Dhruva Sarja : ಮನೆ ಮನೆಗೆ ಉಚಿತ ನೀರು ಕೊಟ್ಟ ಧ್ರುವ ಸರ್ಜಾ..! ನಿಜ ಜೀವನದಲ್ಲೂ ಹೀರೋ ಆದ ಆ್ಯಕ್ಷನ್ ಪ್ರಿನ್ಸ್..!

ಬಿಸಿಲ ಬೇಗೆಯಿಂದ ಕಂಗೆಟ್ಟಿರುವ ಬೆಂಗಳೂರು ಜನತೆ.!
ನೀರಿಗಾಗಿ ಹಾಹಾಕಾರ.. ಶುರುವಾಗಿದೆ ಜಲಕಂಟಕ..!
ಟ್ಯಾಂಕರ್ ಮೂಲಕ ನೀರನ್ನೇ ಧಾರೆ ಎರೆದ ಧ್ರುವ !

Share this Video
  • FB
  • Linkdin
  • Whatsapp

ಬಿರು ಬಿಸಿಲು..ಎಲ್ಲೆಲ್ಲೂ ಬರಗಾಲ..ನೀರಿಗೆ ಹಾಹಾಕಾರ.. ಇದು ನಮ್ಮ ರಾಜ್ಯದಲ್ಲಿ ಸದ್ಯದ ಸ್ಥಿತಿ. ಅದರಲ್ಲೂ ಮಾಯಾನಗರಿ ಸಿಲಿಕಾನ್ ಸಿಟಿ ಜನ ಕೂಡ ಕುಡಿಯುವ ನೀರಿಗಾಗಿ(Water) ತಡಕಾಡುತ್ತಿದ್ದಾರೆ. ಹೀಗಿರುವಾಗ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಜನರ ಸಂಕಷ್ಟದ ಜತೆ ನಿಂತಿದ್ದಾರೆ. ಬಡ ಜನರ ನೀರಿನ ದಾಹ ತೀರಿಸೋಕೆ ನಟ ಧ್ರುವ ಸರ್ಜಾ ಬಂದಿದ್ದಾರೆ. ಬೆಂಗಳೂರಿನಲ್ಲಿ(Bengaluru) 2 ತಿಂಗಳಿನಿಂದ ನೀರಿನ ಬವಣೆ ಶುರುವಾಗಿದೆ. ಇದನ್ನು ಗಮನಿಸಿದ ನಟ ಧ್ರುವ ಸರ್ಜಾ ಕೆಂಗೇರಿ(Kengeri) ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ ಉಚಿತ ಟ್ಯಾಂಕರ್ (Tanker) ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ನೀರಿನ ಅಭಾವದಿಂದ ಕಂಗೆಟ್ಟಿರುವ ಜನರಿಗಾಗಿ ಅಖಿಲ ಕರ್ನಾಟಕ ಧ್ರುವ ಸರ್ಜಾ ಅಭಿಮಾನಿಗಳ ಸಂಘ ನೀರು ಸರಬರಾಜು ಮಾಡುತ್ತಿದೆ. ಧ್ರುವ ಸರ್ಜಾ ನೀರು ದಾರೆ ಎರೆದಿದ್ದಕ್ಕೆ ಬೆಂಗಳೂರು ಮಂದಿ ಧ್ರುವನ ಸಮಾಜಸೇವೆಯನ್ನ ಕೊಂಡಾಡುತ್ತಿದ್ದಾರೆ. ರೀಲ್ ಮೇಲೆ ಹೀರೋ ಆಗೋದಷ್ಟೇ ಅಲ್ಲ ರೀಯಲ್ ಲೈಫ್ನಲ್ಲೂ ಧ್ರುವನ ಹಾಗೆ ಹೀರೋ ಆಗಬೇಕು ಎನ್ನುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Kerebete: ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡುತ್ತಿದೆ ಕೆರೆಬೇಟೆ ಕಥೆ..! ಸಿನಿಮಾ ಟ್ರೈಲರ್ ನೋಡಿ ಮೆಚ್ಚಿದ ಬಾದ್ ಷಾ ಸುದೀಪ್!

Related Video