Asianet Suvarna News Asianet Suvarna News

30 ಸಾವಿರ ರೂಪಾಯಿ ಬ್ಯಾಗ್ ಧರಿಸಿದ್ದೇ ತಪ್ಪಾಯ್ತಾ? : ಅಕ್ಷಯ್ ಕುಮಾರ್ ಬ್ಯಾಗ್‌ನಿಂದಲೂ ಟ್ರೋಲ್ !

ದುಂದುವೆಚ್ಚ ಮಾಡ್ತಾರಂತೆ ಅಕ್ಷಯ್ ಕುಮಾರ್
ಸೋಲಿನ ಸುಳಿಯಲ್ಲಿ ಸಿಕ್ಕಾಗ ತಲೆಗೊಂದು ಕಾಮೆಂಟ್
ಬ್ಯಾಗ್ ವಿಚಾರದಲ್ಲಿ ಈಗ ಟ್ರೋಲ್ ಆಗ್ತಿದ್ದಾರೆ ಅಕ್ಷಯ್ 

ಬಾಲಿವುಡ್ ನಟ-ನಟಿಯರಿಗೆ ದುಬಾರಿ ವಸ್ತುಗಳನ್ನು ಸಂಗ್ರಹಿಸುವ ಕ್ರೇಜ್ ಇದ್ದೇ ಇರುತ್ತದೆ. ಇದೀಗ ನಟ ಅಕ್ಷಯ್ ಕುಮಾರ್‌ ಕೂಡ ಹೆಚ್ಚಾಗಿ ದುಬಾರಿ ವಸ್ತುಗಳನ್ನೇ ಬಳಸುತ್ತಿದ್ದು, ಬ್ಯಾಗ್‌ವೊಂದರಿಂದ ಅವರು ಸಖತ್‌ ಟ್ರೋಲ್ ಆಗುತ್ತಿದ್ದಾರೆ. ಅಕ್ಷಯ್ ಧರಿಸಿದ್ದ ಎಲ್ಇಡಿ ಲೈಟ್ ಬ್ಯಾಗ್ ಭಾರೀ ವೈರಲ್ ಆಗಿದೆ. ಒಂದು ಡ್ರ್ಯಾಗನ್ ಐ ಎಲ್ಇಡಿ ಲೈಟ್ ಬ್ಯಾಗ್ ಹಾಕಿಕೊಂಡು ಟ್ರಿಪ್​ಗೆ ಹೋಗಿದ್ದ ಅಕ್ಷಯ್ ಕುಮಾರ್, ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಅಕ್ಷಯ್ ಕುಮಾರ್ ಹಿಂದೆ ಬ್ಲ್ಯಾಕ್ ಕಲರ್ ಡ್ರ್ಯಾಗನ್ ಕಣ್ಣಿನ ಎಲ್ಇಡಿ ಲೈಟ್ ಬ್ಯಾಗ್ ಇತ್ತು. ಬ್ಯಾಗ್‌ನಲ್ಲಿದ್ದ ಕಣ್ಣುಗಳು ನಿಜವಾದ ಕಣ್ಣಿನಂತೆ ಕಾಣುತ್ತಿದ್ದವು. 

ಇದನ್ನೂ ವೀಕ್ಷಿಸಿ: ರವಿಚಂದ್ರನ್ ಹುಟ್ಟುಹಬ್ಬಕ್ಕೆ ಖುಷ್ಬೂ ಸರ್ಪೈಸ್: ನಟ ಧನುಷ್ ಹೊಸಲುಕ್ ಫುಲ್ ಟ್ರೋಲ್!