Asianet Suvarna News Asianet Suvarna News

ಒರಿಜಿನಲ್ ಗ್ಯಾಂಗ್‌ಸ್ಟರ್ ಅಬ್ಬರಕ್ಕೆ ಬೆಚ್ಚಿದ ಮೌಳಿ ! 'ಘೋಸ್ಟ್' ಟ್ರೈಲರ್ ರಿಲೀಸ್ ಮಾಡ್ತಾರೆ ಜಕ್ಕಣ್ಣ..!

ಒರಿಜಿನಲ್ ಗ್ಯಾಂಗ್‌ಸ್ಟರ್ ಅಬ್ಬರಕ್ಕೆ ಬೆಚ್ಚಿದ ಮೌಳಿ !
'ಘೋಸ್ಟ್' ಟ್ರೈಲರ್ ರಿಲೀಸ್ ಮಾಡ್ತಾರೆ ಜಕ್ಕಣ್ಣ..!
ತಮಿಳುನ 'ಘೋಸ್ಟ್'ಗೆ ಕ್ಯಾಪ್ಟನ್ ಮಿಲ್ಲರ್ ಬೆಂಬಲ!
ಮಲೆಯಾಳಂ ಘೋಸ್ಟ್‌ಗೆ ಪೃಥ್ವಿರಾಜ್ ಸಪೋರ್ಟ್..!

ಸೆಂಚುರಿ ಸ್ಟಾರ್ ಘೋಸ್ಟ್ ಈಗ ಸೌತ್ ಸಿನಿ ರಂಗವನ್ನ ಕಾಡುತ್ತಿದೆ. ಯಾವ್ ಮಟ್ಟಕ್ಕೆ ಅಂದ್ರೆ ಭಾರತೀಯ ಚಿತ್ರರಂಗದ ಜಗ್ಗಣ್ಣ ಎಸ್ಎಸ್ ರಾಜಮೌಳಿಯನ್ನೇ ಭಯ ಪಡಿಸ್ತಿದೆ. ಹೀಗಾಗಿ ಈಗ ಮೌಳಿ ಘೋಸ್ಟ್ ಪರ ನಿಂತಿದ್ದಾರೆ. ಕನ್ನಡದ ಒರಿಜಿನಲ್ ಗ್ಯಾಂಗ್ಸ್ಟಾರ್ ಶಿವಣ್ಣನ ಘೋಸ್ಟ್(Ghost) ಸಿನಿಮಾದ ತೆಲುಗು ಟ್ರೈಲರ್ಅನ್ನ ರಾಜಮೌಳಿ(S S Rajamouli) ರಿಲೀಸ್ ಮಾಡ್ತಿದ್ದಾರೆ. ರಾಜಮೌಳಿಗೆ ಶಿವರಾಜ್ ಕುಮಾರ್ (Shivaraj kumar) ಫೇವರೆಟ್. ಎಸ್.ಎಸ್ ರಾಜಮೌಳಿ ಶಿವಣ್ಣನಿಗೆ ಯಾವಾಗ್ಲೂ ಸೆಲ್ಯೂಟ್ ಹೊಡಿತ್ತಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಆರ್‌ಆರ್‌ಆರ್‌ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಶಿವಣ್ಣನ ಬಗ್ಗೆ ಮೌಳಿ ಆಡಿದ್ದ ಮಾತುಳೇ ಸಾಕ್ಷಿ. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್‌ರ ಘೋಸ್ಟ್ ಸೌತ್‌ನ ನ್ಯೂ ಮ್ಯೂಜಿಕ್. ಕನ್ನಡ, ತೆಲುಗು ಮಲೆಯಾಳಂ ತಮಿಳು ಭಾಷೆಯಲ್ಲಿ ಘೋಸ್ಟ್ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ತಮಿಳು ಭಾಷೆಯ ಘೋಸ್ಟ್ ಟ್ರೈಲರ್ಅನ್ನ ಕ್ಯಾಪ್ಟನ್ ಮಿಲ್ಲರ್ ಧನುಷ್ ರಿಲೀಸ್ ಮಾಡುತ್ತಿದ್ದಾರೆ. ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಧನುಷ್ ಜೊತೆ ಸ್ಕ್ರೀನ್ ಶೇರ್ ಮಾಡಿರೋ ಶಿವಣ್ಣನ ಘೋಸ್ಟ್ ಗಾಗಿ ಧನುಷ್ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಯೂನಿಫಾರ್ಮ್ ಬದಲು ಸೇನಾ ಸಮವಸ್ತ್ರ..! ಪುಟೀನ್ ಪುಂಡಾಟಕ್ಕೆ ಮಕ್ಕಳೇ ಟಾರ್ಗೆಟ್..!

Video Top Stories