Vikrant Rona: ಬೆಳ್ಳಿತೆರೆಯಲ್ಲಿ ಬ್ಯಾಂಗ್ ಮಾಡಲು ರೆಡಿಯಾದ ಕಿಚ್ಚ ಸುದೀಪ್

ವಿಕ್ರಾಂತ್ ರೋಣ ಪ್ಯಾನ್ ವರ್ಲ್ಡ್ ಸಿನಿಮಾ. ಬಹುಭಾಷೆಯಲ್ಲಿ ಸಿನಿಮಾ ತೆರೆಗೆ ಬರ್ತಾ ಇದೆ. ಹೀಗಾಗಿ ಇಡೀ ವಿಶ್ವದಾಂತ ವಿಕ್ರಾಂತ್ ರೋಣ ಸಿನಿಮಾವನ್ನ ರೀಚ್ ಮಾಡೋ ಜವಾಬ್ಧಾರಿ ಕಿಚ್ಚ ಸುದೀಪ್ ತನ್ನ ಹೆಗಲೇರಿಸಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಗುರಿ ಇಟ್ಟ ಮೇಲೆ ಆ ಗುರಿ ಮಿಸ್ ಆಗೋದಕ್ಕೆ ಸಾಧ್ಯನೆ ಇಲ್ಲ. ಯಾಕಂದ್ರೆ ಸುದೀಪ್ ಸುಮ್ ಸುಮ್ಮನೆ ಗುರಿ ಇಟ್ಟು ಕೂರೋಲ್ಲಾ. ಅದಕ್ಕೆ ಬೇಕಾದ ಎಲ್ಲಾ ಪೂರ್ವ ತಯಾರಿ ಮಾಡಿರ್ತಾರೆ. ಈಗ ದೇಶಾದ್ಯಂತ ಸದ್ದು ಮಾಡುತ್ತಿರೋ ವಿಕ್ರಾಂತ್ ರೋಣ (Vikrant Rona) ಸಿನಿಮಾ ವಿಷಯದಲ್ಲೂ ಸುದೀಪ್ ಬಹು ದೊಡ್ಡ ಪ್ಲಾನ್ ಮಾಡಿ ಅದಕ್ಕೆ ಬೇಕಾದ ರೂಟ್ ಮ್ಯಾಪ್ ಕೂಡ ಹಾಗಿದ್ದಾರೆ. ಕಿಚ್ಚನ ಈ ಪ್ಲ್ಯಾನಿಂಗ್‌ಗೆ ಭಾರತೀಯ ಚಿತ್ರರಂಗದ ಟಾಪ್ ಸ್ಟಾರ್ಸ್ ಸಾಥ್ ಸಿಕ್ಕಿದ್ದು, ಬೆಳ್ಳಿತೆರೆಯಲ್ಲಿ ಅಭಿನಯನ ಚಕ್ರವರ್ತಿ ಭರ್ಜರಿಯಾಗೆ ಬ್ಯಾಂಗ್ ಮಾಡಲಿದ್ದಾರೆ.

Add Asianetnews Kannada as a Preferred SourcegooglePreferred

ಕಿಚ್ಚ ಸುದೀಪ್ ಅಭಿಮಾನಿಗಳಿಗೆ BIG News! ಯುಗಾದಿ ಹಬ್ಬಕ್ಕೆ ನಿಜವಾದ ಹೋಳಿಗೆ ಎಂದ ಫ್ಯಾನ್ಸ್!

ವಿಕ್ರಾಂತ್ ರೋಣ ಪ್ಯಾನ್ ವರ್ಲ್ಡ್ ಸಿನಿಮಾ. ಬಹುಭಾಷೆಯಲ್ಲಿ ಸಿನಿಮಾ ತೆರೆಗೆ ಬರ್ತಾ ಇದೆ. ಹೀಗಾಗಿ ಇಡೀ ವಿಶ್ವದಾಂತ ವಿಕ್ರಾಂತ್ ರೋಣ ಸಿನಿಮಾವನ್ನ ರೀಚ್ ಮಾಡೋ ಜವಾಬ್ಧಾರಿ ಕಿಚ್ಚ ಸುದೀಪ್ ತನ್ನ ಹೆಗಲೇರಿಸಿಕೊಂಡಿದ್ದಾರೆ. ಕಿಚ್ಚನ ಈ ಕನಸಿಗೆ ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ನಲ್ಲಿರೋ ಸುದೀಪ್ರ ಸ್ನೇಹಿತರು ಸಾಥ್ ಕೊಟ್ಟಿದ್ದಾರೆ. ವಿಕ್ರಾಂತ್ ರೋಣ ಟೀಸರ್ ಏಪ್ರಿಲ್ 2ರಂದು ಬೆಳಗ್ಗೆ 9:55ಕ್ಕೆ ರಿಲೀಸ್ ಆಗ್ತಿದ್ದು, ಹಿಂದಿಯಲ್ಲಿ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ, ಮಲೆಯಾಳಂನಲ್ಲಿ ಮೋಹನ್ ಲಾಲ್, ತಮಿಳುನಲ್ಲಿ ನಟ ಸಿಂಬು ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಯುಗಾದಿ ಹಬ್ಬದ ದಿನದಿಂದ ವಿಕ್ರಾಂತ್ ರೋಣ ಯುಗಾರಂಭ ಆಗುತ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video