
10 ದಿನದಲ್ಲಿ ದರ್ಶನ್ ಬೇಲ್ ಅವಧಿ ಮುಕ್ತಾಯ; ಆತಂಕದಲ್ಲಿ ಸರ್ಜರಿಗೆ ಓಕೆ ಅಂದುಬಿಟ್ರಾ?
ದರ್ಶನ್ ಬೇಲ್ ಅವಧಿ ಮುಕ್ತಾಯಕ್ಕೆ ಹತ್ತೇ ದಿನ ಬಾಕಿ. BP ಏರಿಳಿತಗಳ ಕಾರಣಕ್ಕೆ ಸರ್ಜರಿ ವಿಳಂಬ ಎಂದ ವೈದ್ಯರು. ಬೆಡ್ ಮೇಲೆ ಮಲಗಿರೋ ಫೋಟೋ ವೈರಲ್ ?
ದರ್ಶನ್ ಮಧ್ಯಂತರ ಬೇಲ್ ಅವಧಿ ಮುಗಿಯೋಕೆ ಇನ್ನೂ ಹತ್ತೇ ದಿನ ಬಾಕಿ ಇದೆ. ಇಷ್ಟು ದಿನ ಸರ್ಜರಿಗೆ ಒಪ್ಪದೇ ಬಿಜಿಎಸ್ ಆಸ್ಪತ್ರೆಯಲ್ಲಿ ಮಲಗಿದ್ದ ನಟ, ಈಗ ಸರ್ಜರಿ ಓಕೆ ಅಂದಿದ್ದಾರೆ. ಈ ನಡುವೆ ಆಸ್ಪತ್ರೆಯಲ್ಲಿರೋ ದರ್ಶನ್ ಫೋಟೊವೊಂದು ಹೊರಬಿದ್ದಿದ್ದು ಫ್ಯಾನ್ಸ್ ಅಯ್ಯೋ ಪಾಪ ಅಂತಿದ್ದಾರೆ. ಸದ್ಯ ಹೈಕೋರ್ಟ್ನಲ್ಲಿ ದರ್ಶನ್ ರೆಗ್ಯೂಲರ್ ಬೇಲ್ ಅರ್ಜಿಯ ವಿಚಾರಣೆ ನಡೀತಾ ಇದೆ. ದರ್ಶನ್ ಪರ ವಕೀಲರು ರೆಗ್ಯೂಲರ್ ಬೇಲ್ ಕೊಡಿಸೋದಕ್ಕೆ ಶತಾಯ ಗತಾಯ ಪ್ರಯತ್ನ ಪಡ್ತಾ ಇದ್ದಾರೆ. ಆದ್ರೆ ಮೆಡಿಕಲ್ ಗ್ರೌಂಡ್ಸ್ ಮೇಲೆ ಬೇಲ್ ಪಡೆದು ಕಳ್ಳಾಟವಾಡಿದ್ದು ಸಾಬೀತಾದ್ರೆ ರೆಗ್ಯೂಲರ್ ಬೇಲ್ಗೆ ಕೊಕ್ಕೆ ಬೀಳಲಿದೆ.
Add Asianetnews Kannada as a Preferred Source
