Asianet Suvarna News Asianet Suvarna News

ಮಲೆನಾಡಿನ ಅದ್ಭುತ ಕತೆ 'ಕೆರೆಬೇಟೆ' ಟ್ರೈಲರ್ ರಿಲೀಸ್: ಮಲೆನಾಡ ಸೊಗಡಿನ ವಿಭಿನ್ನ ಸಂಸ್ಕೃತಿ ಅನಾವರಣ!

ಕೆಲವೊಂದು ಸಿನಿಮಾಗಳೇ ಹಾಗೆ ಸ್ಯಾಂಪಲ್ಸ್​ಗಳಿಂದಲೇ ಕನ್ನಡ ಸಿನಿ ಪ್ರೇಕ್ಷಕರಲ್ಲಿ ದೊಡ್ಡ ಕುತೂಹಲ ಮೂಡಿಸುತ್ತವೆ. ಈ ಸಿನಿಮಾನ ನೋಡ್ಲೇ ಬೇಕು ಅನ್ನೋ ಆಸೆಯನ್ನ ಹುಟ್ಟಿಸುತ್ತವೆ. ಈಗ ಅಂತದ್ದೇ ಕಂಟೆಂಟ್ ಸಿನಿಮಾ ಜೆಸ್ಟ್ ಟೀಸರ್​ ಟೈಟಲ್​ ಫಸ್ಟ್​​ ಲುಕ್​​ನಿಂದ ಕನ್ನಡದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕೆಲವೊಂದು ಸಿನಿಮಾಗಳೇ ಹಾಗೆ ಸ್ಯಾಂಪಲ್ಸ್​ಗಳಿಂದಲೇ ಕನ್ನಡ ಸಿನಿ ಪ್ರೇಕ್ಷಕರಲ್ಲಿ ದೊಡ್ಡ ಕುತೂಹಲ ಮೂಡಿಸುತ್ತವೆ. ಈ ಸಿನಿಮಾನ ನೋಡ್ಲೇ ಬೇಕು ಅನ್ನೋ ಆಸೆಯನ್ನ ಹುಟ್ಟಿಸುತ್ತವೆ. ಈಗ ಅಂತದ್ದೇ ಕಂಟೆಂಟ್ ಸಿನಿಮಾ ಜೆಸ್ಟ್ ಟೀಸರ್​ ಟೈಟಲ್​ ಫಸ್ಟ್​​ ಲುಕ್​​ನಿಂದ ಕನ್ನಡದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆ ಸಿನಿಮಾವೇ ಕೆರೆಬೇಟೆ. ಕನ್ನಡದಲ್ಲಿ ಕಾಂತಾರ ಸಿನಿಮಾ ಬಂದಿತ್ತು. ತುಳುನಾಡ ದೈವಾರಾಧನೆಯನ್ನ ಈ ಸಿನಿಮಾ ತೋರಿಸಿತ್ತು. ಈಗ ಮೆಲೆನಾಡಿದ ಆಚರಣೆ ಕೆರೆ ಬೇಟೆಯ ಕತೆಯನ್ನನ ತೆರೆ ಮೇಲೆ ತರುತ್ತಿದೆ ಕೆರೆ ಬೇಟೆ ಸಿನಿಮಾ. ಅಪ್ಪಟ ಮಲೆನಾಡ ಸ್ಟೋರಿಯ ಕೆರೆ ಬೇಟೆ ಟ್ರೈಲರ್​ ರಿಲೀಸ್ ಆಗಿದೆ. 'ಕೆರೆಬೇಟೆ' ಮಲೆನಾಡು ಭಾಗದ ಮೀನು ಬೇಟೆಯಾಡುವ ಒಂದು ಪದ್ಧತಿ. 

ಮಲೆನಾಡಿನ ಈ ವಿಭಿನ್ನ ಸಂಸ್ಕೃತಿಯನ್ನು ಮೊದಲ ಬಾರಿಗೆ ತೆರೆಮೇಲೆ ತರುತ್ತಿದ್ದಾರೆ ನಿರ್ದೇಶಕ ರಾಜ್‌ಗುರು. ನಾಯಕನಾಗಿ ಗೌರಿಶಂಕರ್ ಎಸ್‌ಆರ್‌ಜಿ  ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಗಮನ ಸೆಳೆಯುತ್ತಿದೆ. ಅಂಟಿಗೆ ಪಿಂಟಿಗೆ ಶೈಲಿಯಲ್ಲೇ ಟ್ರೈಲರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು. ರಿಲೀಸ್ ಗೂ ಮೊದಲು ಬೆಂಗಳೂರಿನ ಮನೆ ಮನೆಗೆ ಹೋಗಿ ತಮ್ಮ ಸಿನಿಮಾ ರಿಲೀಸ್ ಆಗುತ್ತಿದೆ ಹಾರೈಸಿ ಎಂದು ದೀಪ ಹಿಡಿದು ಕೇಳಿಕೊಂಡಿದ್ದಾರೆ. ಬಳಿಕ ನಾಯಕ ಗೌರಿ ಶಂಕರ್ ಅವರ ಪುತ್ರಿ ಈಶ್ವರಿ ಮನ ಟ್ರೈಲರ್ ರಿಲೀಸ್ ​ಮಾಡಿದ್ದಾಳೆ. ಕೆರೆ ಬೇಟೆ ಜೊತೆಗೆ ಹಳ್ಳಿ ಜನರ ಕಿತ್ತಾಟ, ಹೊಡೆದಾಟ ಸೇರಿದಂತೆ ಈ ಪುಟ್ಟ ಟ್ರೈಲರ್‌ನಲ್ಲೇ ಮಲೆನಾಡಿನ ಸಂಪೂರ್ಣ ಚಿತ್ರಣ ನೋಡಬಹುದು. 

ಈ ಟ್ರೈಲರ್​​ ರಿಲೀಸ್ ಆದ ಮೇಲೆ ಸಿನಿಮಾದ ಮೇಲೆ ಬೇರೆಯದ್ದೇ ಕ್ರೇಜ್ ಕ್ರಿಯೆಟ್ ಆಗಿದೆ. ಕೆರೆ ಬೇಟೆ ನಾಯಕ ಗೌರಿ ಶಂಕರ್ ಅದ್ಭುತವಾಗಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ತನ್ನ ನಟನೆಯ ಝಲಕ್ ತೋರಿಸಿದ್ದಾರೆ. ನಾಯಕಿ ಬಿಂಧು ಶಿವರಾಮ್ ಕೂಡ ತನ್ನ ಪಾತ್ರಕ್ಕೆ ಜೀವತುಂಬಿದ್ದಾರೆ. ಇನ್ನುಳಿದಂತೆ ಸಿನಿಮಾದಲ್ಲಿ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಇದೆ. ಚಿತ್ರಕ್ಕೆ ಗಗನ್ ಬದೇರಿಯಾ ಸಂಗೀತ  ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾಗೆ ನಾಯಕ ಗೌರಿಶಕಂಕರ್ ಅವರ ಜನಮನ ಸಿನಿಮಾಸ್ ಬ್ಯಾನರ್‌ನಲ್ಲಿ ಅವರ ಸಹೋದರ ಜೈಶಂಕರ್ ಪಟೇಲ್ ಬಂಡವಾಳ ಹೂಡಿದ್ದಾರೆ. ಸದ್ಯ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಕೆರೆಬೇಟಿ ಮುಂದಿನ ತಿಂಗಳು ಮಾರ್ಚ್ 15ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.