Asianet Suvarna News Asianet Suvarna News

ಕೋಡಿ ಶ್ರೀ ಮತ್ತೊಂದು ಭಯಾನಕ ಭವಿಷ್ಯ: ಕೇಂದ್ರ ರಾಜಕಾರಣವನ್ನು ಕುರುಕ್ಷೇತ್ರಕ್ಕೆ ಹೋಲಿಸಿದ ಶ್ರೀಗಳು!

ಅಭಿಮನ್ಯುವಿನ ಹೆಂಡತಿ ಪಾರ್ಲಿಮೆಂಟ್‌ ಪ್ರವೇಶ ಮಾಡಲಿದ್ದಾಳೆ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
 

ಮಳೆ, ಪ್ರವಾಹ, ರಾಜಕೀಯ ಸೇರಿದಂತೆ ಆಗು ಹೋಗುಗಳ ಬಗ್ಗೆ ಭವಿಷ್ಯ ನುಡಿಯುವ ಹಾಸನದ(Hassan) ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿಗಳು ಈಗ ಮತ್ತೊಂದು ಮಹತ್ವದ ಭವಿಷ್ಯ (Prediction) ನುಡಿದಿದ್ದಾರೆ. ಕೆಲ ದಿನಗಳ ಹಿಂದೆ ಕೋಡಿ ಶ್ರೀಗಳು(Kodi Mutt Sri) ರಾಜ್ಯದಲ್ಲಾಗುವ ಅನಾಹುತ, ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ ಕೇಂದ್ರ ರಾಜಕಾರಣದ ಬಗ್ಗೆ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಕೇಂದ್ರ ರಾಜಕಾರಣವನ್ನು ಕುರುಕ್ಷೇತ್ರಕ್ಕೆ ಹೋಲಿಸಿದ್ದಾರೆ. ಅಭಿಮನ್ಯು(Abhimanyu) ಹೆಂಡತಿ ಪಾರ್ಲಿಮೆಂಟ್‌ (Parliament) ಪ್ರವೇಶ ಮಾಡಲಿದ್ದಾಳೆ ಎಂದು ಕೋಡಿ ಶ್ರೀಗಳು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಕರ್ಕಟಕ ರಾಶಿಗೆ ಬುಧನ ಪ್ರವೇಶವಾಗಲಿದ್ದು, ಇದರಿಂದ ದೊರೆಯುವ ಫಲವೇನು ಗೊತ್ತಾ ?

Video Top Stories