Darshan: ಬಿಟೌನ್ ಬಿಗ್ ಮ್ಯಾನ್ ಜೊತೆ ದರ್ಶನ್ ಶೋ ಆಫ್..! ಅಧಿರ ಸಂಜಯ್ ದತ್, ದರ್ಶನ್‌ ಫೋಟೋ ವೈರಲ್..!

ನಟ ದರ್ಶನ್ ಹುಟ್ಟುಹಬ್ಬದ ಹೊಸ್ತಿಲಲ್ಲಿದ್ದಾರೆ. ದರ್ಶನ್‌ರ ಅಭಿಮಾನಿ ಬಳಗ ತಮ್ಮ ನೆಚ್ಚಿನ ಹೀರೋ ಬರ್ತ್‌ಡೇ ಸೆಲೆಬ್ರೇಷನ್‌ಗೆ ತಯಾರಿಯಲ್ಲಿದ್ದಾರೆ. ಆದ್ರೆ ಆ ಕಡೆ ನಟ ದರ್ಶನ್ ಬಿಟೌನ್ ಬಿಗ್ ಮ್ಯಾನ್ ಸಂಜಯ್ ದತ್ ಜೊತೆ ಶೋ ಆಫ್ ಕೊಟ್ಟಿದ್ದಾರೆ.

First Published Feb 10, 2024, 11:27 AM IST | Last Updated Feb 10, 2024, 11:27 AM IST

ಸಂಜತ್ ದತ್ ಈಗ ಸ್ಯಾಂಡಲ್‌ವುಡ್‌ನನ್ನೇ ಫುಲ್ ಬ್ಯುಸಿ ಆಗಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಜೊತೆ ಕೆಡಿ ಸಿನಿಮಾದಲ್ಲಿ(KD Movie) ಅಧಿರ ಆಡಳಿತ ನಡೆಸುತ್ತಿದ್ದಾರೆ. ಕೆಡಿ ಸಿನಿಮಾದ ಶೂಟಿಂಗ್ ಕೊನೆಯ ಹಂತಕ್ಕೆ ಬಂದಿದೆ. ಈ ಮಧ್ಯೆ ಅಧಿರ ಸಂಜಯ್ ದತ್‌ಗೆ(Sanjay Dutt) ನಟ ದರ್ಶನ್ ಮುಖಾಮುಖಿ ಆಗಿದ್ದಾರೆ. ಹೀಗಾಗಿ ದರ್ಶನ್(Darshan) ಸಂಜಯ್ ಭೇಟಿ ಹಿಂದಿನ ಕಾರಣದ ಹುಡುಕಾಟ ಶುರುವಾಗಿದೆ. ಕೆಜಿಎಫ್ ಚಾಪ್ಟರ್2ನಲ್ಲಿ ಸಂಜಯ್ ದತ್ ಮಿಂಚಿದ್ಮೇಲೆ ಮತ್ತೆ ಕನ್ನಡದಕ್ಕೆ ಬಂದಿರೋದು ಕೆಡಿ ಸಿನಿಮಾಗಾಗಿ. ಕೆಡಿಕೆ ಸಂಜಯ್ದತ್ರನ್ನ ಕರೆಸಿದ್ದು ದಿ ಶೋ ಮ್ಯಾನ್ ಜೋಗಿ ಪ್ರೇಮ್. ಕೆಡಿ ಸಿನಿಮಾ ಬಳಿಕ ಪ್ರೇಮ್ ದರ್ಶನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಮಧ್ಯೆ ದರ್ಶನ್ ಹಾಗು ಸಂಜಯ್ ದತ್ ಮುಖಾಮುಖಿ ಆಗಿದ್ದಾರೆ. ಇವರಿಬ್ಬರ ಮಧ್ಯೆ ನಟ ಜೋಗಿ ಪ್ರೇಮ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹೀಗಾಗಿ ಪ್ರೇಮ್ ದರ್ಶನ್ ಕಾಂಬಿನೇಷನ್ನಲ್ಲಿ ಬರೋ ಸಿನಿಮಾದಲ್ಲಿ ಸಂಜಯ್ ದತ್ ನಟಿಸುತ್ತಾರಾ ಅನ್ನೋ ಕುತೂಹಲ ಮೂಡಿದೆ.

ಇದನ್ನೂ ವೀಕ್ಷಿಸಿ:  Janaspandana: ವಿಧಾನಸೌಧದ ಅಂಗಳದಲ್ಲಿ ಸಿಎಂ ಜನ ಸ್ಪಂದನ: 12 ಸಾವಿರ ಅರ್ಜಿ, 20 ಸಾವಿರಕ್ಕೂ ಹೆಚ್ಚು ಜನ!

Video Top Stories