Asianet Suvarna News Asianet Suvarna News
breaking news image

ಜೈಲು ಸೇರಿ ಸೊರಗಿ ಹೋದ ನಟ ದರ್ಶನ್..! ಕಿಲ್ಲಿಂಗ್ ಸ್ಟಾರ್ ದೇಹಕ್ಕೆ ಒಗ್ಗುತ್ತಿಲ್ಲ ಜೈಲೂಟ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದೇ ಸೇರಿದ್ದು, ದಿನಕ್ಕೊಂದು ಸುದ್ದಿಗಳು ಬರ್ತಾನೆ ಇವೆ. ಜೈಲು ಸೇರಿ ತಿಂಗಳಾಗಿರೋ ದರ್ಶನ್ ಪೂರ್ತಿ ಸೊರಗಿ ಹೋಗಿದ್ದಾರೆ.

ದರ್ಶನ್ ಹೇಳಿ ಕೇಳಿ ಕನ್ನಡದ ಟಾಪ್ ನಟ ಆಗಿದ್ದವರು. ಸಿನಿ ಜೀವನಕ್ಕೆ ಬರೋದಕ್ಕು ಮೊದ್ಲು ದರ್ಶನ್ (Darshan)ರದ್ದು ಮಧ್ಯಮ ವರ್ಗದ ಜೀವನ. ಆದ್ರೆ ಸ್ಟಾರ್ ಯಾವಾಗ ಆದ್ರೋ ನೋಡಿ, ಅವರ ಬದುಕೆ ಬದಲಾಯ್ತು. ಹಿಂದೆ ಹತ್ತಾರು ಹುಡುಗರು ಬಂದ್ರು, ಕೈಗೆ ಕಾಲಿಗೆ ಆಳು ಕಾಳು ಸಿಕ್ಕಿದ್ರು. ಜೈಕಾರ ಹಾಕೋಕೆ ದೊಡ್ಡ ಗ್ಯಾಂಗ್ ಹುಟ್ಟಿಕೊಳ್ತು. ದೊಡ್ಮನೆಗೆ ಪೈಪೋಟಿ ಕೊಟ್ಟು ಕಾರನ್ನ ಇಳಿಸೋಕೆ ಶುರು ಮಾಡಿದ್ರು. ದರ್ಶನ್ ಕಾರು ಕೇಜ್ ಎಷ್ಟಿತ್ತು ಅನ್ನೋದಕ್ಕೆ ಮನೆ ಮುಂದೆ ನಿಂತಿದ್ದ ಕಾರಿನ ಸಾಲೇ ಸಾಕ್ಷಿ. ಇನ್ನು ದರ್ಶನ್‌ ಬಗ್ಗೆ ಹೇಳೋದೇ ಬೇಕಿಲ್ಲ ಬಿಡಿ. ದರ್ಶನ್ ಬಟ್ಟೆಗೆ ಖರ್ಚು ಲಕ್ಷದ ಲೆಕ್ಕದಲ್ಲೆ ಇರುತ್ತಿತ್ತು. ಪ್ರತಿ ದಿನ ಬಾಡೂಟವೇ ಬೇಕಿತ್ತು. ಒಂದ್ ತರ ಸ್ವರ್ಗದಲ್ಲಿ ಎಲ್ಲವೂ ಸಿಗುತ್ತೆ ಅಂತಾರಲ್ಲ ಹಾಗಿತ್ತು ದರ್ಶನ್ ಬದುಕು. ಮನಸ್ಸು ಬಯಸಿದ್ದನ್ನೆಲ್ಲಾ ಪಡೆದುಕೊಳ್ಳುತ್ತಿದ್ರು. ಬಿರಿಯಾನಿ ಎಣ್ಣೆ ಇಲ್ಲದೇನೆ ರಾತ್ರಿ ಕಳೆಯುತ್ತಿರಲಿಲ್ಲ. ಚಿಕನ್ ಮಟನ್ ಮೊಟ್ಟೆ, ಹಣ್ಣು ಡ್ರೈಫ್ರೂಟ್ಸ್ ಇಲ್ಲದ ದಿನಗಳನ್ನ ದರ್ಶನ್ ನೋಡಿರಲಿಲ್ಲ. ಹಾಗಾಗಿನೇ ದರ್ಶನ್ನ ದೇಹಬಲ ಕೂಡ ಗಜನಂತಿತ್ತು. ಆದ್ರೀಗ ಜೈಲು(Jail) ಸೇರಿರೋ ದರ್ಶನ್‌ಗೆ ಅದೆಲ್ಲಾ ಈಗ ಮರೀಚಿಕೆ ಆಗಿದೆ. ಚಿಕನ್, ಮಟನ್, ಮೊಟ್ಟೆ, ಹಣ್ಣು, ಡ್ರೈ ಪ್ರೂಟ್ಸ್ ಸೇವಿಸುತ್ತಿದ್ದ ದರ್ಶನ್‌ಗೆ ಜೈಲಿನಲ್ಲಿ ಅನ್ನ ಸಾಂಬಾರ್, ಚಪಾತಿ, ಮುದ್ದೆ ಮಜ್ಜಿಗೆ ಸಿಗುತ್ತಿದೆ. ದರ್ಶನ್ ದಿನದಿಂದ ದಿನಕ್ಕೆ ವೀಕ್ ಆಗುತ್ತಿದ್ದಾರಂತೆ. ಚಿಕ್ಕನ್ ಸಿಕ್ಕಿದ್ರು ಅದು ವಾರಕ್ಕೊಮ್ಮೆ ಮಾತ್ರ. ಅದು ಕೂಡ ಗ್ರಾಂ ಲೆಕ್ಕದಲ್ಲಿ.. ಪ್ರತಿ ದಿನ ಕೆ.ಜಿ ಲೆಕ್ಕದಲ್ಲಿ ಚಿಕನ್ ಮಟನ್ ತಿನ್ನುತ್ತಿದ್ದ ದರ್ಶನ್ಗೆ ವಾರಕ್ಕೊಮ್ಮೆ ಕೊಡೋ 180 ಗ್ರಾಂ ಚಿಕಲ್ ಯಾವ್ ಲೆಕ್ಕ ಹೇಳಿ.

ಇದನ್ನೂ ವೀಕ್ಷಿಸಿ:  ದೈವದ ಚಿತ್ರ ಕಾಂತಾರ ಚಾಪ್ಟರ್1ಗೆ ವರುಣ ದೇವನ ಕಾಟ..! ಮಳೆಯಿಂದ ಶೂಟಿಂಗ್ ನಿಲ್ಲಿಸಿದ್ರು ರಿಷಬ್ ಶೆಟ್ಟಿ..!

Video Top Stories