Asianet Suvarna News Asianet Suvarna News

Darshan: ವೀರ ಸಿಂಧೂರ ಲಕ್ಷ್ಮಣ ಸಿನಿಮಾ ದರ್ಶನ್‌ ಮಾಡ್ತಾರಾ ? ಇದರ ಟೈಟಲ್‌ ಹಕ್ಕು ಯಾರ ಬಳಿ ಇದೆ ?

ವೀರ ಸಿಂಧೂರ ಲಕ್ಷ್ಮಣ ಸಿನಿಮಾದ ಟೈಟಲ್‌ ಹಕ್ಕು ನಿರ್ಮಾಪಕ ಉಮಾಪತಿ ಬಳಿ ಇದ್ದು, ದರ್ಶನ್‌ ಈ ಸಿನಿಮಾ ಮಾಡೋದು ಡೌಟು ಎನ್ನಲಾಗ್ತಿದೆ.
 

ಒಂದು ಕಡೆ ಉಮಾಪತಿ ಶ್ರೀನಿವಾಸ್ ಗೌಡ(producer Umapati) ಮತ್ತು ನಟ ದರ್ಶನ್ ನಡುವೆ ಗಲಾಟೆ ನಡೆಯುತ್ತಿದೆ. ಇದರ ನಡುವೆ ವೀರ ಸಿಂಧೂರ ಲಕ್ಷ್ಮಣ ಸಿನಿಮಾವನ್ನು(Veera Sindhura Lakshmana) ಸುದೀಪ್‌ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ನಂತರ ದರ್ಶನ್‌ (Darshan) ಈ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದ್ರೆ ಈ ಸಿನಿಮಾದ ಟೈಟಲ್‌ ಹೆಸರು ನಿರ್ಮಾಪಕ ಉಪಾಮತಿ ಅವರ ಬಳಿ ಇದೆಯಂತೆ. ಹಾಗಾಗಿ ದರ್ಶನ್ ಈ ಸಿನಿಮಾ ಮಾಡೋದು ಡೌಟ್‌ ಎನ್ನಲಾಗ್ತಿದೆ. ಒಂದು ಕಾಲದಲ್ಲಿ ಉಮಾಪತಿ ಈ ಸಿನಿಮಾವನ್ನು ದರ್ಶನ್‌ ಮಾಡುತ್ತಾರೆ ಎಂದಿದ್ದರು. ಆದ್ರೀಗ ನಾನು ಈಗಾಗಲೇ ಒಬ್ರು ಹೀರೋಗೆ ಅಡ್ವಾನ್ಸ್‌ ಕೊಟ್ಟಿದ್ದೇನೆ. ಈ ಸಿನಿಮಾ ಮಾಡೋದು ಫಿಕ್ಸ್‌ ಎಂದು ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ಈ ವಾರ ಕನ್ನಡ ಸಿನಿ ಪ್ರೇಕ್ಷಕರಿಗೆ ಕ್ರೈಂ ಥ್ರಿಲ್ಲರ್ ಸಿನಿಮಾ ಟ್ರೀಟ್.! ಸಿನಿ ಪ್ರೇಮಿಗಳ ಮನಸ್ಸು ಗೆದ್ದ 'ಮಿ.ನಟ್ವರ್‌ಲಾಲ್'..!