Asianet Suvarna News Asianet Suvarna News

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್‌ಗೆ ಗುಡ್ ನ್ಯೂಸ್! ಫಿಕ್ಸ್ ಆಯ್ತು ಮಾರ್ಟಿನ್ ಸಿನಿಮಾ ರಿಲೀಸ್ ಡೇಟ್..!

ನಟ ಧ್ರುವ ಸರ್ಜಾ ಹಾಗು ನಿರ್ದೇಶಕ ಎಪಿ ಅರ್ಜುನ್ ಒಟ್ಟಿಗೆ ಸೇರಿ ಹೊಸ ಹೆಜ್ಜೆಯೊಂದನ್ನ ಇಟ್ಟಿದ್ರು. ಅದುವೇ ಮಾರ್ಟಿನ್ ಅನ್ನೋ ಮಾಸ್ ಸಿನಿಮಾ. 

ಮಾರ್ಟಿನ್ ಸಿನಿಮಾಗಾಗಿ ಈ ಕಿಲಾಡಿ ಜೋಡಿ ಶ್ರಮಿಸಿದ್ದು ಬರೋಬ್ಬರಿ ಮೂರು ವರ್ಷಗಳು. ಈ ಸಿನಿಮಾಗಾಗಿ ಧ್ರುವ ಸರ್ಜಾ(Dhruva Sarja) ಫ್ಯಾನ್ಸ್ ಕಾದಿದ್ದು ಅಷ್ಟಿಷ್ಟಲ್ಲ. ಯಾಕಂದ್ರೆ ಮಾರ್ಟಿನ್(Martin movie) ರಿಲೀಸ್ ಡೇಟ್ ಫಿಕ್ಸ್ ಆಗುತ್ತಿತ್ತು, ಮತ್ತೆ ಮುಂದೆ ಹೋಗುತ್ತಿತ್ತು, ಈಗ ಕೊನೆಗೂ ಧ್ರುವ ಸರ್ಜಾ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮಾರ್ಟಿನ್ ರಿಲೀಸ್ ಡೇಟ್ ಅನ್ನ ಫೈನಲ್ ಮಾಡಲಾಗಿದೆ. ಥಿಯೇಟರ್‌ಗೆ ಜನ ಬರುತ್ತಿಲ್ಲ. ಸೂಪರ್‌ಸ್ಟಾರ್‌ಗಳ ಸಿನಿಮಾ ರಿಲೀಸ್ ಆಗಿಲ್ಲ ಅನ್ನೋ ಕೂಗು ಕೇಳುತ್ತಿರುವಾಗಲೇ ಸಿನಿಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಕಳೆದ ಕೆಲವು ತಿಂಗಳಿನಿಂದ ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್' ಯಾವಾಗ ರಿಲೀಸ್ ಆಗುತ್ತೋ ಅಂತ ಅವರ ಫ್ಯಾನ್ಸ್ ಎದುರು ನೋಡುತ್ತಿದ್ದರು. ಆ ನಿರೀಕ್ಷೆಗೀಗ ತೆರೆ ಬಿದ್ದಿದೆ. ಈ ಪ್ಯಾನ್ ಇಂಡಿಯಾ ಮಾರ್ಟಿನ್ ದಸರಾ ಹಬ್ಬದಲ್ಲಿ ಧಮಾಕ ಮಾಡೋದಕ್ಕೆ ಸಜ್ಜಾಗಿದೆ. ಅಕ್ಟೋಬರ್ 11ಕ್ಕೆ ಮಾರ್ಟಿನ್ ದೇಶಾದ್ಯಂತ ಐದು ಭಾಷೆಯಲ್ಲಿ ತೆರೆ ಕಾಣುತ್ತಿದೆ. ನಟ ಧ್ರುವ ಸರ್ಜಾ, ನಿರ್ದೇಶಕ ಎ.ಪಿ ಅರ್ಜುನ್(AP Arjun), ನಿರ್ಮಾಪಕ ಉದಯ್ ಮೆಹ್ತಾ, ಸಂಗೀತ ನಿರ್ದೇಶಕ ರವಿ ಬಸ್ರೂರು ಸೇರಿದಂತೆ ಇಡೀ ತಂಡ ಒಟ್ಟಿಗೆ ಸೇರಿ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮಾಡಿ ಮಾರ್ಟಿನ್ ದಿನಾಂಕವನ್ನ ಘೋಷಣೆ ಮಾಡಿದ್ದಾರೆ. ಇನ್ಮುಂದೆ 'ಮಾರ್ಟಿನ್' ಸಿನಿಮಾದ ತುಣುಕು, ಟೀಸರ್, ಸೀನ್ ಅಥವಾ ಸಾಂಗ್ ಯಾವುದನ್ನು ನೋಡುವುದಕ್ಕೆ ಜನ ಇಷ್ಟ ಪಡುತ್ತಾರೋ ಅದನ್ನೇ ರಿಲೀಸ್ ಮಾಡೋದಕ್ಕೆ ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ವೀಕ್ಷಿಸಿ:  ಪ್ರಜ್ವಲ್ ಬಳಸಲು ಮುಂದಾದ ಶೆನ್ಜೆನ್ ವೀಸಾ ವಿಶೇಷತೆ ಏನು..? ಪಾಸ್‌ಪೋರ್ಟ್‌ ರದ್ದು..ಕಾನೂನು ಏನ್ ಹೇಳುತ್ತೆ..?

Video Top Stories