Asianet Suvarna News Asianet Suvarna News

Martin movie: 'ಮಾರ್ಟಿನ್' ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್! ಇದಕ್ಕೆ ಎಪಿ ಅರ್ಜುನ್, ಉದಯ್ ಕೆ ಮಹ್ತಾ ಸ್ಪಷ್ಟನೆ ಹೀಗಿದೆ?

'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್!
ಗಲಾಟೆಗೆ ಎ.ಪಿ. ಅರ್ಜುನ್ - ಉದಯ್ ಕೆ ಮಹ್ತಾ ಸ್ಪಷ್ಟನೆ..!
ಧ್ರುವ  ಮಾರ್ಟಿನ್ ಬಜೆಟ್ ವಿಷಯಕ್ಕೂ ಆಗಿತ್ತಾ ಕಿತ್ತಾಟ?

ಧ್ರುವ ಸರ್ಜಾ(Druva sarja) ನಟನೆಯ 'ಮಾರ್ಟಿನ್' ಸಿನಿಮಾ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿತ್ತು. ಉದಯ್ ಕೆ. ಮೆಹ್ತಾ(Uday K Mehta) ನಿರ್ಮಾಣದ ಚಿತ್ರಕ್ಕೆ ಎ. ಪಿ ಅರ್ಜುನ್ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾ ಚುನಾವಣೆ, ಐಪಿಎಲ್ ಭರಾಟೆ ಬಳಿಕ ಪ್ರೇಕ್ಷಕರ ಮುಂದೆ ಬರಲಿದೆ. ಅಷ್ಟರಲ್ಲಾಗಲೇ ಈ ಸಿನಿಮಾ ನಿರ್ಮಾಪಕ ಉದಯ್ ಕೆ ಮೆಹ್ತಾ ಹಾಗೂ ನಿರ್ದೇಶಕ ಎ.ಪಿ ಅರ್ಜುನ್(AP Arjun) ಮಧ್ಯೆ ಎಲ್ಲವೂ ಸರಿ ಇಲ್ಲ. ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಸಿನಿಮಾ ರಿಲೀಸ್ ಆಗೋದೇ ಡೌಟ್ ಅಂತೆಲ್ಲಾ ಸುದ್ದಿ ಹಬ್ಬಿತ್ತು. ಇದೀಗ ಈ ಕಿರಿಕ್ ಕಹಾನಿಗೆ ಟ್ವಿಸ್ಟ್ ಸಿಕ್ಕಿದೆ. ಇಬ್ಬರೂ ಒಟ್ಟಿಗೆ ಬಂದು ಗಲಾಟೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಮಾರ್ಟಿನ್(Martin) ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಅರ್ಜುನ್ ಸರ್ಜಾ ಕಥೆ ಬರೆದ್ದಾರೆ. ಆದ್ರೆ ಡೈರೆಕ್ಷನ್ ಮಾಡಿರೋದು ಎ.ಪಿ ಅರ್ಜುನ್. ಈ ಸಿನಿಮಾದ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಆದ್ರೆ ಸಿನಿಮಾ ಬಿಡುಗಡೆಗೂ ಮುನ್ನ ನಿರ್ಮಾಪಕ ಉದಯ್‌ಕೆ ಮೆಹ್ತಾ ಹಾಗೂ ನಿರ್ದೇಶಕ ಎ. ಪಿ ಅರ್ಜುನ್ ಮಧ್ಯೆ ಸಂಭಾವನೆ ವಿಚಾರಕ್ಕೆ ಕಿರಿಕ್ ಆಗಿದೆ ಅನ್ನೋ ಗಾಸಿಪ್ ಹಬ್ಬಿತ್ತು. ಈ ವಿಚಾರ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ ಎಂದು ಹೇಳಲಾಗಿತ್ತು. ಮಾರ್ಟಿನ್ ದೊಡ್ಡ ಕ್ಯಾನ್ವಸ್ ಸಿನಿಮಾ. ಈ ಸಿನಿಮಾ ಶುರುವಾಗಿ ಆಗ್ಲೇ ಹತ್ತತ್ರ ಮೂರ ವರ್ಷ ಆಗಿದೆ. ಮೊದಲು ಬರೀ ಕನ್ನಡದಲ್ಲಿ ಶುರುವಾದ ಮಾರ್ಟಿನ್ ಕೊನೆಗೆ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬದಲಾಯ್ತು. ಹೀಗಾಗಿ ಇದರ ಬಜೆಟ್ ಗಾತ್ರ ಕೂಡ ದೊಡ್ಡದಾಗಿದೆ. ಈ ಬಜೆಟ್ ಲೈನ್ ಕ್ರಾಸ್ ಆಗಿದ್ದಕ್ಕೂ ನಿರ್ಮಾಪಕ ಉದಯ್ ಕೆ ಮೆಹ್ತಾ ಸಿಟ್ಟಾಗಿದ್ರು ಅಂತ ಸುದ್ದಿ ಇದೆ.  ಆದರೆ ಈಗ ಈ ಎಲ್ಲಾ ವಾದ ಪ್ರತಿವಾದ ಕಿರಿಕ್ ಗಾಸಿಪ್ಗೆ ಎಪಿ ಅರ್ಜುನ್ ಹಾಗ ಉದಯ್ ಕೆ ಮೆಹ್ತಾ ತೆರೆ ಎಳೆದಿದ್ದಾರೆ. ನಮ್ಮ ಮಧ್ಯೆ ಎಲ್ಲವೂ ಸರಿ ಇದೆ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  ನಾರಿಶಕ್ತಿಯ ಆಶೀರ್ವಾದ ಇದ್ದರೆ ಸಾಕು ಗೆಲುವು ಶತಃಸಿದ್ಧ..ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗೆ ಮೋದಿ ಗ್ಯಾರಂಟಿ ಕೌಂಟರ್..!

Video Top Stories