Asianet Suvarna News Asianet Suvarna News
breaking news image

Kshetrapati: 'ಕೆಲವೊಮ್ಮೆ ರಾಕ್ಷಸರ ಆಶೀರ್ವಾದ ಬೇಕಾಗುತ್ತದೆ': ಸಿಂಪಲ್ ಸುನಿ

"ಗುಲ್ಟು" ಮೂಲಕ ತಮ್ಮ ಅಮೋಘ ಅಭಿನಯದಿಂದ ಕನ್ನಡಿಗರ ಮನಗೆದ್ದ ನಟ ನವೀನ್ ಶಂಕರ್. ಪ್ರಸ್ತುತ ಇವರ ನಟನೆಯ "ಕ್ಷೇತ್ರಪತಿ" ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಿರ್ದೇಶಕ ಸಿಂಪಲ್ ಸುನಿ ಕಾರ್ಯಕ್ರಮಕ್ಕೆ ಆಗಮಿಸಿ ಹಾರೈಸಿದರು.

"ಗುಲ್ಟು" ಮೂಲಕ ತಮ್ಮ ಅಮೋಘ ಅಭಿನಯದಿಂದ ಕನ್ನಡಿಗರ ಮನಗೆದ್ದ ನಟ ನವೀನ್ ಶಂಕರ್. ಪ್ರಸ್ತುತ ಇವರ ನಟನೆಯ "ಕ್ಷೇತ್ರಪತಿ" ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡಾಲಿ ಧನಂಜಯ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದರು. ನಿರ್ದೇಶಕ ಸಿಂಪಲ್ ಸುನಿ ಸಹ ಕಾರ್ಯಕ್ರಮಕ್ಕೆ ಆಗಮಿಸಿ ಹಾರೈಸಿದರು. 'ನನಗೆ ಬಹಳ ದಿನಗಳಿಂದ ನವೀನ್ ಪರಿಚಯ ಇದೆ. ಇವತ್ತು ಅವರ ಹುಟ್ಟುಹಬ್ಬ ಕೂಡ ಅಲ್ಲದೇ ಈ ದಿನವೇ ಚಿತ್ರದ ಪೋಸ್ಟರ್ ಲಾಂಚ್ ಆಗಿದೆ. ಎಲ್ಲಾ ಕೆಲಸಗಳಿಗೆ ದೇವರ ಆಶೀರ್ವಾದ ಬೇಕು. ಕೆಲವೊಮ್ಮೆ ರಾಕ್ಷಸರ ಆಶೀರ್ವಾದ ಬೇಕಾಗುತ್ತದೆ. ಹಾಗಾಗಿ ನಮ್ಮ ನಟ ರಾಕ್ಷಸ ಡಾಲಿ ಧನಂಜಯ ಬಂದಿದ್ದಾರೆ. ಅವರ ಆಶೀರ್ವಾದ ಚಿತ್ರತಂಡಕ್ಕೆ ಇರಲಿ ಎಂದರು ಸಿಂಪಲ್ ಸುನಿ.

Naveen Shankar: 'ಧನಂಜಯ್ ಹಾಗೂ ನನ್ನ ಸ್ನೇಹ ತುಂಬಾ ವರ್ಷಗಳದ್ದು, ಅವರು ನೀಡುತ್ತಿರುವ ಸಹಕಾರ ಅಪಾರ'

ನಾನು ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. "ಗುಲ್ಟು" ಸಿನಿಮಾ ನೋಡಿ ಅಭಿಮಾನಿಯಾದೆ. ನಾನು ಯಾರ ಬಳಿಯೂ ಸಹ ನಿರ್ದೇಶಕನಾಗಿ ಕೆಲಸ ಮಾಡಿಲ್ಲ. ಇದು ಮೊದಲ ಚಿತ್ರ. ರೈತನಿಗೆ ಸಂಸ್ಕತದಲ್ಲಿ  21 ಹೆಸರುಗಳಿದೆ. ಅದರಲ್ಲಿ "ಕ್ಷೇತ್ರಪತಿ" ಸಹ ಒಂದು. "ರೈತ"ನನ್ನು  "ಕ್ಷೇತ್ರಪತಿ" ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದೊಂದು ಅಪ್ಪ-ಮಗನ ಭಾಂದವ್ಯದ ಚಿತ್ರವೂ ಹೌದು. ಗದಗಿನ ತಿಮ್ಮಾಪುರ ಎಂಬ ಊರಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ. ಸಹಕಾರ ನೀಡಿದ್ದ ಅಲ್ಲಿನ ಜನತೆಗೆ ಅಭಿನಂದನೆ. ನಿರ್ಮಾಣಕ್ಕೆ ಜೊತೆಯಾಗಿರುವ ಸ್ನೇಹಿತರಿಗೂ ಧನ್ಯವಾದ ಎಂದರು ನಿರ್ದೇಶಕ ಶ್ರೀಕಾಂತ್ ಕಟಗಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories