ಮೊದಲ ಹಂತದ ಡೆವಿಲ್ ಶೂಟಿಂಗ್ ಕಂಪ್ಲೀಟ್: ದರ್ಶನ್ ಹುಟ್ಟುಹಬ್ಬಕ್ಕೆ ಸಿದ್ಧವಾಗಿದೆ 'ದಿ ಹೀರೋ' ಟ್ರೀಟ್!

ನಟ ದರ್ಶನ್ ಕಾಟೇರ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಇದರ ಮಧ್ಯೆ ಫ್ಯಾಮಿಲಿ ವಾರ್ ನಡೆದಿದ್ದು ಆಗಿದೆ. ಆದ್ರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ನಟ ದರ್ಶನ್ ನಮ್ ಕೆಲಸ ನಾವ್ ಮಾಡೋಣ ಅನ್ನೋ ತೇರಿ ಮೇಲೆ ತನ್ನ ಮುಂದಿನ ಸಿನಿಮಾ ವರ್ಕ್ ಕೂಡ ಶುರು ಮಾಡಿದ್ದಾರೆ.

Share this Video
  • FB
  • Linkdin
  • Whatsapp

ನಟ ದರ್ಶನ್ ಕಾಟೇರ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಇದರ ಮಧ್ಯೆ ಫ್ಯಾಮಿಲಿ ವಾರ್ ನಡೆದಿದ್ದು ಆಗಿದೆ. ಆದ್ರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ನಟ ದರ್ಶನ್ ನಮ್ ಕೆಲಸ ನಾವ್ ಮಾಡೋಣ ಅನ್ನೋ ತೇರಿ ಮೇಲೆ ತನ್ನ ಮುಂದಿನ ಸಿನಿಮಾ ವರ್ಕ್ ಕೂಡ ಶುರು ಮಾಡಿದ್ದಾರೆ. ಕಾಟೇರ ಗೆದ್ದ ಹ್ಯಾಂಗೋವರ್ನಿಂದ ಹೊರ ಬಂದಿರೋ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ಗೆ ಎಂಟ್ರಿಕೊಟ್ಟಿದ್ದಾರೆ. ತಾರಕ್ ಸಿನಿಮಾ ಆದ ಮೇಲೆ ಡೈರೆಕ್ಟರ್ ಮಿಲನಾ ಪ್ರಕಾಶ್ ಡೆವಿಲ್ ಸಿನಿಮಾ ಮೂಲಕ ಮತ್ತೊಮ್ಮೆ ದರ್ಶನ್ ಜೊತೆ ಕೆಲಸ ಮಾಡುತ್ತಿದ್ದಾರೆ. ದರ್ಶನ್ ಹೊರತುಪಡಿಸಿದ್ರೆ ಡೆವಿಲ್ ಸಿನಿಮಾದ ಸ್ಟಾರ್ ಕಾಸ್ಟ್ ಬಗ್ಗೆ ಯಾವ್ದೇ ಮಾಹಿತಿ ಇನ್ನೂ ರಿವೀಲ್ ಆಗಿಲ್ಲ.

Add Asianetnews Kannada as a Preferred SourcegooglePreferred

ಆದಾಗ್ಲೆ ಡೆವಿಲ್ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಆಗಿದೆ. ಎರಡನೇ ಹಂತದ ಚಿತ್ರೀಕರಣ ಫೆಬ್ರವರಿ 2 ತಾರೀಖಿನಿಂದ ಆರಂಭವಾಗುತ್ತೆ. ಕೆಲ ತಿಂಗಳ ಹಿಂದೆಯಷ್ಟೇ ‘ಡೆವಿಲ್’ ಸ್ಕ್ರಿಪ್ಟ್ ಪೂಜೆ ಆಗಿತ್ತು. ಪೂಜೆ ಮುಗಿದಿದ್ದೆ ತಡ ಡೆವಿಲ್ ಹೆಸರಿನಲ್ಲಿ ಪೋಸ್ಟರ್ ಹರಿದಾಡಿದ್ವು. ಆದ್ರೆ ಡೆವಿಲ್ ಸಿನಿಮಾದ ಯಾವುದೇ ಮಾಹಿತಿ ನಂಬಬೇಡಿ. ನಾವೇ ಕೊಡುತ್ತೇವೆ ಅಂತ ಡೈರೆಕ್ಟರ್ ಮಿಲನಾ ಪ್ರಕಾಶ್ ಹೇಳಿದ್ರು. ಈಗ ಫಸ್ಟ್ ಶೆಡ್ಯೂಲ್ ಶೂಟಿಂಗ್ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಫೆಬ್ರವರಿ 16ರಂದು ನಡೆಯೋ ದರ್ಶನ್ ಹುಟ್ಟುಹಬ್ಬದ ದಿನ ಡೆವಿಲ್ ಫಸ್ಟ್ ಲುಕ್ ಟ್ರೀಟ್ ಹೊರ ಬರಲಿದೆ.

Related Video