
Devil Movie Release: ದರ್ಶನ್ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
ನಟ ದರ್ಶನ್ ಅಭಿನಯಿಸಿರೋ ಡೆವಿಲ್ ಸಿನಿಮಾ ಡಿಸೆಂಬರ್ 11ನೇ ತಾರೀಖು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಪ್ರಚಾರದ ಹೊಣೆ ಈಗ ದರ್ಶನ್ ಅಭಿಮಾನಿಗಳ ಹೆಗಲ ಮೇಲಿದ್ದು, ದಾಸನ ಡೈ ಹಾರ್ಡ್ ಫ್ಯಾನ್ಸ್ ಡೆವಿಲ್ಗಾಗಿ ಪ್ರಮೋಷನಲ್ ಸಾಂಗ್ ಒಂದನ್ನ ಸಿದ್ಧಪಡಿಸಿದ್ದಾರೆ.
ದರ್ಶನ್ರ ಅಭಿಮಾನಿ ನಂಜುಂಡ ಶೆಟ್ಟಿ ಹಾಗು ಚರಣ್ ಶೆಟ್ಟಿ ಬಂಡವಾಳ ಹೂಡಿರೋ ಈ ಹಾಡಿಗೆ ನಂಜುಂಡ ಶೆಟ್ಟಿ ಹಾಗು ಸಾರಿಕಾ ಸಾಹಿತ್ಯ ಬರೆದಿದ್ದಾರೆ. ವ್ಯಾಸರಾಜ್ ಸೋಸ್ಲೆ ಈ ಹಾಡು ಹಾಡಿದ್ದಾರೆ.