Upadhyaksha Movie: ಅಧ್ಯಕ್ಷನ ಅಖಾಡದಲ್ಲಿ ಉಪಾಧ್ಯಕ್ಷನ ಕಾಮಿಡಿ ಕಿಕ್! ನಾಯಕನಾಗಿಯೂ ಗೆದ್ದ ಚಿಕ್ಕಣ್ಣ..!

ಸ್ಯಾಂಡಲ್‌ವುಡ್‌ಗೆ ಈ ವರ್ಷ ಭರ್ಜರಿ ಬಾಕ್ಸಾಫೀಸ್ ಕಲೆಕ್ಷನ್ ಆಗುವ ಸೂಚನೆ ಆರಂಭದಿಂದಲೇ ಸಿಗುತ್ತಿದೆ. ದರ್ಶನ್ ಕಾಟೇರ ಬಿಗ್ ಸಕ್ಸಸ್ ನಂತರ ಅದನ್ನೇ ಫಾಲೋ ಮಾಡ್ತಿದೆ. ಚಿಕ್ಕಣ್ಣನ ಉಪಾಧ್ಯಕ್ಷ. ಹಳ್ಳಿ ಸೊಗಡಿನ ಹಾಸ್ಯದ ಹೊನಲನ್ನ ಹೊತ್ತು ಬಂದ ಉಪಾಧ್ಯಕ್ಷನನ್ನು ಜನ ಒಪ್ಪಿಕೊಂಡಿದ್ದಾರೆ. ಚಿಕ್ಕಣ್ಣ ಹೀರೋ ಆಗಿಯೂ ಗೆದ್ದುಬಿಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಭರ್ಜರಿ ಓಪನಿಂಗ್ ಪಡೆದು ಉಪಾಧ್ಯಕ್ಷ ಸಿನಿಮಾ( Upadhyaksha movie) ಬಾಕ್ಸಾಫೀಸ್‌ನಲ್ಲಿ ಕೋಟಿ ಲೂಟಿ ಮಾಡ್ತಿದೆ. ಸರಿಯಾಗಿ 10 ವರ್ಷಗಳ ಹಿಂದೆ ಶರಣ್ ನಾಯಕತ್ವದಲ್ಲಿ 'ಅಧ್ಯಕ್ಷ' ಸಿನಿಮಾ ಬಂದಿತ್ತು. ಶಿವರುದ್ರೇಗೌಡನ ಪಾತ್ರದಲ್ಲಿ ರವಿಶಂಕರ್ ಅಬ್ಬರಿಸಿದ್ದರು. ಹಾಗೆಯೇ, ಉಪಾಧ್ಯಕ್ಷ ನಾರಾಯಣನ ಪಾತ್ರದಲ್ಲಿ ಚಿಕ್ಕಣ್ಣ(Chikkanna) ಕೂಡ ಸ್ಕೋರ್ ಮಾಡಿದ್ದರು. ಇದೀಗ ಚಿಕ್ಕಣ್ಣ 'ಉಪಾಧ್ಯಕ್ಷ' ಅನ್ನೋ ಟೈಟಲ್‌ನಲ್ಲೇ ಸಿನಿಮಾ ಮಾಡಿ, ಅದರ ಮೂಲಕ ಹೀರೋ ಆಗಿದ್ದಾರೆ. 'ಅಧ್ಯಕ್ಷ' ಸಿನಿಮಾದಿಂದ 'ಉಪಾಧ್ಯಕ್ಷ' ಟೈಟಲ್ ಮಾತ್ರವಲ್ಲ, ಅದರ ಕಥೆಯನ್ನು ಹಾಗೇ ಕಂಟಿನ್ಯೂ ಮಾಡಿ, ಗಮನಸೆಳೆದಿದ್ದಾರೆ. ಮಲೈಕಾ ನಾಯಕಿಯಾಗಿ ಮಾರ್ಕ್ಸ್ ಸ್ಕೋರ್ ಮಾಡಿದ್ದಾರೆ, ನಿರ್ದೇಶಕ ಅನಿಲ್ ಮತ್ತು ನಿರ್ಮಾಪಕ ಉಮಾಪತಿ ಫುಲ್ ಖುಷ್ ಆಗಿದ್ದಾರೆ. ಇದೇ ಖುಷಿಯಲ್ಲಿ ಉಪಾಧ್ಯಕ್ಷನನ್ನು ಶಿವಣ್ಣ(Shivaraj Kumar) ಮತ್ತು ಧ್ರುವ ಸರ್ಜಾ(Dhruva Sarja) ವೀಕ್ಷಿಸಿ ಸಿನಿಮಾ ಸೂಪರ್ ಎಂದಿದ್ದಾರೆ. ಉಪಾಧ್ಯಕ್ಷ ಎಲ್ಲೆಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಾಮಿಡಿ ಕಿಕ್ ಜೊತೆ ಭರಪೂರ ಮನರಂಜನೆ ಸಿನಿಮಾದಲ್ಲಿದೆ. ಉಪಾಧ್ಯಕ್ಷ ನಿರ್ಮಾಪಕ ಉಮಾಪತಿ ಜೇಬು ತುಂಬಿಸೋದ್ರಲ್ಲಿ ನೋ ಡೌಟ್. 

ಇದನ್ನೂ ವೀಕ್ಷಿಸಿ: Pushpa 2: ಪುಷ್ಪ-2 ರಿಲೀಸ್ ಡೇಟ್ ಮುಂದಕ್ಕೆ ಹೋಯ್ತಾ..? ಟೀಂ ಹರಿಬಿಟ್ಟ ವಿಡಿಯೋದಲ್ಲಿ ಏನಿದೆ..?

Related Video