ಎಲ್ಲಾ ಭಾಷೆಗಳಲ್ಲೂ ಟ್ರೆಂಡಿಂಗ್ ಶಿವ ಶಿವ, ಜೋರು KD ಹವಾ: ಧ್ರುವ-ಪ್ರೇಮ್ ಜೋಡಿ ಮೋಡಿ!

ಶೋಮ್ಯಾನ್ ಪ್ರೇಮ್-ಆಕ್ಷನ್ ಪ್ರಿನ್ಸ್ ಧ್ರುವ ಜೋಡಿಯ KD ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದ್ದು ಎಲ್ಲೆಲ್ಲೂ ಮೋಡಿ ಮಾಡ್ತಾ ಇದೆ. ಎಲ್ಲಾ ಭಾಷೆಗಳಲ್ಲೂ ಕೆಡಿ ಸಾಂಗ್ ಟ್ರೆಂಡಿಂಗ್​ನಲ್ಲಿದೆ. ತೆಲುಗಿನಲ್ಲಿ ಈ ಹಾಡಿಗೆ ಲಿರಿಕ್ಸ್ ಬರೆದಿರೋದು RRR ಖ್ಯಾತಿಯ  ಚಂದ್ರಬೋಸ್.

First Published Dec 29, 2024, 1:35 PM IST | Last Updated Dec 29, 2024, 1:39 PM IST

ಶೋಮ್ಯಾನ್ ಪ್ರೇಮ್-ಆಕ್ಷನ್ ಪ್ರಿನ್ಸ್ ಧ್ರುವ ಜೋಡಿಯ KD ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದ್ದು ಎಲ್ಲೆಲ್ಲೂ ಮೋಡಿ ಮಾಡ್ತಾ ಇದೆ. ಎಲ್ಲಾ ಭಾಷೆಗಳಲ್ಲೂ ಕೆಡಿ ಸಾಂಗ್ ಟ್ರೆಂಡಿಂಗ್​ನಲ್ಲಿದೆ. ತೆಲುಗಿನಲ್ಲಿ ಈ ಹಾಡಿಗೆ ಲಿರಿಕ್ಸ್ ಬರೆದಿರೋದು RRR ಖ್ಯಾತಿಯ  ಚಂದ್ರಬೋಸ್. ಆಸ್ಕರ್ ವಿಜೇತ ನಾಟು ನಾಟು ಸಾಂಗ್ ಬರೆದಿರೋ ರೈಟರ್ KD ಸಾಂಗ್​ನ  ಹಾಡೊಹೊಗಳಿದ್ದಾರೆ.  KD ಸಿನಿಮಾದ ಮೊದಲು ಹಾಡು ಶಿವ ಶಿವಾ ರಿಲೀಸ್ ಅಗಿದ್ದೇ ಅಗಿದ್ದು ಎಲ್ಲಾ ಕಡೆಯೂ ಹವಾ ಸೃಷ್ಟಿಸಿದೆ. ಅರ್ಜುನ್ ಜನ್ಯ ಕಂಪೋಸ್ ಮಾಡಿರೋ ಹೈ ಎನರ್ಜಿಟಿಕ್ ಸಾಂಗ್ ಎಲ್ಲಾ ಭಾಷೆಗಳಲ್ಲೂ ವೇವ್ ಸೃಷ್ಟಿಸಿದೆ. ಎಲ್ಲಾ ಸೋಷಿಯಲ್ ಮಿಡಿಯಾ ವೇದಿಕೆಗಳಲ್ಲಿ ಟ್ರೆಂಡಿಂಗ್​ನಲ್ಲಿದೆ. 

