Asianet Suvarna News Asianet Suvarna News

ಬಡವರಿಗೆ ಹಸಿವು ನೀಗಿಸಲು ಅಕ್ಕಿ ಕೊಟ್ಟರೆ ತಪ್ಪಲ್ಲ:ಡಾಲಿ ಧನಂಜಯ್‌

ಕಾಂಗ್ರೆಸ್‌ನ ಉಚಿತ ಭಾಗ್ಯಗಳ ವಿಚಾರವಾಗಿ ನಟ ಡಾಲಿ ಧನಂಜಯ್‌ ಮಾತನಾಡಿ ತಿಂಗಳ ಆದಾಯಕ್ಕಿಂತ ಕಡಿಮೆ ಇರುವವರಿಗೆ ಹಸಿವು ನೀಗಿಸಲು ಅಕ್ಕಿ ಕೊಟ್ಟರೆ ತಪ್ಪಾಗಿ ಕಾಣಲ್ಲ ಎಂದು ಹೇಳಿದ್ದಾರೆ.

First Published May 31, 2023, 5:11 PM IST | Last Updated May 31, 2023, 5:11 PM IST

ಕಾಂಗ್ರೆಸ್‌ನ ಉಚಿತ ಭಾಗ್ಯಗಳ ವಿಚಾರವಾಗಿ ನಟ ಡಾಲಿ ಧನಂಜಯ್‌ ಮಾತನಾಡಿ ತಿಂಗಳ ಆದಾಯಕ್ಕಿಂತ ಕಡಿಮೆ ಇರುವವರಿಗೆ ಹಸಿವು ನೀಗಿಸಲು ಅಕ್ಕಿ ಕೊಟ್ಟರೆ ತಪ್ಪಾಗಿ ಕಾಣಲ್ಲ ಎಂದು ಹೇಳಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅವರು ನಾನು ಯಾವುದೇ ಪಕ್ಷ ಪರ, ವಿರೋಧವಾಗಿ ನಾನು ಮಾತಡಲ್ಲ. ಸಾಮಾನ್ಯ ಮನುಷ್ಯನಾಗಿ ಬಡವರಿಗೆ ಹಸಿವು ನೀಗಿಸಲು ಅಕ್ಕಿ ಕೊಟ್ಟರೆ ತಪ್ಪಾಲ್ಲ ಎಂದು ಹೇಳಿದರು.ಅಕ್ಕಿ ಕೊಟ್ಟರೆ ಜನ ಸೋಮಾರಿಯಾಗುತ್ತಾರೆ ಎಂದರೆ ತಪ್ಪಾಗುತ್ತದೆ.ತಿಂಗಳಿಗೆ 10 ಕೆಜಿ‌ ಅಕ್ಕಿ ಕೊಟ್ಟರೆ ಅಡುಗೆ ಮಾಡಿಕೊಂಡು ಊಟ ಮಾಡಿಕೊಂಡು ಮನೆಯಲ್ಲಿ ಇರೋಕೆ ಆಗಲ್ಲ. ಅಕ್ಕಿ ಕೊಟ್ಟರೆ ಹಸಿವನ್ನು ನೀಗಿಸುತ್ತೆ ಎಂದು ಅಭಿಪ್ರಾಯ ಪಟ್ಟರು . ಇಲ್ಲದವರಿಗೆ ಸಹಾಯ ಮಾಡುವುದು ತಪ್ಪಲ್ಲ ಎಂದು ಡಾಲಿ ಧನಂಜಯ್‌ ಹೇಳಿದರು.