By Two Love: ಧನ್ವೀರ್-ಶ್ರೀಲೀಲಾ ನಟನೆಯ ಚಿತ್ರದ ಸ್ಪೆಷಾಲಿಟಿ ಏನು ಗೊತ್ತಾ?

ಚಂದನವನದಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿರುವ 'ಬೈಟು ಲವ್' ಚಿತ್ರವು ಇಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಧನ್ವೀರ್ ಮತ್ತು ಶ್ರೀಲೀಲಾ ಒಟ್ಟಾಗಿ ಅಭಿನಯಿಸಿದ್ದಾರೆ. ಹರಿ ಸಂತೋಷ್‌ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಚಂದನವನದಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿರುವ 'ಬೈಟು ಲವ್' (By Two Love) ಚಿತ್ರವು ಇಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಧನ್ವೀರ್ (Dhanveer) ಮತ್ತು ಶ್ರೀಲೀಲಾ (Sreeleela) ಒಟ್ಟಾಗಿ ಅಭಿನಯಿಸಿದ್ದಾರೆ. ಪ್ರೀತಿ-ಪ್ರೇಮದ ಕಥೆ ಸಿನಿಮಾದ ಹೈಲೈಟ್​ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷ್ಯ ಸಿಕ್ಕಿದೆ. 'ಬಜಾರ್' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟವರು ಧನ್ವೀರ್. 'ಕಿಸ್' ಚಿತ್ರದ ಮೂಲಕ ಶ್ರೀಲೀಲಾ ಚಿತ್ರರಂಗದದಲ್ಲಿ ಬೇಡಿಕೆ ಹೆಚ್ಚಿಸಿಕೊಂಡರು. ಇದೀಗ ಇಬ್ಬರೂ 'ಬೈಟು ಲವ್' ಸಿನಿಮಾದಲ್ಲಿ ನಟಿಸಿದ್ದಾರೆ. 

By Two Love ಚಿತ್ರದ ಬಗ್ಗೆ ಧನ್ವೀರ್-ಶ್ರೀಲೀಲಾ ಎಕ್ಸ್‌ಕ್ಲೂಸಿವ್ ಮಾತುಗಳು!

ವಿಶೇಷವಾಗಿ ಈ ಚಿತ್ರದಲ್ಲಿ ಆರವ್ ಎಂಬ 10 ತಿಂಗಳ ಮಗು ಕೂಡ ನಟಿಸಿದೆ. ಬೈಟು ಲವ್' ಚಿತ್ರವನ್ನು ಕೆವಿಎನ್‌ ಬ್ಯಾನರ್‌ನಲ್ಲಿ (KVN Banner) ನಿಶಾ ವೆಂಕಟ್ ಹಾಗೂ ಸುಪ್ರೀತ್ ನಿರ್ಮಿಸುತ್ತಿದ್ದು, ಹರಿ ಸಂತೋಷ್‌ (Hari Santhosh) ಆಕ್ಷನ್ ಕಟ್ ಹೇಳಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ (Ajaneesh Loknath) ಸಂಗೀತ ಸಂಯೋಜನೆ ಹಾಗೂ ಯೋಗಾನಂದ್‌ ಸಂಭಾಷಣೆ ಚಿತ್ರಕ್ಕಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video