Naveen Shankar: "ಕ್ಷೇತ್ರಪತಿ" ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭಕೋರಿದ ಡಾಲಿ!

"ಗುಲ್ಟು" ಮೂಲಕ ತಮ್ಮ ಅಮೋಘ ಅಭಿನಯದಿಂದ ಕನ್ನಡಿಗರ ಮನಗೆದ್ದ ನಟ ನವೀನ್ ಶಂಕರ್. ಪ್ರಸ್ತುತ ಇವರ ನಟನೆಯ "ಕ್ಷೇತ್ರಪತಿ" ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡಾಲಿ ಧನಂಜಯ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದರು.

Share this Video
  • FB
  • Linkdin
  • Whatsapp

"ಗುಲ್ಟು" ಮೂಲಕ ತಮ್ಮ ಅಮೋಘ ಅಭಿನಯದಿಂದ ಕನ್ನಡಿಗರ ಮನಗೆದ್ದ ನಟ ನವೀನ್ ಶಂಕರ್. ಪ್ರಸ್ತುತ ಇವರ ನಟನೆಯ "ಕ್ಷೇತ್ರಪತಿ" ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡಾಲಿ ಧನಂಜಯ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದರು. ನಿರ್ದೇಶಕ ಸಿಂಪಲ್ ಸುನಿ ಸಹ ಕಾರ್ಯಕ್ರಮಕ್ಕೆ ಆಗಮಿಸಿ ಹಾರೈಸಿದರು. ನಾನು "ಜಯನಗರ 4ನೇ ಬ್ಲಾಕ್" ಕಿರುಚಿತ್ರ ಮಾಡುತ್ತಿದ್ದಾಗ ನವೀನ್, ನಾನು ಭೇಟಿಯಾಗುತ್ತಿದ್ದೆವು. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ನವೀನ್ ಇಷ್ಟು ಬೆಳದಿರುವುದು ನಿಜಕ್ಕೂ ಹೆಮ್ಮೆ. ಚಿತ್ರದಲ್ಲಿ ನವೀನ್ ಬಸವ ಎಂಬ ಪಾತ್ರ ಮಾಡಿದ್ದಾರೆ. ಈ ಬಸವನಿಗೆ ನಮ್ಮ ಕ್ರಾಂತಿಕಾರಿ ಬಸವಣ್ಣನವರು ಆದರ್ಶವಾಗಲಿ. ಚಿತ್ರ ಜಯಭೇರಿ ಬಾರಿಸಲಿ ಎಂದು ಹಾರೈಸಿದ ಡಾಲಿ, ನಾನು ಹಾಗೂ ನವೀನ್ ಶಂಕರ್ "ಹೊಯ್ಸಳ" ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿರುವುದಾಗಿ ತಿಳಿಸಿದರು. ಅತಿಥಿಯಾಗಿ ಆಗಮಿಸಿದ್ದ ಗಣೇಶ್ ಪಾಪಣ್ಣ ಚಿತ್ರತಂಡಕ್ಕೆ ಶುಭ ಕೋರಿದರು. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video