿದ 'ಕ್ಷೇತ್ರಪತಿ': ಖಡಕ್ ಡೈಲಾಗ್ ಹೊಡೆದು ಅಬ್ಬರಿಸಿದ ಗುಲ್ಟು ಹೀರೋ !