ಟ್ರೆಂಡಿಂಗ್‌ನಲ್ಲಿ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ..! ನಟ ಗಣೇಶ್ ಸಿನಿ ಖರಿಯರ್‌ನ ಬಿಗ್ ಬಜೆಟ್ ಚಿತ್ರ..!

ಇದೀಗ ಸೂಪರ್ ಸ್ಟಾರ್ ಸಿನಿಮಾಗಳು ತೆರೆ ಕಾಣಲು ಕ್ಯೂನಲ್ಲಿವೆ. ಅದ್ರಲ್ಲಿ ಈಗ ಸೌಂಡ್ ಮಾಡುತ್ತಿರೋ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ. 

First Published Jul 9, 2024, 9:43 AM IST | Last Updated Jul 9, 2024, 9:44 AM IST


ಕೃಷ್ಣಂ ಪ್ರಣಯ ಸಖಿ. ಇದೇ ಆಗಸ್ಟ್ 15 ರಂದು ಸಿನಿಮಾ ವರ್ಲ್ಡ್‌ ವೈಡ್ ರಿಲೀಸ್ ಆಗ್ತಿದೆ. ಆ ಸುದ್ದಿ ಕೇಳಿನೇ ಗೋಲ್ಡನ್ ಸ್ಟಾರ್‌ ಗಣೇಶ್‌(Ganesh) ಫ್ಯಾನ್ಸ್ ಜೊತೆಗೆ ಗಾಂಧಿನಗರ ಮಂದಿ ಫುಲ್ ಖುಷ್ ಆಗಿದ್ದಾರೆ. ಅದಕ್ಕೆ ತಕ್ಕಂತೆ ಕೃಷ್ಣಂ ಪ್ರಣಯ ಸಖಿ (Krishnam Pranaya Sakhi) ಕ್ರಿಯೇಟ್ ಮಾಡಿರೋ ಹೈಪ್. ಸಾಮಾನ್ಯವಾಗಿ ಸಿನಿಮಾ ಹಾಡು ಅಂತಾ ಬಂದಾಗ, ಚಿತ್ರದ ಯಾವುದೋ ಒಂದೋ ಎರಡೋ ಸಾಂಗ್ ಕ್ಲಿಕ್ ಆಗೋದು ಕಾಮನ್. ಬಟ್ ಈ ಸಿನಿಮಾ ಮ್ಯಾಟ್ರೇ ಬೇರೆ. ಇಲ್ಲಿಯ ವರೆಗೂ ರಿಲೀಸ್ ಆಗಿರೋದು ಜಸ್ಟ್ ಎರಡೇ ಎರಡು ಸಾಂಗ್. ಆದ್ರು ಟ್ರೆಂಡ್ ಸೃಷ್ಟಿಸಿವೆ. ಇಂಡಿಯನ್ ಎಂಟರ್‌ಟೈನ್‌ಮೆಂಟ್ ಟ್ರೆಂಡಿಂಗ್ ಲಿಸ್ಟ್‌ನಲ್ಲಿ ಇಂದಿಗೂ ಟಾಪ್ ಪ್ಲೇಸ್‌ನಲ್ಲಿವೆ. ಹೀಗಾಗಿ  ಬೆಂಗಳೂರಿನಲ್ಲಿ ಸದ್ದಿಗೋಷ್ಟಿ ಮಾಡಿದ ಕೃಷ್ಣಂ ಪ್ರಣಯ ಸಖಿ ಚಿತ್ರತಂಡ ಸಕ್ಸಸ್ ಹಿಂದಿನ ಗುಟ್ಟು ಬಿಚ್ಚಿಟ್ಟಿದ್ದಾರೆ. ಹಾಡುಗಳು(Songs) ಸಿನಿಮಾದ ಬೆಸ್ಟ್ ಇನ್ವಿಟೇಷನ್. ಹಾಡು ಕ್ಲಿಕ್ ಆದ್ವು ಅಂದ್ರೆ ಆ ಸಿನಿಮಾ ಹಿಟ್ ಅನ್ನೋ ನಂಬಿಕೆ ಇದೆ. ಹಾಗಾಗಿಯೇ ಗಣಿ ಟೀಂ ಫುಲ್ ಹ್ಯಾಪಿ ಮೂಡ್‌ನಲ್ಲಿದ್ದಾರೆ. ಈ ಸಿನಿಮಾ ಗೆದ್ದೇ ಗೆಲ್ಲುತ್ತೆ.. ಆ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗೆಲುವಿನ ರಹದಾರಿ ಹಾಕಲಿದೆ ಅನ್ನೋ ಕಾನ್ಫಿಡೆನ್ಸ್‌ನಲ್ಲಿದ್ದಾರೆ. ಶ್ರೀನಿವಾಸ್ ರಾಜು ನಿರ್ದೇಶನದ ಕೃಷ್ಣಂ ಪ್ರಣಯ ಸಖಿ. ಲವ್, ಕಾಮಿಡಿ ಕಂ ಕಂಪ್ಲಿಟ್ ಫ್ಯಾಮಿಲಿ ಎಂಟರ್‌ಟೈನ್. ಹೀಗಾಗಿ ಈ ಸಿನಿಮಾವನ್ನ ಕುಟುಂಬ ಸಮೇತರಾಗಿ ಕುಳಿತು ನೋಡಬಹುದು.

ಇದನ್ನೂ ವೀಕ್ಷಿಸಿ:  ಜೈಲು ಸೇರಿ ಸೊರಗಿ ಹೋದ ನಟ ದರ್ಶನ್..! ಕಿಲ್ಲಿಂಗ್ ಸ್ಟಾರ್ ದೇಹಕ್ಕೆ ಒಗ್ಗುತ್ತಿಲ್ಲ ಜೈಲೂಟ!

Video Top Stories