ಭಾರೀ ಮಳೆಗೆ ಕೊಚ್ಚಿಹೋದ ಕಾರು..ಬಸ್‌ಗಳು..! ರಾಷ್ಟ್ರರಾಜಧಾನಿಯಲ್ಲಿ 24 ಗಂಟೆ ನಾನ್‌ಸ್ಟಾಪ್ ಮಳೆ..!
ದುರಂತವಾಗಿ ಬದಲಾಯ್ತು ಮೋಜಿನ ಪ್ರವಾಸ
ಕೊಡಗಿನ ಜನರನ್ನು ಕಾಡುವ ಗುಡ್ಡದ ಭೂತ..!
ಚಾರ್ಮಡಿಘಾಟ್‌ನಲ್ಲಿ ಪ್ರವಾಸಿಗರ ಹುಚ್ಚಾಟ..!
2013ರಲ್ಲಿ ಪ್ರಳಯ ಸೃಷ್ಟಿಯಾಗಿದ್ದಾಗ, ಗಂಗೆ ಹೇಗೆ ಉಕ್ಕಿ ಹರಿದ್ದಳು ಅಂತ. ಗಂಗೆ ಇಷ್ಟು ರೌದ್ರವತಾರ ತಾಳಿದ್ರೂ ಮಹಾದೇವ ಮಾತ್ರ ಅದೇ ಗಂಗಾ ನದಿ ನೀರ ಮಧ್ಯದಲ್ಲಿ ತಟಸ್ಥನಾಗಿ ಕೂತು ಬಿಟ್ಟಿದ್ದ. 11 ವರ್ಷಗಳ ಹಿಂದೆ ಪ್ರಳಯಾಸುರನ ಅಟ್ಟಹಾಸ ನೋಡಿ, ಕೇವಲ ಉತ್ತರಾಖಂಡ್ ಮಾತ್ರ ಅಲ್ಲ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಈ ವರ್ಷವೂ ಮತ್ತದೇ ಜಲರಕ್ಕಸ ಮತ್ತೆ ವಕ್ಕರಿಸಿಕೊಳ್ಳೊ ಸೂಚನೆ ಸಿಕ್ಕಿದೆ. ಅದಕ್ಕೆ ಸಾಕ್ಷಿಯಾಗಿದೆ ಉತ್ತರಾಖಂಡದ ಹರಿದ್ವಾರದ ಈ ಮಳೆಗಾಲದ ಒಂದಕ್ಕಿಂತ ಒಂದು ಭಯಂಕರ ಅಷ್ಟೇ ಬೀಭತ್ಸವಾಗಿರುವ ಈ ದೃಶ್ಯಗಳು. ಉತ್ತರಾಖಂಡದಲ್ಲಿ(Uttarakhand) ಸುರಿಯುತ್ತಿರುವ ಪ್ರಳಯರುದ್ರ ಮಳೆಯ(Rain) ಅಟ್ಟಹಾಸ ಹೇಗಿದೆ ಅನ್ನೋದಕ್ಕೆ ಇದು ಚಿಕ್ಕ ಟ್ರೇಲರ್ ಅಷ್ಟೇ . ಈಗಾಗಲೇ ಜೂನ್ 27ರಂದು ಉತ್ತರ ಭಾರತಕ್ಕೆ ಎಂಟ್ರಿಯಾಗಿದ್ದು, ಬಿಡುವೇ ಇಲ್ಲದಂತೆ ಅಬ್ಬರಿಸುತ್ತಿದ್ದಾನೆ. ಆಕಾಶವೇ ಹರಿದು ಛಿದ್ರವಾಗಿದೆ ಏನೋ ಅನ್ನುವಂತೆ ಧರೆಗೆ ಅಪ್ಪಳಿಸುತ್ತಿದ್ದಾನೆ ಜಲಾಸುರ. ಅದರ ಪರಿಣಾಮವೇ ರಸ್ತೆಗಳಲ್ಲಿ ನಿಂತಿದ್ದ ಫೋರ್ ವ್ಹೀಲರ್, ಟೂ ವ್ಹೀಲರ್ ವಾಹಗಗಳನ್ನ ಗುಡಿಸಿ ಗುಂಡಾಂತರ ಮಾಡ್ತಿದೆ ಈ ರಣ ಮಳೆ.
ಇದನ್ನೂ ವೀಕ್ಷಿಸಿ: Today Horoscope: ಈ ರಾಶಿಯವರಿಗೆ ಇಂದು ಶತ್ರುಗಳು ದೂರಾಗುತ್ತಾರೆ..ಸಾಲ ನಿವಾರಣೆಯಾಗಲಿದೆ