Ajith Kumar: ಶೂಟಿಂಗ್ ವೇಳೆ ತಲಾ ಅಜಿಯ್ ಕಾರು ಅಪಘಾತ..! ಕ್ಷಣ ಮಾತ್ರದಲ್ಲಿ ಪ್ರಾಣಾಪಾಯದಿಂದ ಪಾರದ ನಟ..!

ಸಿನಿಮಾ ನೋಡೋಕೆ ಚಂದ. ಸಿನಿಮಾ ನೋಡಿದ್ರೆ ಫುಲ್ ಎಂಟರ್‌ಟೈನ್‌ಮೆಂಟ್‌ ಸಿಗುತ್ತೆ ನಿಜ. ಆದ್ರೆ ಅದರ ಚಿತ್ರೀಕರಣದ ಹಿಂದೆ ಎಷ್ಟೆಲ್ಲಾ ಶ್ರಮ ಇರುತ್ತೆ.? ಎಷ್ಟೆಲ್ಲಾ ರಿಸ್ಕ್, ಚಾಲೇಂಜ್ ಇರುತ್ತೆ ಅನ್ನೋದು ಗೊತ್ತಾತ್ರೆ ನೀವು ಒಮ್ಮೆ ಅಬ್ಬಬ್ಬಾ ಅನ್ನೋದು ನಿಜ.
 

Share this Video
  • FB
  • Linkdin
  • Whatsapp

ರಿಸ್ಕ್ ಮತ್ತು ಚಾಲೇಂಜ್ ತಗೊಂಡು ಸಿನಿಮಾದಲ್ಲಿ ನಟಿಸೋದರಲ್ಲಿ ತಮಿಳು ನಟ ತಲಾ ಅಜಿತ್(Ajith Kumar) ಎತ್ತಿದ ಕೈ. ಆದ್ರೆ ಈ ರಿಸ್ಕ್ ಕೂಡ ಒಮ್ಮೊಮ್ಮೆ ಪ್ರಾಣಕ್ಕೆ ಕುತ್ತು ತಂದಿದ್ದೂ ಇದೆ. ಈಗ ಅದೇ ಪ್ರಾಣಾಪಾಯದಿಂದ ಪಾರಾದ ಘಟನೆ ತಲಾ ಅಜಿತ್ ಜೀವನದಲ್ಲೂ ನಡೆದಿದೆ. ತಮಿಳು ಚಿತ್ರರಂಗದ ಸ್ಟಾರ್ ಐಕಾನ್ ಅಜಿತ್ ಕುಮಾರ್. ಅಜಿತ್ ಡ್ಯೂಪ್ ಬಳಸದೆ ಹಲವು ಸಿನಿಮಾಗಳಲ್ಲಿ ಆ್ಯಕ್ಷನ್ ಮಾಡಿದ್ದಾರೆ. ಚೇಸಿಂಗ್ ಮತ್ತು ಸಾಹಸ ದೃಶ್ಯಗಳಲ್ಲಿ ತಮ್ಮದೇ ಆದ ಸಾಹಸ ಪ್ರದರ್ಶನ ಮಾಡೋದ್ರಲ್ಲಿ ಅಜಿತ್ ಒಂದ್ ತರಾ ಫೈಯರ್. ಹೀಗೆ ಶೂಟಿಂಗ್ ವೇಳೆ ಸ್ಟಂಟ್ ಮಾಡುವಾಗ ತಲಾ ಅಜಿತ್ ಕಾರು ಅಪಘಾತವಾಗಿದೆ(Car Accident). ನಟ ಅಜಿತ್ ಕ್ಷಣ ಮಾತ್ರದಲ್ಲಿ ಪ್ರಾಣಾಪಾಯದಿಂದ ಪಾರಾಗದ್ದಾರೆ. ನಟ ಅಜಿತ್ ‘ವಿದಾಮುಯಾರ್ಚಿ’ ಸಿನಿಮಾದ(Vidaamuyarchi) ಚಿತ್ರೀಕರಣದಲ್ಲಿ ಭಾಗಿ ಆಗಿದ್ರು. ಈ ವೇಳೆ ಕಾರು ಚೇಸಿಂಗ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಅಜಿತ್ ಜತೆ ನಟ ಆರವ್ ಕೂಡ ಇದ್ರು. ಆಗ ಸ್ಪೀಡಾಗಿ ಹೋಗುತ್ತಿದ್ದ ಕಾರು ಸ್ಕಿಡ್ ಆಗಿ ಮೂರು ಪಲ್ಟಿ ಆಗಿದೆ. ಈ ಘಟನೆಯಿಂದ ಅಜಿತ್ಗೆ ಸಣ್ಣಪುಟ್ಟ ಗಾಯಗಳಾಗಿದ್ವು.ಈ ಘಟನೆ ನಡೆದಿದ್ದು ಕಳೆದ ವರ್ಷ. ಈ ಕಾರು ಅಪಘಾತದ ವೀಡಿಯೋವನ್ನ ಅಜಿತ್ರ ಮ್ಯಾನೇಜರ್ ಸುರೇಶ್ ಚಂದ್ರ ಈಗ ಬಹಿರಂಗಪಡಿಸಿದ್ದಾರೆ.ನಟ ಅಜಿತ್ ವಲಿಮೈ ಸಿನಿಮಾ ಶೂಟಿಂಗ್ ವೇಳೆಯೂ ದೊಡ್ಡ ಅಪಘಾತದಿಂದ ಪಾರಾಗಿದ್ರು. ವಲಿಮೈ ಚಿತ್ರೀಕರಣದಲ್ಲಿ ಬೈಕ್ ಚೇಸ್ ಸೀನ್ ಇತ್ತು. ಅಗ ಬೈಕ್ ಏರಿ ಬಂದಿದ್ದ ಅಜಿತ್ ಸ್ಕಿಡ್ ಆಗಿ ಹೈವೇ ರಸ್ತೆಯಲ್ಲೇ ನೆಲಕಪ್ಪಳಿಸಿದ್ರು. ಈ ಘಟನೆಯಿಂದ ಅಜಿತ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ವು.

ಇದನ್ನೂ ವೀಕ್ಷಿಸಿ:  Weekly-Horoscope: ಈ ರಾಶಿಯವರಿಗೆ ವಾರಾದಿಯಲ್ಲಿ ಹೆಚ್ಚಿನ ಲಾಭವಿದ್ದು, ತಂದೆ-ಮಕ್ಕಳಲ್ಲಿ ಮನಸ್ತಾಪ ಬರಲಿದೆ

Related Video