ರೈತರ ಪರ ಧ್ವನಿ ಎತ್ತಿದ 'ಕ್ಷೇತ್ರಪತಿ': ಖಡಕ್ ಡೈಲಾಗ್ ಹೊಡೆದು ಅಬ್ಬರಿಸಿದ ಗುಲ್ಟು ಹೀರೋ !
120 ಚಿತ್ರಮಂದಿರಗಳಲ್ಲಿ 'ಕ್ಷೇತ್ರಪತಿ' ದರ್ಬಾರ್!
ಶ್ರೀಕಾಂತ್ ಕಟಗಿ ಆಕ್ಷನ್ ಕಟ್ ಹೇಳಿರೋ ಸಿನಿಮಾ !
ಇಂಟ್ರೆಸ್ಟಿಂಗ್ ಆಗಿದೆ ಕ್ಷೇತ್ರಪತಿ ಸ್ಟೋರಿ ಲೈನ್ !
ಉದ್ದೇಶ ಚೆನ್ನಾಗಿದ್ರೆ ಯಾವುದೇ ಕೆಲಸ ಮಾಡಿದ್ರು ಅಲ್ಲಿ ಸಕ್ಸಸ್ ಪಕ್ಕಾ ನಮ್ಮದಾಗುತ್ತೆ. ಅಂತಹ ನಂಬಿಕೆಯಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡುತ್ತಾ ಬಂದ ಹುಡುಗ ಗುಲ್ಟು ಸಿನಿಮಾ ಖ್ಯಾತಿಯ ಹೀರೋ ನವೀನ್ ಶಂಕರ್(Naveen Shankar). ಇದೀಗ ತನ್ನ ಕ್ಷೇತ್ರಪತಿ ಸಿನಿಮಾ(Kshetrapathi movie) ಮೂಲಕ ರೈತ ಸಮುದಾಯವನ್ನ ಮತ್ತಷ್ಟು ಗಟ್ಟಿಗೊಳಿಸೋ ಅದ್ಭುತ ಕೆಲಸಕ್ಕೆ ಸಜ್ಜಾಗಿದ್ದಾರೆ ನವೀನ್ ಶಂಕರ್. ಇದೀಗ ರೈತರ ಕತೆಯ ಕ್ಷೇತ್ರಪತಿ ಸಿನಿಮಾದ ಟ್ರೈಲರ್(Trailer) ರಿಲೀಸ್ ಆಗಿದೆ. ನವೀನ್ ಶಂಕರ್ ಖಡಕ್ ಡೈಲಾಗ್ ಹೊಡೆದು ರೈತರನ್ನ ಎಚ್ಚರಿಸಿದ್ದಾರೆ. ಕ್ಷೇತ್ರಪತಿ ಸಿನಿಮಾದ ಟ್ರೈಲರ್ ಸಿನಿ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆ ತರುವಲ್ಲಿ ಸಕ್ಸಸ್ ಆಗುತ್ತಿದೆ. ಯಾಕಂದ್ರೆ ಈ ಟ್ರೈಲರ್ ನೋಡಿದ ಪ್ರತಿಯೊಬ್ಬರ ಮನ ಗೆಲ್ಲುತ್ತಿದೆ. ನವೀನ್ ಶಂಕರ್‌ಗೆ ಜೋಡಿಯಾಗಿ ಕೆಜಿಎಫ್‌ನ ರಾಕಿ ತಾಯಿ ಅರ್ಚನಾ ಜೋಯಿಸ್ ನಟಿಸಿದ್ದಾರೆ. ಆಗಸ್ಟ್ 18ಕ್ಕೆ 120 ಚಿತ್ರಮಂದಿರಗಳಲ್ಲಿ 'ಕ್ಷೇತ್ರಪತಿ' ದರ್ಬಾರ್ ಶುರುವಾಗಲಿದೆ. ಉತ್ತರ ಕರ್ನಾಟಕ ಜವಾರಿ ಭಾಷೆಯಲ್ಲಿ ಸಿದ್ಧವಾಗಿರೋ ಈ ಚಿತ್ರಕ್ಕೆ ಶ್ರೀಕಾಂತ್ ಕಟಗಿ ಆಕ್ಷನ್ ಕಟ್ ಹೇಳಿದ್ದಾರೆ. ರವಿ ಬಸ್ರೂರು ಸಿನಿಮಾಗೆ ಮ್ಯೂಸಿಕ್ ಮಾಡಿದ್ದು ಕ್ಷೇತ್ರಪತಿ ಮತ್ತೊಂದು ಹೈಲೆಟ್.
ಇದನ್ನೂ ವೀಕ್ಷಿಸಿ: 'ಅಭಿನಯ ಚಕ್ರವರ್ತಿ' ಹುಟ್ಟುಹಬ್ಬಕ್ಕೆ ಫ್ಯಾನ್ಸ್ ರೆಡಿ:'ಹೆಬ್ಬುಲಿ' ಬರ್ತ್‌ಡೇಗೆ ಕಾದಿಗೆ ಸರ್ಪ್ರೈಸ್..!