
ದರ್ಶನ್ ಬೇಲ್ ಭವಿಷ್ಯ ಸದ್ಯದಲ್ಲೇ ನಿರ್ಧಾರ: ಪವಿತ್ರಾ ಗೌಡ ಲಿಖಿತ ವಾದದಲ್ಲಿ ಏನಿದೆ?
ಪವಿತ್ರಾ ತನಗೆ ದರ್ಶನ್ ಬಿಟ್ರೆ ಉಳಿದ ಆರೋಪಿಗಳ ಪರಿಚಯವೇ ಇಲ್ಲ. ತನಗೆ ಮಗಳು ಮತ್ತು ವಯಸ್ಸಾದ ತಾಯಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಇದ್ದು ಬೇಲ್ ರದ್ದು ಮಾಡಬೇಡಿ ಅಂತ ವಿನಂತಿಸಿಕೊಂಡಿದ್ದಾಳೆ.
ದರ್ಶನ್ & ಗ್ಯಾಂಗ್ನ ಬೇಲ್ ಭವಿಷ್ಯ ನಿರ್ಧಾರವಾಗುವ ಸಮಯ ಬಂದಿದೆ. ಸುಪ್ರೀಂ ಕೋರ್ಟ್ಗೆ ಡಿ ಗ್ಯಾಂಗ್ ಮತ್ತು ಸರ್ಕಾರದ ಪರ ಲಿಖಿತ ವಾದ ಸಲ್ಲಿಕೆಯಾಗಿದ್ದು ಇನ್ನೇನು ಅಂತಿಮ ತೀರ್ಪು ಬರೋದು ಮಾತ್ರ ಬಾಕಿ ಇದೆ. ಹಾಗಾದ್ರೆ ಏನಾಗಲಿದೆ ದಾಸನ ಬೇಲ್ ಭವಿಷ್ಯ.. ವಾಚ್ ದಿಸ್ ಸ್ಟೋರಿ. ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ದರ್ಶನ್ ಅಂಡ್ ಗ್ಯಾಂಗ್ಗೆ ನೀಡಿರುವ ಬೇಲ್ ರದ್ದು ಮಾಡಬೇಕು ಅಂತ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರ ಮತ್ತು ದರ್ಶನ್ ಗ್ಯಾಂಗ್ಗೆ ಲಿಖಿತ ವಾದ ಸಲ್ಲಿಸೋಕೆ ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟಿತ್ತು. ಇದೀಗ ಲಿಖಿತ ವಾದ ಕೋರ್ಟ್ಗೆ ತಲುಪಿದ್ದು ಅತೀ ಶಿಘ್ರದಲ್ಲೇ ಅಂತಿಮ ತೀರ್ಪು ಹೊರಬೀಳಲಿದೆ. ಹೌದು ಪೊಲೀಸ್ ತನಿಖೆಯ ಲೋಪಗಳನ್ನು ಉಲ್ಲೇಖಿಸಿ ದರ್ಶನ್ ಪರ ವಕೀಲರು ಲಿಖಿತ ವಾದವನ್ನ ಸಲ್ಲಿಸಿದ್ದಾರೆ. ಇನ್ನೂ ಪವಿತ್ರಾ ಗೌಡ ಪರವಾಗಿ ಪ್ರತ್ಯೇಕವಾಗಿ ವಾದಮಂಡಿಸಲಾಗಿದೆ.
ಹೌದು ಪವಿತ್ರಾ ತನಗೆ ದರ್ಶನ್ ಬಿಟ್ರೆ ಉಳಿದ ಆರೋಪಿಗಳ ಪರಿಚಯವೇ ಇಲ್ಲ. ತನಗೆ ಮಗಳು ಮತ್ತು ವಯಸ್ಸಾದ ತಾಯಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಇದ್ದು ಬೇಲ್ ರದ್ದು ಮಾಡಬೇಡಿ ಅಂತ ವಿನಂತಿಸಿಕೊಂಡಿದ್ದಾಳೆ. ಆದ್ರೆ ಪೊಲೀಸರು ಕೂಡ ಈ ಕೊಲೆ ಆರೋಪಿಗಳ ಬೇಲ್ ಯಾಕೆ ರದ್ದು ಮಾಡಬೇಕು ಅನ್ನೋದಕ್ಕೆ ಲಿಖಿತ ಕಾರಣಗಳನ್ನ ಕೊಟ್ಟಿದ್ದಾರೆ. ದರ್ಶನ್ ಮತ್ತು ಇತರ ಆರೋಪಿಗಳ ಬೇಲ್ನ ಯಾಕೆ ರದ್ದು ಮಾಡಬೇಕು ಅನ್ನೋದನ್ನ ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ ಪೊಲೀಸರು. ಸದ್ಯ ಎರಡೂ ಕಡೆಯ ವಾದವನ್ನ ಪಡೆದುಕೊಂಡಿರೋ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸೋದು ಮಾತ್ರ ಬಾಕಿ ಉಳಿದಿದೆ. ಹೌದು ಸುಪ್ರೀಂ ಕೋರ್ಟ್ನಲ್ಲಿ ಲಿಖಿತ ವಾದ ಮಂಡನೆ ಆದ ಬೆನ್ನಲ್ಲೇ ದರ್ಶನ್ ಮೈಸೂರಿನ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಬೇಲ್ ರದ್ದಾಗುವ ಭೀತಿಯಲ್ಲಿರೋ ದರ್ಶನ್ ‘ತನ್ನನ್ನ ದೇವರೇ ಕಾಪಾಡಬೇಕು’ ಅಂತ ದೇವಸ್ಥಾನಗಳಿಗೆ ಅಲೀತಾ ಇದ್ದಾರೆ. ಆದ್ರೆ ನ್ಯಾಯದೇಗುಲ ಏನು ತೀರ್ಪು ಕೊಡುತ್ತೆ ಅನ್ನೋದರ ಮೇಲೆ ಡಿ ಗ್ಯಾಂಗ್ ಭವಿಷ್ಯ ನಿಂತುಕೊಂಡಿದೆ.