ಸ್ಯಾಂಡಲ್‌ವುಡ್‌ನಲ್ಲಿ 'ಗರಡಿ' ಘರ್ಜನೆ: ಕುಸ್ತಿ ಪೈಲ್ವಾನ್ ಆದ ಯಶಸ್ ಸೂರ್ಯ!
ಸ್ಯಾಂಡಲ್‌ವುಡ್ ಶೈನಿಂಗ್ ಅಂತ ಹೇಳೋದು ಇದಕ್ಕೆ ನೋಡಿ. ಕನ್ನಡದಲ್ಲಿ ಮತ್ತೊಂದು ಖಡಕ್ ಸಿನಿಮಾ ಬರ್ತಿದೆ. ಮುಂಗಾರು ಮಳೆಯಂಥಾ ಮುದ್ದಾದ ಪ್ರೇಮ ಕಾವ್ಯವನ್ನು ತೆರೆ ಮೇಲೆ ತಂದ ಭಟ್ಟರೆ ಇದೀಗ ಕುಸ್ತಿ ಅಖಾಡಕ್ಕಿಳಿದು ಗರಡಿ ಆಡಿಸ್ತಿದ್ದಾರೆ. ಗರಡಿ ಗರ್ಜನೆಗೆ ನಾಯಕ ಯಶಸ್ ಸೂರ್ಯ ಇದೇ ಮೊದಲ ಬಾರಿಗೆ ಇಂಥಾ ಖಡಕ್ ರೋಲ್ ಮಾಡಿದ್ದು ಇನ್ಮುಂದೆ ಗರಡಿ ಸೂರ್ಯ ಎಂದೇ ಕರೆಸಿಕೊಳ್ಳೋದು ಗ್ಯಾರೆಂಟಿ. ಗರಡಿ ಪಾಳಯದಲ್ಲಿ ಕುಸ್ತಿ ಕೋಚ್ ಆಗಿ ಕೌರವ ಬಿ.ಸಿ. ಪಾಟೀಲ್ ಮೀಸೆ ತಿರುವುತ್ತಿದ್ದಾರೆ.
ಸಿನಿಮಾ ಮೇಕಿಂಗ್ ದೃಶ್ಯಗಳು ಈಗಾಗಲೇ ಜನರ ಆಕರ್ಷಣೆಗೆ ಕಾರಣವಾಗಿವೆ. ಸಾಂಪ್ರದಾಯಿಕ ಕುಸ್ತಿಯ ಕೇಂದ್ರಿಕೃತ ಕಥೆಯುಳ್ಳ ಗರಡಿ ಸಿನಿಮಾ ನವೆಂಬರ್ 10 ರಂದು ಬಿಡುಗಡೆಯಾಗಲಿದೆ. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಈ ಸುದ್ದಿ ಅಧಿಕೃತವಾಗಿ ಬಹಿರಂಗವಾಗಿದೆ. ಯಶಸ್ ಸೂರ್ಯಗೆ(Yashas Surya) ನಾಯಕಿಯಾಗಿದ್ದಾರೆ ಸೋನಲ್ ಮೊಂಟೆರೊ(Sonal Montero). ಆದ್ರೆ ಈ ಸಿನಿಮಾದಲ್ಲೊಂದು ಮಸ್ತ್ ಸಾಂಗ್ ಇದ್ದು ಎಲ್ರೂ ಈಗಾಗಲೇ ಈ ಹಾಡಿಗೆ ಕುಣಿತ ಹಾಕ್ತಿದ್ದಾರೆ. ಗ್ರಾಮೀಣ ಬದುಕಿನ ಬ್ಯಾಕ್ರಾಡ್ರಾಪಲ್ಲಿ ಯೋಗರಾಜ್ ಭಟ್ಟರ ಗರಡಿ ಕತೆ ನಡೆಯಲಿದ್ದು, ಸಿನಿಮಾದಲ್ಲಿ ಹಲವು ಕುತೂಹಲ ಘಟ್ಟಗಳಿವೆ. ವನಜಾ ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹೌಸ್ (Kaurava Production House)ಮತ್ತು ಸೌಮ್ಯಾ ಫಿಲಂಸ್ ನಿರ್ಮಿಸಿರುವ ಗರಡಿ ಚಿತ್ರದಲ್ಲಿ ರವಿಶಂಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರಂಜನ್ ಬಾಬು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದರೆ, ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಭಟ್ಟರ ಗರಡಿ ಸಿನಿಮಾ ನೋಡಿದ್ಮೇಲೆ ಪ್ರೇಕ್ಷಕ ಹೇಳ್ಬೋದು ಹೊಡಿರೆಲೆ ಹಲಗಿ ಹಾಕಲೆ ಎಡರು ಸ್ಟೆಪ್ಪು ಅಂತ. ನಾಯಕ ನಟ ಯಶಸ್ ಸೂರ್ಯಗೆ ಇದು ಬಿಗ್ ಚಾಲೆಂಜಿಂಗ್ ರೋಲ್ ಆಗಿದ್ದು ಗರಡಿ ಗರ್ಜನೆ ನವೆಂಬರ್ನಲ್ಲಿ ಥಿಯೇಟರ್ನಲ್ಲಿ ಮೊಳಗಲಿದೆ.
ಇದನ್ನೂ ವೀಕ್ಷಿಸಿ: ಫ್ರೆಶ್ ಲವ್ ಸ್ಟೋರಿ ಸಿನಿಮಾ 'ಬಾನದಾರಿಯಲಿ': 4ನೇ ಭಾರಿ ಜತೆಯಾದ ಗಣೇಶ್-ಪ್ರೀತಂ..!