
ಜೈಲಿನಲ್ಲಿ ಪಾರ್ಟಿ! ಕೆಂಚಾಲೋ.. ಮಂಚಾಲೋ.. ರೌಡಿಗಳ ಮಜಾ: ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ಹಾಸಿಗೆ, ದಿಂಬು!
ಕಳೆದ ಬಾರಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಜೊತೆ ಸೇರಿ ಪಾರ್ಟಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಸುಪ್ರೀಂ ಕೋರ್ಟ್ನಲ್ಲಿ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಅಂತೆಯೇ ಈ ಸಾರಿ ದರ್ಶನ್ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿದೆ.
ಕಳೆದ ಬಾರಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಜೊತೆ ಸೇರಿ ಪಾರ್ಟಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಸುಪ್ರೀಂ ಕೋರ್ಟ್ನಲ್ಲಿ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಅಂತೆಯೇ ಈ ಸಾರಿ ದಾಸನ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿದೆ. ಆದ್ರೆ ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಪಾರ್ಟಿ ಮಾತ್ರ ಮುಂದುವರೆದಿದೆ. ಯೆಸ್ ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ರೌಡಿಗಳಿಗೆ ರಾಜಾತಿಥ್ಯ ಸಿಗ್ತಾ ಇರೋ ವಿಷ್ಯ ಬಹಿರಂಗವಾಗಿದೆ. ಜೈಲಿನಲ್ಲಿ ರೌಡಿ ಶೀಟರ್ ಒಬ್ಬ ಸಹ ಖೈದಿಗಳ ಜೊತೆಗೆ ಸೇರಿ ಭರ್ಜರಿ ಬರ್ತಡೇ ಪಾರ್ಟಿ ಮಾಡಿದ್ದಾನೆ. ಕೇಕ್ ಕಟ್ ಮಾಡಿ ಜೈಲಿನಲ್ಲಿ ಬರ್ತಡೇ ಸೆಲೆಬ್ರೇಷನ್ ನಡೆದಿದೆ. ಸೇಬಿನ ಹಾರ ಹಾಕಿ, ಕೇಕ್ ಕಟ್ ಮಾಡಿ ಬರ್ತಡೇ ಪಾರ್ಟಿ ನಡೆಸಲಾಗಿದೆ. ನಟೋರಿಯಸ್ ರೌಡಿ ಶೀಟರ್ ಶೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾನ ಬರ್ತಡೇ ಪಾರ್ಟಿ ಜೋರಾಗಿ ನಡೆದಿದೆ.
ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟೋರಿಯಸ್ ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ. ಈತನ ಬರ್ತಡೇ ಯನ್ನೇ ಸಹಖೈದಿಗಳು ಜೋರಾಗಿ ಜೈಲಿನಲ್ಲೇ ಮಾಡಿದ್ದಾರೆ. ಅದರ ಪೋಟೋ, ವಿಡಿಯೋಗಳು ಈಗ ಹೊರಗಡೆ ಬಂದಿವೆ. ಮೊಬೈಲ್ ನಲ್ಲಿ ವಿಡಿಯೋ, ಪೋಟೋ ತೆಗೆದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜೈಲಿನಿಂದಲೇ ಈ ವಿಡಿಯೋ ಪೋಟೋಗಳು ಪೋಸ್ಟ್ ಆಗಿವೆ. ದರ್ಶನ್ ಹಾಸಿಗೆ ದಿಂಬಿಗಾಗಿ ಪರದಾಡ್ತಾ ಇರೋದನ್ನ ನೋಡಿ , ಜೈಲಲ್ಲಿ ಭಯಂಕರ ಸ್ಕ್ರಿಕ್ಟ್ ರೂಲ್ಸ್ ಬಂದಿದೆ ಅಂದುಕೊಂಡರೇ ಅದು ತಪ್ಪು. ಮತ್ತೆ ಜೈಲಿನಲ್ಲೇ ಉಳ್ಳವರ ದರ್ಬಾರ ಮುಂದುವರೆದಿದೆ. ಆದ್ರೆ ದರ್ಶನ್ ವಿಚಾರದಲ್ಲಿ ಮಾತ್ರ ಜೈಲ್ ಅಧಿಕಾರಿಗಳು ಸಿಕ್ಕಾಪಟ್ಟೆ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡ್ತಾ ಇದ್ದಾರೆ. ಜೈಲ್ ಮ್ಯಾನುವಲ್ನಲ್ಲಿರೋದನ್ನ ಕೊಟ್ಟು , ದಾಸನನ್ನ ಬ್ಯಾರಕ್ನಲ್ಲಿ ಕೂಡಿ ಹಾಕ್ತಾ ಇದ್ದಾರೆ.
