Darshan Thoogudeepa ನೋಡಲು ಇನ್ನು 100 ದಿನಗಳು ಬಾಕಿ ಉಳಿದಿವೆ! ರೆಡಿಯಾಗ್ತಿರೋ ಹಾರ!

ಚಾಲೆಂಜಿಂಗ್ ಸ್ಟಾರ್ ದರ್ಶನ್​​ಗೆ ದೊಡ್ಡ ಚಾಲೇಂಜ್ ಅಂದ್ರೆ ಜೈಲಿನಲ್ಲಿ ಜೀವನ ಮಾಡೋದು.. ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ದಚ್ಚು ಎರಡನೇ ಭಾರಿ ಜೈಲು ಸೇರಿ ಇಂದಿಗೆ 24 ದಿನ ಆಯ್ತು. ಆ ಕಡೆ ದಾಸ ಜೈಲು ವಾಸದ ಚಿತ್ರ ಹಿಂಸೆ ಅನುಭವಿಸ್ತಾ ಇದ್ರೆ, ಈ ಕಡೆ ಫ್ಯಾನ್ಸ್​ ಸೆಲೆಬ್ರೇಷನ್​​​ನಲ್ಲಿ ತೊಡಗಿದ್ದಾರೆ.

Share this Video
  • FB
  • Linkdin
  • Whatsapp

ಕೋಪದ ಕೈಗೆ ಬುದ್ಧಿ ಕೊಟ್ಟರೆ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ತಾಜಾ ಉದಹಾರಣೆ ನಟ ದರ್ಶನ್​.. ಗೆಳತಿಗೆ ಅಶ್ಲೀಲ ಮೆಸೆಜ್ ಮಾಡಿದ ಅನ್ನೋ ಕಾರಣಕ್ಕೆ ರೇಣುಕಾಸ್ವಾಮಿ ಕಲೆಯಲ್ಲಿ ದರ್ಶನ್ ಭಾಗಿ ಆದ್ರು ಅನ್ನೋ ಆರೋಪ ದರ್ಶನ್​ ಮೇಲೆ ಬಂದಿದೆ. ದರ್ಶನ್​​ ಈ ಪ್ರಕರಣದಲ್ಲಿ ಎರಡನೇ ಭಾರಿ ಜೈಲು ಸೇರಿದ್ದಾಗಿದೆ. ಈ ಭಾರಿ ಜೈಲಿನಲ್ಲಿರೋ ದಾಸನಿಗೆ ಸಂಕಷ್ಟಗಳ ಸರಮಾಲೆಯೇ ಇದೆ. ಕೂರಲು ಮಲಗಲು ಆಗದೇ ನಿದ್ದೆಯೂ ಇಲ್ಲದೆ ದಾಸ ಜೈಲಿನಲ್ಲಿ ದಿನ ಎಣಿಸುತ್ತಿದ್ದಾರೆ. ಆದ್ರೆ ಆ ಕಡೆ ಫ್ಯಾನ್ಸ್​​ ಮಾತ್ರ ಫುಲ್​ ಸೆಲೆಬ್ರೇಷಬನ್ ಮೂಡ್​ನಲ್ಲಿದ್ದಾರೆ.

Related Video