Janaspandana: ವಿಧಾನಸೌಧದ ಅಂಗಳದಲ್ಲಿ ಸಿಎಂ ಜನ ಸ್ಪಂದನ: 12 ಸಾವಿರ ಅರ್ಜಿ, 20 ಸಾವಿರಕ್ಕೂ ಹೆಚ್ಚು ಜನ!

ಸಿಎಂ ಜನಸ್ಪಂದನ ಕಾರ್ಯಕ್ರಮದ ಬಳಿಕ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅವರ ವ್ಯಾಪ್ತಿಯ ಅರ್ಜಿಗಳನ್ನು ಆದಷ್ಟು ಬೇಗ ಪರಿಹರಿಸಲು ಸೂಚನೆ ನೀಡಿದ್ದಾರೆ.

First Published Feb 10, 2024, 10:18 AM IST | Last Updated Feb 10, 2024, 10:19 AM IST

ಸಿಎಂ ಸಿದ್ದರಾಮಯ್ಯ(Siddaramaiah) ವಿಧಾನಸೌಧದಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಸರಿಸುಮಾರು 12,372 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಎರಡನೇ ಜನಸ್ಪಂದನ(Janaspandana) ಕಾರ್ಯಕ್ರಮಕ್ಕೆ ಸುಮಾರು 20,000 ಜನರು ಆಗಮಿಸಿದ್ದರು ಎನ್ನಲಾಗ್ತಿದೆ. ಗುರುವಾರ ಬೆಳಗ್ಗೆ 10 ಗಂಟೆಯಿಂದ 7 ಗಂಟೆವರೆಗೆ ಈ ಕಾರ್ಯಕ್ರಮ ನಡೆಯಿತು. ಈ ಪೈಕಿ ಸ್ಥಳದಲ್ಲಿಯೇ 246 ಅರ್ಜಿಗಳು ಇತ್ಯರ್ಥವಾಗಿದ್ದು, 12,126 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಸಿಎಂ ಎರಡನೇ ಜನಸ್ಪಂದನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ(Department of Revenue) ಅತಿ ಅರ್ಜಿಗಳು ಬಂದಿವೆ. ಜಮೀನು, ಸಾಗುವಳಿ ಸೇರಿದಂತೆ ಕಂದಾಯ ಇಲಾಖೆಯಿಂದ ಎದುರಿಸುತ್ತಿರುವ ಸಮಸ್ಯೆಯನ್ನು ಜನರು ಹೊತ್ತಿತಂದಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಹಣದ ನಷ್ಟವಾಗಲಿದ್ದು, ವೃತ್ತಿಯಲ್ಲಿ ಅನುಕೂಲವಿದೆ..