Asianet Suvarna News Asianet Suvarna News

ಅವನು ಬರದಿದ್ರೆ ಲೆಕ್ಕ ನಾನು ಕೊಡ್ತೀನಿ ಅಂದಿದ್ದೇಕೆ ದೈವ..? ಮೈ ನವಿರೇಳಿಸುವಂತಿದೆ ಗುಳಿಗನ ಕಾರ್ಣಿಕ..!

ಅವನ ಮತ್ತು ನನ್ನ ಲೆಕ್ಕ.. ದೈವ ಎಚ್ಚರಿಕೆಯ ಕಾರ್ಣಿಕ..! 
ದೊಡ್ಡ ಅನಾಹುತದ ಮುನ್ಸೂಚನೆ ನೀಡಿದ ಗುಳಿಗ ದೈವ..! 
ದೈವದ ಕೋಪಕ್ಕೆ ಅರ್ಧಕ್ಕೆ ನಿಂತ ಸ್ಮಾರ್ಟ್ ಸಿಟಿ ಕಾಮಗಾರಿ..!

ಅವನ ಮತ್ತು ನನ್ನ ಲೆಕ್ಕ ಇದು ದೈವ ಎಚ್ಚರಿಕೆಯ ಕಾರ್ಣಿಕ. ಅವನು ಬರದಿದ್ರೆ ಲೆಕ್ಕ ನಾನು ಕೊಡ್ತೀನಿ. ಮಂಗಳೂರು ಫ್ಲೈ ಓವರ್ ಕಾಮಗಾರಿಗೆ(Guliga daiva) ಶರಾವ ಗುಳಿಗ(Guliga daiva) ಅಡೆತಡೆ ಉಂಟು ಮಾಡ್ತಿದೆ. ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಪಂಜುರ್ಲಿ ಮತ್ತು ಗುಳಿಗ ದೈವಗಳಿವೆ. ಅದ್ರಲ್ಲೂ ಗುಳಿಗ ದೈವದ ಶಕ್ತಿ ಅಪಾರವಾದ್ದು ಅಂತ ಹೇಳಲಾಗುತ್ತೆ. ಮಂಗಳೂರಿನ ಈ ಸ್ಥಳದಲ್ಲಿ ಕಾಮಗಾರಿ ನಿಲ್ಲೋದಿರಲಿ, ಆ ಕಾಂಟ್ರ್ಯಾಕ್ಟರ್ ಈಗ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ. ದೈವಗಳ ನೆಲೆಬೀಡು ಕರಾವಳಿ ಒಂದಲ್ಲ ಒಂದು ದೈವ ಕಾರ್ಣಿಕಕ್ಕೆ ಸಾಕ್ಷಿಯಾಗುತ್ತಾ ಇರುತ್ತದೆ. ಇದೀಗ ದೈವ ಮುನಿಸಿಕೊಂಡ ಪರಿಣಾಮ ದೊಡ್ಡ ಅವಘಡದ ಮುನ್ಸೂಚನೆ ನೀಡಿದೆ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಮಾನಸಿಕ ಒತ್ತಡವಿರಲಿದ್ದು, ಮಕ್ಕಳಲ್ಲಿ ಮನಸ್ತಾಪ ಬರಲಿದೆ..