ಶಿವನೇ ನಿನ್ನಾಟ ಬಲ್ಲವರು ಯಾರ್ಯಾರು ಅನ್ನೋ ಜಾನಪದ ಹಾಡಿನ ಮೊದಲ ಎರಡು ಸಾಲು ಬಳಸಿಕೊಂಡು ಮಂಜುನಾಥ ಗೌಡ ಈ ಹಾಡನ್ನ ಬರೆದಿದ್ದಾರೆ. ತೆಲುಗಿನಲ್ಲಿ ಆರ್.ಆರ್.ಆರ್ ಖ್ಯಾತಿಯ ಚಂದ್ರಬೋಸ್ ಬರೆದಿದ್ದರೆ, ತಮಿಳಿನಲ್ಲಿ ಮದನ್ ಕರ್ಕಿ ಮತ್ತು ಮಲಯಾಳಂನಲ್ಲಿ ಮನಕೊಂಪು ಗೋಪಾಲ್ ಕೃಷ್ಣನ್ ಬರೆದಿದ್ದಾರೆ. ಹಿಂದಿಯಲ್ಲಿ ರಖೀಬ್ ಆಲಂ ಲಿರಿಕ್ಸ್ ಬರೆದಿದ್ದಾರೆ.. ಎಲ್ಲಾ ಭಾಷೆಗಳಲ್ಲೂ ಹಾಡು ಅದ್ಭುತವಾಗಿ ಮೂಡಿಬಂದಿದೆ. 5 ಭಾಷೆಗಳಲ್ಲಿ 25 ಮಿಲಿಯನ್​ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ ಕೆಡಿ ಸಾಂಗ್. ಇನ್ನೂ ತೆಲಗು ಆಡಿಯನ್ಸ್ ಅಂತೂ ಈ ಸಾಂಗ್​ನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ತೆಲುಗಿನಲ್ಲಿ ಈ ಹಾಡನ್ನ ಬರೆದಿರೋ ಚಂದ್ರಬೋಸ್ ತಾವು ಸಾಹಿತ್ಯ ಬರೆದಿರೋ ಬೆಸ್ಟ್ ಸಾಂಗ್​ಗಳಲ್ಲಿ ಇದು ಕೂಡ ಒಂದು ಅಂದಿದ್ದಾರೆ. ಈ ಹಾಡಲ್ಲಿರೋ ದೈವಿಕತೆ - ಮಾಂತ್ರಿಕತೆ ಕೇಳುಗರಿಗೆ ಮೋಡಿ ಮಾಡುತ್ತೆ ಅಂದಿದ್ದಾರೆ. 

ಚಂದ್ರಬೋಸ್ ಆಸ್ಕರ್ ಗಳಿಸಿದ ನಾಟು ನಾಟು ಹಾಡನ್ನ ಬರೆದವರು. ಅಂಥವರೇ ಕೆಡಿ ಹಾಡನ್ನ ಈ ರೇಂಜ್​ಗೆ ಹೊಗಳ್ತಾರೆ ಅಂದ್ರೆ ಕೆಡಿ ಮೋಡಿ ಹೇಗಿದೆ ಅನ್ನೋದನ್ನ ನೀವೇ ಊಹಿಸಿ. ಪ್ರೇಮ್ ನಿರ್ದೇಶನದ ಸಿನಿಮಾ ಅಂದ್ರೆ ಹಾಡುಗಳು ಪಕ್ಕಾ ಹಿಟ್ ಅನ್ನೋದು ಇಂಡಸ್ಟ್ರಿಯಲ್ಲಿರೋ ಟಾಕ್.  ಅಂತೆಯೇ ಆನಂದ್ ಆಡಿಯೋ ಕೆಡಿ ಆಲ್ಬಂಗೆ ಬರೊಬ್ಬರಿ 17 ಕೋಟಿ ಹಣ ಕೊಟ್ಟಿದೆ. ಸಾಂಗ್​ಗೆ ಬರ್ತಾ ಇರೋ ರೆಸ್ಪಾನ್ಸ್ ನೋಡಿದ್ರೆ ಇದು ಪೈಸಾ ವಸೂಲ್ ಆಲ್ಬಂ ಆಗುತ್ತೆ ಅಂತಿದ್ದಾರೆ ಧ್ರುವ ಫ್ಯಾನ್ಸ್. ಸದ್ಯ ಮೊದಲ ಹಾಡಿನ ಮೂಲಕ ಮೋಡಿ ಮಾಡಿರೋ ಪ್ರೇಮ್ ಌಂಡ್ ಧ್ರುವ ಸರ್ಜಾ 2025ರ ಮೊದಲಾರ್ಧದಲ್ಲಿ ಪ್ರೇಕ್ಷಕರ ಮುಂದೆ ಕೆಡಿ ಚಿತ್ರವನ್ನ ತರೋದಕ್ಕೆ ಸಜ್ಜಾಗ್ತಾ ಇದ್ದಾರೆ. ಪ್ಯಾನ್ ಇಂಡಿಯಾ ಧೂಳ್ ಎಬ್ಬಿಸೋಕೆ ಸಜ್ಜಾಗ್ತಾ ಇದ್ದಾರೆ.