Asianet Suvarna News Asianet Suvarna News

ಆ ಅರ್ಧ ಗಂಟೆ ಪಟ್ಟಣಗೆರೆ ಶೆಡ್‌ನಲ್ಲಿ ನಡೆದಿದ್ದೇನು ? ರೇಣುಕಾಸ್ವಾಮಿ ಮೇಲೆ ಮೊದಲು ಎರಗಿದ್ದೇ ನಟ ದರ್ಶನ್..!

ಕಿಲ್ಲಿಂಗ್ ಸ್ಟಾರ್ ನಟ ದರ್ಶನ್ ಈಗ ಪಶ್ಚಾತಾಪದಲ್ಲಿ ಬೆಂದು ಹೋಗಿದ್ದಾರೆ. ತನ್ನವರಿಗಾಗಿ ಮಿಡಿತಾ ಇದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿರೋ ದರ್ಶನ್ ರೇಣುಕಾಸ್ವಾಮಿ ಕೊಲೆ ವಿಷಯದಲ್ಲಿ ದುಡುಕಬಾರದಿತ್ತು ಅಂತ ಪದೇ ಪದೇ ಕಣ್ಣೀರಾಗುತ್ತಿದ್ದಾರಂತೆ.


ನಟ ದರ್ಶನ್ (Darshan) ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆಯಾದ (Renukaswamy murder case) ಆರೋಪದಲ್ಲಿ 17 ಜನ ಜೈಲು ಸೇರಿದ್ದಾರೆ. ಆದ್ರೆ ಈ ಕೊಲೆ ಹೇಗಾಯ್ತು ಪಟ್ಟಣಗೆರೆ ಶೆಡ್‌ನಲ್ಲಿ ಏನೆಲ್ಲಾ ಆಯ್ತು ಅನ್ನೋದು ಇಷ್ಟು ದಿನ ನಿಗೂಢವಾಗಿತ್ತು. ಈಗ ಈ ಕೊಲೆ (Murder) ಬಗ್ಗೆ ಒಂದೊಂದೇ ಸಂಗತಿಗಳು ಹೊರ ಬರುತ್ತಿವೆ. ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನ ಎತ್ತಾಕೊಂಡು ಹೋಗಿದ್ದ ಡಿ ಗ್ಯಾಂಗ್ ರೇಣುಕಾಸ್ವಾಮಿಗೆ ಹಿಗ್ಗಾಮುಗ್ಗ ತಳಿಸಿದ್ರು. ರೇಣುಕಾಸ್ವಾಮಿ ಪಟ್ಟಣಗೆರೆ ಶೆಡ್‌ಗೆ (Pattanagere Shed) ಬರುತ್ತಿದ್ದಂತೆ ಮೊದಲು ಎರಗಿದ್ದ ನಟ ದರ್ಶನ್ ಅಂತೆ. ದೈತ್ಯಾಕಾರದ ದರ್ಶನ್ ರೇಣುಕಾಸ್ವಾಮಿ ಮೀಲ ಮೀಲ ಅಂತ ಒದಾಡುವಂತೆ ಬಡಿದಿದ್ರಂತೆ. ಅರ್ಧ ಗಂಟೆಗಳ ಕಾಲ ನಿರಂತರವಾಗಿ ಹೊಡೆದಿದ್ರಂತೆ. ನಟ ದರ್ಶನ್ ನಿಂದಲೇ ಅತೀ ಹೆಚ್ಚಿನದಾಗಿ ಮಾರಣಾಂತಿಕ ಹಲ್ಲೆ ಆಗಿತ್ತಂತೆ. ಕಾಮಾಕ್ಷಿಪಾಳ್ಯ ಪೊಲೀಸ್ (Kamakshipalya Police) ತನಿಖೆ ವೇಳೆ ಈ ಭಯಾನಕ ಸತ್ಯ ಬಯಲಾಗಿದೆ. ಗೆಳತಿ ಪವಿತ್ರಾ ಗೌಡನ ಪಟ್ಟಣಗೆರೆ ಶೆಡ್ ಗೆ ಬರಲು ಹೇಳಿದ್ದ ದರ್ಶನ್ ಪವಿತ್ರಾಗೌಡನಿಂದ ರೇಣುಕಾಸ್ವಾಮಿಗೆ ಮೊದಲು ಚಪ್ಪಲಿಯಲ್ಲಿ ಹೊಡೆಸಿದ್ದ. ಬಳಿಕ ಪವಿತ್ರಾಗೌಡನ ಮನೆಗೆ ಕಳಿಸಿದ್ದ ನಟ ದರ್ಶನ್ ರೇಣುಕಾಸ್ವಾಮಿ ಮೇಲೆ ಕ್ರೂರಿಯಂತೆ ಎರಗಿ ಎದೆ ,ಕುತ್ತಿಗೆ ಮೇಲೆ ಕಾಲು ಇಟ್ಟು ವಿಡಿಯೋ ಮಾಡುವಂತೆ ಹೇಳಿದ್ನಂತೆ. ರೇಣುಕಾಸ್ವಾಮಿಯ ಮಾರ್ಮಾಂಗಕ್ಕೆ ಬಲವಾಗಿ ಒದಿದ್ದ ನಟ ದರ್ಶನ್ ಅರ್ಧ ಗಂಟೆಗಳ ಕಾಲ ರೇಣುಕಾಸ್ವಾಮಿ ಗೆ ನರಕ ತೋರಿಸಿದ್ನಂತೆ.

ಇದನ್ನೂ ವೀಕ್ಷಿಸಿ:  ಕೋಡಿ ಶ್ರೀ ಮತ್ತೊಂದು ಭಯಾನಕ ಭವಿಷ್ಯ: ಕೇಂದ್ರ ರಾಜಕಾರಣವನ್ನು ಕುರುಕ್ಷೇತ್ರಕ್ಕೆ ಹೋಲಿಸಿದ ಶ್ರೀಗಳು!

Video Top Stories