ನಾರಿಶಕ್ತಿಯ ಆಶೀರ್ವಾದ ಇದ್ದರೆ ಸಾಕು ಗೆಲುವು ಶತಃಸಿದ್ಧ..ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗೆ ಮೋದಿ ಗ್ಯಾರಂಟಿ ಕೌಂಟರ್..!

ಮೋದಿ ಸಮಾವೇಶದಲ್ಲೂ ಚೊಂಬಿಗೆ ಕೌಂಟರ್
ವಾರದ ಅಂತರದಲ್ಲಿ ಎರಡನೇ ಬಾರಿ ಮತಬೇಟೆ
ಕರುನಾಡು ಕಬ್ಜಾಗೆ ಮೋದಿ ಮಾಸ್ಟರ್‌ ಪ್ಲ್ಯಾನ್

First Published Apr 21, 2024, 9:58 AM IST | Last Updated Apr 21, 2024, 9:58 AM IST

ರಾಜ್ಯದಲ್ಲಿ ಲೋಕಸಭಾ ಸಮರದ ಕಾವು ಹೆಚ್ಚಾಗುತ್ತಿದ್ದು, ಶನಿವಾರ ಪ್ರಧಾನಿ ನರೇಂದ್ರ ಮೋದಿ(Narendra Modi) ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಸಿದರು. ಪ್ರಧಾನಿ ಮೋದಿ ಜೊತೆ ಮಾಜಿ ಪ್ರಧಾನಿ ದೇವೇಗೌಡರ(HD Devegowda) ಉತ್ಸಾಹಕ್ಕೆ ಜನರಿಂದ ಜೈಕಾರ ದೊರೆತಿದೆ. ಅಲ್ಲದೇ ಕಾಂಗ್ರೆಸ್‌(Congress) ಗ್ಯಾರಂಟಿಗೆ ಮೋದಿ ಗ್ಯಾರಂಟಿ ಮೂಲಕ ಕೌಂಟರ್‌ ನೀಡಲಾಗಿದೆ. ಸಮಾವೇಶದಲ್ಲಿ ಕಾಂಗ್ರೆಸ್‌ ಆಡ್ತಿರೋ ಕಳ್ಳಾಟವನ್ನು ಪ್ರಧಾನಿ ನರೇಂದ್ರ ಮೋದಿ ಜನರ ಮುಂದಿಟ್ಟರು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ಮೋದಿ ಹೇಳಿದರು. ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ 2014ರ ಚೊಂಬು ಇಂದು ಜನರ ಪಾಲಿನ ಅಕ್ಷಯ ಪಾತ್ರೆಯಾಗಿದೆ ಎಂದು ಹೇಳಿದರು. ಈ ಮೂಲಕ ಮೋದಿ ಸಮಾವೇಶದಲ್ಲೂ ಚೊಂಬಿಗೆ ಕೌಂಟರ್‌ ನೀಡಿದರು. 

ಇದನ್ನೂ ವೀಕ್ಷಿಸಿ:  Weekly-Horoscope: ಈ ರಾಶಿಯವರು ಆಪ್ತರಿಂದ ದೂರವಾಗುತ್ತಾರೆ, ವೃತ್ತಿಯಲ್ಲಿ ಅನಾನುಕೂಲ ಇದ್ದು.. ಪರಿಹಾರಕ್ಕೆ ಹೀಗೆ ಮಾಡಿ

Video Top Stories