Asianet Suvarna News Asianet Suvarna News

ಫ್ರೆಶ್ ಲವ್ ಸ್ಟೋರಿ ಸಿನಿಮಾ 'ಬಾನದಾರಿಯಲಿ': 4ನೇ ಭಾರಿ ಜತೆಯಾದ ಗಣೇಶ್-ಪ್ರೀತಂ..!

ಈ ವಾರದಿಂದ ಪ್ರೇಮಿಗಳಿಗೆ ಹಬ್ಬ. ಕೈ ಕೈ ಹಿಡಿದು ಮರ ಸುತ್ತೋ ಬದ್ಲು ಥಿಯೇಟರ್‌ಗೆ ಹೋಗಿ ಫ್ರೆಶ್ ಲವ್ ಸ್ಟೋರಿ ನೋಡಿ ಫೀಲ್‌ದ ಲವ್ ಅಂತ ತನ್ನ ಪ್ರೀತಿಯನ್ನ ಫೀಲ್ ಮಾಡ್ಬಹುದು. ಯಾಕಂದ್ರೆ ಸ್ಯಾಂಡಲ್ವುಡ್ ಬೆಳ್ಳಿತೆರೆ ಮೇಲೆ ಗೋಲ್ಡನ್ ಸ್ಟಾರ್ ಗಣೇಶ್ರ ಫ್ರೆಶ್ ಲವ್ ಸ್ಟೋರಿ ಬಾನದಾರಿಯಲಿ ಸಿನಿಮಾ ರಿಲೀಸ್ ಆಗ್ತಿದೆ. 
 

ಗೋಲ್ಡನ್ ಸ್ಟಾರ್ ಗಣೇಶ್‌ಗೆ(Ganesha) ಲಕ್ಕಿ ಡೈರೆಕ್ಟರ್  ಪ್ರೀತಂ ಗುಬ್ಬಿ. ಮುಂಗಾರು ಮಳೆ ಸಿನಿಮಾದಲ್ಲಿ ಚಿತ್ರಕತೆ ಬರೆದಿದ್ದ ಪ್ರೀತಂ ಗುಬ್ಬಿ ಗಣಿಗೆ ಮಳೆಯ ಜೊತೆಯಲಿ ಸಿನಿಮಾದಲ್ಲಿ ಡೈರೆಕ್ಟರ್ ಆಗಿ ಜೊತೆಗಾಗಿದ್ರು. ಈ ಸಿನಿಮಾಗೆ ಬೆಸ್ಟ್ ಫಿಲ್ಮ್ ಹಾಗೂ ಬೆಸ್ಟ್ ಆಕ್ಟರ್ ಅಂತ ಎರಡು ಫಿಲ್ಮ್ ಫೇರ್ ಅವಾರ್ಡ್ ಕೂಡ ಸಿಕ್ಕಿತ್ತು. ಅದಾದ ಬಳಿಕ ದಿಲ್ ರಂಗೀಲ, 99 ಸಿನಿಮಾ ಮಾಡಿದ್ರು. ಈಗ ನಾಲ್ಕನೇ ಭಾರಿ ಗಣೇಶ್ ಹಾಗು ಪ್ರೀತಂ ಗುಬ್ಬಿ ಜೊತೆಗಾಗಿ ಬಾನದಾರಿಯಲಿ ಹೊರಟಿದ್ಟಾರೆ. ಬಾನ ದಾರಿಯಲಿ(Banadariyalli movie) ಸಿನಿಮಾ ರಶಸ್ಗಳು ಇಂಟ್ರಸ್ಟಿಂಗ್ ಎನಿಸುತ್ತಿದೆ. ಅರ್ಜುನ್ ಜನ್ಯಾ ಮ್ಯೂಸಿಕ್‌ನ ಹಾಡುಗಳು ಹಿಟ್ ಆಗಿವೆ. ಟ್ರೈಲರ್ ಗಮನ ಸೆಳೆಯುತ್ತಿದೆ. ತನ್ನ ಪ್ರೇಯಸಿ ಕನಸು ಈಡೇರಿಸೋಕೆ ಕೀನ್ಯಾಗೆ ಹೋಗೋ ಹುಡುಗ ಏನೆಲ್ಲಾ ಮಾಡ್ತಾರೆ ಅನ್ನೋ ಟ್ರಾವೆಲಿಂಗ್ ಸ್ಟೋರಿ ಬಾನದಾರಿಯಲಿ. ಗೋಲ್ಡನ್ ಸ್ಟಾರ್ ಸಿನಿಮಾಗಳಲ್ಲಿ ಹೀರೋಯಿಸ್ಸ್ ಹೆಚ್ಚು ಮೇಳೈಸ್ತಾರೆ. ಕ್ಯೂಟ್ ಹುಡುಗನಿಗೆ ಕ್ಯೂಟ್ ಗರ್ಲ್  ಪೇರ್ ಆಗಿರ್ತಾರೆ. ಈಗ ಬಾನ ದಾರಿಯಲಿ ಸಿನಿಮಾದಲ್ಲೂ ಗಣಿಗೆ ಕರ್ನಾಟಕ ಕ್ರಶ್ ರುಕ್ಮಿಣಿ ವಸಂತಾ ಜೋಡಿ. ಈ ಪೇರ್ ನೋಡ್ತಿದ್ರೆ ವಾವ್ಹ್ ಅನ್ನಿಸುತ್ತೆ. 

ಇದನ್ನೂ ವೀಕ್ಷಿಸಿ:  ಪಾರ್ವತಮ್ಮನ ಗಂಡನಾಗಿ..ಹೇಗಿರ್ತಾರೆ ಸಿಎಂ..? ಸಿದ್ದು ಭೇಟಿಗೆ ಬಂದ ವಿಶೇಷ ಅತಿಥಿ ಯಾರು ಗೊತ್ತಾ?

Video Top Stories