ಯೆಸ್ ದರ್ಶನ್ದೂ ಅದೆಂಥಾ ಪರಿಸ್ಥಿತಿ ಅಂದ್ರೆ ಪಕ್ಕದ ಬ್ಯಾರಕ್ನಲ್ಲೇ ರೌಡಿಗಳೆಲ್ಲಾ ಸೇರಿ ಕೆಂಚಾಲೋ ಮಂಚಾಲೋ ಅಂತ ಪಾರ್ಟಿ ಮಾಡ್ತಾ ಇದ್ರೆ, ತಾನು ಮಾತ್ರ ಕತ್ತಲ ಕೋಣೆಯಲ್ಲಿ ಕೊಳೆಯ ಬೇಕಾಗಿ ಬಂದಿದೆ. ಅವರ ರೀತಿ ಪಾರ್ಟಿ ಮಾಡೋದಕ್ಕೆ ಕೊಡದೇ ಇದ್ರೂ ಪರವಾಗಿಲ್ಲ, ದಿಂಬು-ಹಾಸಿಗೆ ಕೊಡ್ರೋ ಅಂದ್ರೂ ಜೈಲಾಧಿಕಾರಿಗಳು ಕ್ಯಾರೇ ಅಂತಿಲ್ಲ. ಅಷ್ಟಕ್ಕೂ ಹೀಗಾಗಲಿಕ್ಕೆ ಖುದ್ದು ದರ್ಶನ್ನೇ ಕಾರಣ ಅನ್ನೋದು ಕೂಡ ಗೊತ್ತೇ ಇದೆ. ಕಳೆದ ಬಾರಿ ಜೈಲಿನಲ್ಲಿದ್ದಾಗ ಕೆಲ ರೌಡಿಗಳ ದೋಸ್ತಿ ಮಾಡಿಕೊಂಡಿದ್ದ ದರ್ಶನ್, ಜೈಲಲ್ಲಿ ತುಂಡು, ಗುಂಡಿಗೆಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದ. ರೌಡಿಯಬ್ಬನ ಜೊತೆಗೆ ಚೇರ್ನಲ್ಲಿ ಕುಳಿರು ದಂ ಹೊಡೀತಾ ಇರೋ ಫೋಟೊವೊಂದು ಹೊರಬಂದ ಮೇಲೆ ದಾಸನನ್ನ ಬಳ್ಳಾರಿಗೆ ಶಿಫ್ಟ್ ಮಾಡಲಾಗಿತ್ತು.
ಸುಪ್ರೀಂ ಕೋರ್ಟ್ನಲ್ಲಿ ಬೇಲ್ ವಿಚಾರಣೆ ನಡೆದಾಗ , ಜೈಲ್ ರಾಜಾತಿಥ್ಯದ ಬಗ್ಗೆ ಸುಪ್ರೀಂ ಕಠಿಣ ಎಚ್ಚರಿಕೆ ನೀಡಿದೆ. ಅದಕ್ಕೆ ಜೈಲು ಅಧಿಕಾರಿಗಳು ದರ್ಶನ್ ವಿಚಾರದಲ್ಲಿ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಆಗಿದ್ದಾರೆ. ಹಾಸಿಗೆ, ದಿಂಬು ಕೊಡಿ ಅಂದ್ರೂ ಅದೆಲ್ಲಾ ಆಗಲ್ಲ ಅಂತ ಅಂತಿದ್ದಾರೆ. ಈಗ ರೌಡಿಗಳ ಪಾರ್ಟಿ ವಿಷ್ಯ ಹೊರಬಂದ ಮೇಲೆ ದಾಸನ ವಿಚಾರದಲ್ಲಿ ಮತ್ತಷ್ಟು ಸ್ಟ್ರಿಕ್ಟ್ ಆದರೂ ಡೌಟಿಲ್ಲ. ಒಟ್ನಲ್ಲಿ ಪರಪ್ಪನ ಅಗ್ರಹಾರದಲ್ಲಿ ಕೈದಿಗಳು ಶಿಕ್ಷೆ ಅನುಭವಿಸ್ತಾ ಇಲ್ಲ, ಮೋಜು ಮಸ್ತಿ ಮಾಡ್ತಾ ಇದ್ದಾರೆ. ಇದಕ್ಕೆ ಕಡಿವಾಣ ಬೀಳೋದು ಯಾವಾಗ ಅನ್ನೋದು ಜನಸಾಮಾನ್ಯರ ಪ್ರಶ್ನೆ..!