ರಂಜಿಸೋಕೆ ಬರ್ತಿದ್ದಾರೆ ಸ್ಯಾಂಡಲ್‌ವುಡ್‌ ಬಿಗ್ ಡ್ಯಾಡಿ: ಶಿವಣ್ಣ ಹುಟ್ಟು ಹಬ್ಬಕ್ಕೆ 'ಘೋಸ್ಟ್' ಟೀಸರ್ ಕೊಡುಗೆ..!

ತಣ್ಣಗಾದ ಚಿತ್ರರಂಗದಲ್ಲಿ ಹತ್ತಲಿದೆ 'ಘೋಷ್ಟ್' ಬೆಂಕಿ ಕಿಡಿ!
ಸಂತೋಷ್ ಚಿತ್ರಮಂದಿರದಲ್ಲಿ 'ಘೋಸ್ಟ್' ಟೀಸರ್ ರಿಲೀಸ್!
2 ನಿಮಿಷದ 'ಘೋಸ್ಟ್' ಟೀಸರ್‌ನಲ್ಲಿ ಏನೆಲ್ಲಾ ಇರುತ್ತೆ ..?

First Published Jun 30, 2023, 1:31 PM IST | Last Updated Jun 30, 2023, 1:31 PM IST

ಈ ಬಾರಿ ಶಿವಣ್ಣನ ಹುಟ್ಟುಹಬ್ಬಕ್ಕೆ 'ಘೋಸ್ಟ್' ಟೀಂ ಬೊಂಬಾಟ್ ಗಿಫ್ಟ್ ಕೊಡೋಕೆ ಪ್ಲಾನ್ ಮಾಡಿದೆ. ಕಳೆದ ವರ್ಷ ಶಿವಣ್ಣ ಜನ್ಮದಿನ ಆಚರಣೆಗೆ ಬ್ರೇಕ್ ಹಾಕಿದ್ರು. ಆದ್ರೆ ಈ ಬಾರಿ ಅಭಿಮಾನಿಗಳ ಸಂಭ್ರಮ ಡಬಲ್ ಮಾಡೋಕೆ 'ಘೋಸ್ಟ್' ಶಿವಣ್ಣನ ದರ್ಶನ ಆಗಲಿದೆ. ಈಗಾಗಲೇ 'ಘೋಸ್ಟ್' ಟೀಸರ್ ಕಟ್ ಮಾಡಿದ್ದು, ಎರಡು ನಿಮಿಷದ ಟೀಸರ್ ಬರಲಿದೆ. ಜುಲೈ 12ರಂದು ಕೆ. ಜಿ ರಸ್ತೆಯ ಸಂತೋಷ್ ಥಿಯೇಟರ್‌ನಲ್ಲಿ 'ಘೋಸ್ಟ್' ಟೀಸರ್ ರಿಲೀಸ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಟೀಸರ್ ಸಿದ್ಧವಾಗಿದೆ. ಡಾ. ಶಿವರಾಜ್‌ಕುಮಾರ್ ಜೊತೆಗೆ ಸತ್ಯ ಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಜಯರಾಂ, ಅನುಪಮ್ ಕೇರ್ ಸೇರಿದಂತೆ ದೊಡ್ಡ ತಾರಾಗಣ ಇದೆ. 48 ಗಂಟೆಗಳಲ್ಲಿ ನಡೆಯುವ ಕಥೆ ಘೋಸ್ಟ್ ಎನ್ನಲಾಗಿದೆ. ಈ ವರ್ಷ ಶಿವಣ್ಣ ನಟನೆಯ ಯಾವುದೇ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. 'ಘೋಸ್ಟ್' ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಚಾಲ್ತಿಯಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. 

ಇದನ್ನೂ ವೀಕ್ಷಿಸಿ: ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿ, ಹಣ ಕೂಡ ಅಕೌಂಟ್‌ಗೆ ಬರಲಿದೆ: ಮುನಿಯಪ್ಪ