ಹೆಂಗಸರು ಗ್ರೇಟಾ?..ಗಂಡಸರು ಗ್ರೇಟಾ? : ಕೌಸಲ್ಯಾ ಸುಪ್ರಜಾ ರಾಮ ಕತೆಯಾದ್ರೂ ಏನು?

ಹೆಂಗಸರು ಗ್ರೇಟಾ..? ಗಂಡಸರು ಗ್ರೇಟಾ..?  
ಗಂಡಸರ ದಬ್ಬಾಳಿಕೇನಾ? ಹೆಂಗಸರ ಓಲೈಕೇನಾ?
ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ ಕೌಸಲ್ಯಾ ಸುಪ್ರಜಾ..

Share this Video
  • FB
  • Linkdin
  • Whatsapp

ಲವ್ ಮಾಖ್ಟೇಲ್ ಪ್ರೀತಿಯಲ್ಲಿ ಮುಳುಗೆದ್ದ ಡಾರ್ಲಿಂಗ್ ಕೃಷ್ಣ(Darling Krishna) ಫುಲ್ ಚೇಂಚ್ ಆಗಿದ್ದಾರೆ. ಸಿದ್ದೇಗೌಡನ ಮಗನಾಗಿ ಲೇಡಿ ಟೀಚರ್ ಕೈಲಿ ಹೊಡಿಸಿಕೊಳ್ಳೋಲ್ಲ. ಬೇಕಾದ್ರೆ ಮೇಸ್ಟ್ರನ್ನ ಕರೀರಿ ಅನ್ನೋಮಟ್ಟಿಗೆ. ಕೃಷ್ಣ ಇಲ್ಲಿ ರಾಮನಾಗಿದ್ದಾನೆ. ಆದರೆ ರಾಮ ಕೌಸಲ್ಯಾ ಸುಪ್ರಜಾ ಹಿಂದೆ ಹೋಗೊಲ್ವಂತೆ. ಸ್ಕೂಟೀನೆ ಬುಲೆಟ್ ಹಿಂದೆ ಬರಬೇಕಂತೆ. ಬುಲೆಟ್ ಯಾವತ್ತು ಸ್ಕೂಟಿ ಹಿಂದೆ ಹೋಗೊಲ್ವಂತೆ. ಅಷ್ಟೆ ಅಲ್ಲ ಹುಡ್ಗೀರು ಹುಡ್ಗನ ಕಾಲ್ ಕೆಳಗೆ ಅನ್ನೋ ಮನೋಭಾವ. ಇಷ್ಟೆಲ್ಲಾ ನೋಡಿದ್ಮೇಲೆ ಶಶಾಂಕ್( ಹೆಣ್ಮಕ್ಳ ವಿರೋಧಿ ಅಂತಾ ನೀವು ಫಿಕ್ಸ್ ಆಗಿಬಿಟ್ಟಿರ್ತೀರ ಬಿಡಿ. ಆದ್ರೆ ಇಂಥಾ ಗಂಡಸನ್ನು ಬದಲಾಯಿಸೋ ಹೆಣ್ಣು ಇದ್ದೇ ಇದ್ದಾಳೆ. ಅವರೆ ಕೌಸಲ್ಯಾ ಸುಪ್ರಜಾ. ಅಂದಹಾಗೆ ಕೌಸಲ್ಯಾ ಸುಪ್ರಜಾ ರಾಮ(kausalya supraja rama) ಸಿನಿಮಾದಲ್ಲಿ ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸಿದ್ದಾರೆ. ಸ್ಪೆಷಲ್ ಅಪಿಯರೆನ್ಸ್ ನಲ್ಲಿ ಮಿಲನ ನಾಗರಾಜ್ ಇದ್ದಾರೆ. ಹಾಸ್ಯಕ್ಕಾಗಿ ನಾಗಭೂಷಣ್ ಇದ್ದಾರೆ. ಪುರುಷಪ್ರಧಾನ ಸಮಾಜದ ಪ್ರತಿನಿಧಿಯಾಗಿ ರಾಯಭಾರಿಯಂತೆ ರಂಗಾಯಣ ರಘು. ಮನೇಲಿ ಗಂಡ ಹೊಡೆದ್ರೆ ಹೊಡೆಸ್ಕೊಂಡು ಬೈದ್ರೆ ಬೈಸ್ಕೊಂಡು ಬದುಕೊ ಜೀವವಾಗಿ ಸುಧಾಬೆಳವಾಡಿ ನಟಿಸಿದ್ದಾರೆ.

ಇದನ್ನೂ ವೀಕ್ಷಿಸಿ: ರಾಮನನ್ನು ನೋಡಲು ಸಿದ್ದರಾಮಯ್ಯನವರು ಬಸ್‌ ಕೊಟ್ಟಿದ್ದಾರೆ: ಎಚ್‌.ವಿಶ್ವನಾಥ್‌

Related Video