Dil Kush Movie: ದಿಲ್ ಖುಷ್ ಸಿನಿಮಾ ಮೆಚ್ಚಿದ ಕನ್ನಡ ಸಿನಿ ಪ್ರೇಕ್ಷಕ..! 25ನೇ ದಿನದತ್ತ ಮುನ್ನುಗ್ಗುತ್ತಿದೆ ಈ ಲವ್ ಸ್ಟೋರಿ..!

ದಿಲ್ ಖುಷ್ ಚಿತ್ರ ನೋಡಿ ದಿಲ್ ಖುಷ್ ಎಂದ ಪ್ರೇಕ್ಷಕ!
ಜಯಲಕ್ಷ್ಮಿ ಪ್ರವೀಣ್, ಪ್ರಭಾಸ್ ಶೇಖರ್ ನಿರ್ಮಾಣ.!
ರಂಜಿತ್, ಸ್ಪಂದನಾ ಸೋಮಣ್ಣ ನಟನೆಯ ಚಿತ್ರ..!
 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್(Sandalwood) ಸಿನಿ ಪ್ರೇಮಿಗಳು ಈಗ ದಿಲ್ ಖುಷ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ತೆರೆ ಮೇಲೆ ಬಂದಿರೋ ದಿಲ್ ಖುಷ್ ಸಿನಿಮಾ(Dil Kush Movie). ಈ ಹಿಂದೆ ನಿರ್ದೇಶಕ ಸಿಂಪಲ್ ಸುನಿ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಪ್ರಮೋದ್ ಜಯ ನಿರ್ದೇಶನದ 'ದಿಲ್ ಖುಷ್' ಸಿನಿಮಾ ಮಾರ್ಚ್ 22ರಂದು ರಾಜ್ಯಾದ್ಯಂತ ತೆರೆ ಕಂಡಿತ್ತು. ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದು, ಈಗ 25 ದಿನ ಪೂರೈಸುವತ್ತ ಮುನ್ನುಗ್ಗುತ್ತಿದೆ. ದಿಲ್ ಖುಷ್ ಸಿನಿಮಾದಲ್ಲಿ ರಂಗಭೂಮಿ, ಧಾರಾವಾಹಿಗಳಲ್ಲಿ ನಟಿಸಿ ಅನುಭವ ಹೊಂದಿರುವ ರಂಜಿತ್(Ranjit) ಹೀರೋ ಆಗಿದ್ದಾರೆ. ಇದು ರಂಜಿತ್ಗೆ ಮೊದಲ ಸಿನಿಮಾ. ಚಿತ್ರದಲ್ಲಿ ನಾಯಕಿಯಾಗಿ ಸ್ಪಂದನಾ ಸೋಮಣ್ಣ ಅಭಿನಯಿಸಿದ್ದಾರೆ. ಧರ್ಮಣ್ಣ ಕಡೂರು, ರಘು ರಾಮನಕೊಪ್ಪ, ಅರುಣಾ ಬಾಲರಾಜ್, ರಂಗಾಯಣ ರಘುರಂತಹ ದೊಡ್ಡ ತಾರಾಗಣ ಸಿನಿಮಾದಲ್ಲಿದ್ದಾರೆ. ಜಯಪ್ರಭಾ ಕಲರ್ ಫ್ರೇಮ್ಸ್ ಬ್ಯಾನರ್ ಅಡಿಯಲ್ಲಿ ಜಯಲಕ್ಷ್ಮಿ ಪ್ರವೀಣ್ ಮತ್ತು ಪ್ರಭಾಸ್ ಶೇಖರ್ ದಿಲ್ ಖುಷ್ ಸಿನಿಮಾ ನಿರ್ಮಿಸಿದ್ದು, ಸಿನಿಮಾ ಈಗ ಜನ ಮೆಚ್ಚುಗೆ ಪಡೆಯುತ್ತಿದೆ.

ಇದನ್ನೂ ವೀಕ್ಷಿಸಿ: Ajith Kumar: ಶೂಟಿಂಗ್ ವೇಳೆ ತಲಾ ಅಜಿಯ್ ಕಾರು ಅಪಘಾತ..! ಕ್ಷಣ ಮಾತ್ರದಲ್ಲಿ ಪ್ರಾಣಾಪಾಯದಿಂದ ಪಾರದ ನಟ..!

Related Video