ರಾಮನನ್ನು ನೋಡಲು ಸಿದ್ದರಾಮಯ್ಯನವರು ಬಸ್‌ ಕೊಟ್ಟಿದ್ದಾರೆ: ಎಚ್‌.ವಿಶ್ವನಾಥ್‌

ನಾನು ಸದ್ಯಕ್ಕೆ ಬಿಜೆಪಿಯಲ್ಲಿ ಇದ್ದೇನೆ. ಇಲ್ಲಿರುವುದು ಸುಮ್ಕನೆ, ಅಲ್ಲಿರೋದು ನಮ್ಮ ಮನೆ ಎಂದು ವಿಧಾನಪರಿಷತ್‌ನಲ್ಲಿ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು: ನಮ್ಮ ಪಾರ್ಟಿಯವರು ರಾಮ ರಾಮ ಎನ್ನುತ್ತಾರೆ. ಆದ್ರೆ ಸಿದ್ದರಾಮಯ್ಯ(Siddaramaiah) ಅವರು ರಾಮನನ್ನು ನೋಡಿಕೊಂಡು ಬರಲು (BUS) ಕೊಟ್ಟಿದ್ದಾರೆ. ಹಾಗಾಗಿ ನೋಡಿಕೊಂಡು ಬನ್ನಿ ಎಂದು ವಿಧಾನಪರಿಷತ್‌ನಲ್ಲಿ(Legislative Council) ಎಚ್‌. ವಿಶ್ವನಾಥ್‌ ಹೇಳಿದ್ದಾರೆ. ಆಗ ನಿಮ್ಮದು ಯಾವ ಪಾರ್ಟಿ ಎಂದು ಸಭಾಪತಿ ಹೊರಟ್ಟಿ ಕೇಳಿದ್ದಕ್ಕೆ, ನಾನು ಸದ್ಯಕ್ಕೆ ಬಿಜೆಪಿಯಲ್ಲಿ ಇದ್ದೇನೆ. ಇಲ್ಲಿರುವುದು ಸುಮ್ಮನೆ, ಅಲ್ಲಿರೋದು ನಮ್ಮ ಮನೆ ಎಂದು ಉತ್ತರಿಸಿದರು. ಸಿದ್ದರಾಮಯ್ಯ ಭಾಷಣ ಚೆನ್ನಾಗಿ ಮಾತಾಡುತ್ತಿದ್ದರು. ಅವರು ಮಾತಾಡುವಾಗ ನನಗೆ ಯಾರನ್ನಾದರೂ ಇಟ್ಟುಕೊಂಡು ಡ್ಯಾನ್ಸ್ ಮಾಡೋಣ ಅನಿಸುತ್ತಿತ್ತು ಎಂದರು. ಆಗ ಸಭಾಪತಿ ಹೊರಗಡೆ ಹೋಗಿ ಮಾಡಿ ಎಂದು ಟಾಂಗ್‌ ನೀಡಿದರು. ಬಜೆಟ್ ಅನ್ನು ಬಿಜೆಪಿ ಪರವಾಗಿ ಸ್ವಾಗತ ಮಾಡ್ತೇನೆ ಎಂದು ಎಚ್. ವಿಶ್ವನಾಥ್ ಹೇಳಿದರು.

ಇದನ್ನೂ ವೀಕ್ಷಿಸಿ: ಮತ್ತೊಂದು ಧರ್ಮ ಸಮರಕ್ಕೆ ಸಜ್ಜಾಯ್ತಾ ಕರಾವಳಿ..?: ಆ್ಯಕ್ಷಿವ್‌ ಆಯ್ತು ಆ್ಯಂಟಿ ಕಮ್ಯೂನಲ್‌ ವಿಂಗ್‌..!

Related Video