Asianet Suvarna News Asianet Suvarna News

ಜೈಲಲ್ಲಿ ದರ್ಶನ್‌ಗೆ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಿಂದ ಪೈಪೋಟಿ ? ನಟನ ಕುರಿತ ಅಚ್ಚರಿಯ ವಿಷಯ ಬಹಿರಂಗ..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 4 ದಿನಗಳಾಗುತ್ತಿವೆ. ಸಾಮಾನ್ಯ ಕೈದಿಗಳಂತೆ ದಿನ ಕಳೆಯುತ್ತಿರುವ ದರ್ಶನ್ ಊಟ, ತಿಂಡಿ ಹಾಗೂ ನಿದ್ರೆಯನ್ನು ಸರಿಯಾಗಿ ಮಾಡದೇ ಚಿಂತೆಗೆ ಬಿದ್ದು, ಮಂಕಾಗಿದ್ದಾರೆ ಎನ್ನಲಾಗಿದೆ. ನಾನ್ ವೆಜ್ ಕೊಟ್ರೂ ಬೇಡ ಎನ್ನುತ್ತಿದ್ದಾರಂತೆ.


13 ವರ್ಷಗಳ ನಂತರ ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ(Parappana Agrahara Jail) ದರ್ಶನ್‌ಗೆ ಅತಿಥ್ಯ ನೀಡಲು ರೌಡಿಗಳ ಪಡೆ ನಾ ಮುಂದು ತಾ ಮುಂದು ಎಂದು ಬಂದಿದೆ ಅಂತಾ ಹೇಳಲಾಗುತ್ತಿದೆ. ದರ್ಶನ್‌ಗೆ (Darshan) ಅತಿಥ್ಯ ನೀಡಲು ಮುಂದಾಗಿರುವ ರೌಡಿಗಳು ಯಾರು ಅನ್ನೋದು ಕೂಡ ಇಂಟ್ರೆಸ್ಟಿಂಗ್ ಆಗಿದೆ. ಕುಖ್ಯಾತ ವಿಲ್ಸನ್ ಗಾರ್ಡನ್ ನಾಗ ಹಾಗೂ ಸೈಕಲ್ ರವಿ ಕಡೆಯಿಂದ ದರ್ಶನ್ ನೋಡಿಕೊಳ್ಳಲು ಪೈಪೋಟಿ ಬಿದ್ದಿದ್ಯಂತೆ. ಪರಪ್ಪನ ಆಗ್ರಹಾರ ಜೈಲಲ್ಲೇ ವಿಲ್ಸನ್ ಗಾರ್ಡನ್ ನಾಗ ಇದ್ದಾನೆ. ಆದರೆ ಸೈಕಲ್ ರವಿ ಜೈಲಲ್ಲಿ ಇಲ್ಲ. ಆದರೂ ದರ್ಶನ್ ಜೈಲಲ್ಲಿ ನೋಡಿಕೊಳ್ಳಲು ರವಿ ಹುಡುಗರು ಪೈಪೋಟಿ ನಡೆಸುತ್ತಿದ್ದಾರೆ. ಇದಕ್ಕಾಗಿ ರವಿಯ ಬಂಟನೊಬ್ಬ ಹಳೆ ಕೇಸಲ್ಲಿ ಜೈಲು ಸೇರೋ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 2011ರಲ್ಲಿ ದರ್ಶನ್ ಜೈಲಲ್ಲಿದ್ದಾಗ ಸೈಕಲ್ ರವಿ ಅತಿಥ್ಯ ನೀಡಿದ್ದ ಎನ್ನಲಾಗಿದೆ. ಈಗಲೂ ತಾನೇ ನೀಡುತ್ತೇವೆ ಎಂದು ಸೈಕಲ್ ಗ್ಯಾಂಗ್ ಮುಂದಾಗಿದೆ ಎಂದು ಹೇಳಲಾಗಿದೆ. ಆದರೆ ವಿಲ್ಸನ್ ಗಾರ್ಡನ್ ನಾಗ ಜೈಲಲ್ಲೇ ಇದ್ದು ಅವರು ಕೂಡ ದರ್ಶನ್‌ಗೆ ಅತಿಥ್ಯ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ  ಸೆಂಟ್ರಲ್ ಜೈಲು ಪರಪ್ಪನ ಅಗ್ರಹಾರದಲ್ಲಿರೋ ದರ್ಶನ್‌ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಬ್ಯಾರಕ್ ನಂ.3 ರ ಭದ್ರತಾ ಕೊಠಡಿಯಲ್ಲಿರೋ ದರ್ಶನ್ ಗೆ ಜೈಲಿನ ಇನ್ಸ್ ಪೆಕ್ಟರ್ ಮತ್ತು ಮೂವರು ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ದರ್ಶನ್ ನೋಡಲು ಜೈಲಿನ ಕೈದಿಗಳು ಬರವ ಸಾಧ್ಯತೆಗಳಿವೆ. ಹೀಗಾಗಿ ಬ್ಯಾರಕ್ 3 ಬಳಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ವೀಕ್ಷಿಸಿ:  ಅವನು ಬರದಿದ್ರೆ ಲೆಕ್ಕ ನಾನು ಕೊಡ್ತೀನಿ ಅಂದಿದ್ದೇಕೆ ದೈವ..? ಮೈ ನವಿರೇಳಿಸುವಂತಿದೆ ಗುಳಿಗನ ಕಾರ್ಣಿಕ..!

Video Top Stories