Divya Suresh: ಫೆ.11ಕ್ಕೆ ಬಿಗ್​ ಬಾಸ್​ ದಿವ್ಯಾ ಸುರೇಶ್​ ನಟನೆಯ 'ರೌಡಿ ಬೇಬಿ' ರಿಲೀಸ್‌

ಬಿಗ್‌ಬಾಸ್‌ ಖ್ಯಾತಿಯ ದಿವ್ಯಾ ಸುರೇಶ್‌ ನಟನೆಯ ‘ರೌಡಿ ಬೇಬಿ’ ಸಿನಿಮಾ ಫೆ.11ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಎಸ್‌ಎಸ್‌ ರವಿಗೌಡ ಹಾಗೂ ದಿವ್ಯಾ ಸುರೇಶ್‌ ಜೋಡಿಯಾಗಿ ನಟಿಸಿರುವ ಈ ಚಿತ್ರವನ್ನು ಕೃಷ್ಣ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೌಡ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದರು.

Share this Video
  • FB
  • Linkdin
  • Whatsapp

ಬಿಗ್‌ಬಾಸ್‌ ಖ್ಯಾತಿಯ ದಿವ್ಯಾ ಸುರೇಶ್‌ (Divya Suresh) ನಟನೆಯ ‘ರೌಡಿ ಬೇಬಿ’ (Rowdy Baby) ಸಿನಿಮಾ ಫೆ.11ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಎಸ್‌ಎಸ್‌ ರವಿಗೌಡ (SS Ravigowda) ಹಾಗೂ ದಿವ್ಯಾ ಸುರೇಶ್‌ ಜೋಡಿಯಾಗಿ ನಟಿಸಿರುವ ಈ ಚಿತ್ರವನ್ನು ಕೃಷ್ಣ (Krshna) ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೌಡ ಚಿತ್ರದ ಟ್ರೇಲರ್‌ (Trailer) ಬಿಡುಗಡೆ ಮಾಡಿದರು. ‘ಈ ಚಿತ್ರದ ಟೈಟಲ್‌ ರೋಲ್‌ನಲ್ಲೇ ನಾನು ನಟಿಸುತ್ತಿದ್ದೇನೆ. ಕಾಲೇಜಿನಲ್ಲಿರುವ ಒಂದು ಗ್ಯಾಂಗ್‌ನ ಲೀಡರ್‌ ಆಗಿರುತ್ತೇನೆ. ಒಂದು ಒಳ್ಳೆಯ ಕತೆಯಲ್ಲಿ ನಟಿಸಿದ ಖುಷಿ ಇದೆ’ ಎಂದು ದಿವ್ಯಾ ಸುರೇಶ್‌ ಹೇಳಿಕೊಂಡರು.

Kiccha Sudeep: ಅಭಿಮಾನಿ ಕೊಟ್ಟ ಗಿಫ್ಟ್ ನೋಡಿ ಸುದೀಪ್ ಭಾವುಕರಾಗಿದ್ದೇಕೆ?

‘ಕತೆ ತುಂಬಾ ಚೆನ್ನಾಗಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗುತ್ತದೆಂಬ ನಂಬಿಕೆ ಇದೆ’ ಎಂದರು ಚಿತ್ರದ ನಾಯಕ ರವಿಗೌಡ. ವಾರ್​ ಫೂಟ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಸಂಜಯ್‌ ಗೌಡ, ರಘು ಗೌಡ, ವಿತರಕ ಸುರೇಶ್‌ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು. ಹೀರ್​ ಕೌರ್​, ಅಮಿತ್​ ವಿ., ಕೆಂಪೇಗೌಡ, ಅರುಣಾ ಬಾಲರಾಜ್​, ಶ್ರೀನಾಥ್​ ವಸಿಷ್ಠ, ಅವಿನಾಶ್​ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಚಿತ್ರಕ್ಕೆ ಕೃಷ್ಣ ಆಕ್ಷನ್ ಕಟ್ ಹೇಳಿದ್ದು, ಅರ್ಮಾನ್‌​ ಮೆರುಗು ಸಂಗೀತ ನೀಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video