8 ಜನ ನಾಮಿನೇಟ್..ಎಲಿಮಿನೇಟ್ ಆಗೋದು ಯಾರು ? ಇನ್ನು ಎಷ್ಟು ವಾರ ಇದೆ ಬಿಗ್‌ಬಾಸ್ ಸೀಸನ್ 10..?

ರೋಚಕ ಘಟ್ಟಕ್ಕೆ ಬಂದ ಬಿಗ್‌ಬಾಸ್ ಕನ್ನಡ ಸೀಸನ್ 10
ಈ ವಾರ ಮನೆಯಿಂದ ಹೊರ ಹೋಗೋದು ಇವರೇನಾ?
ಇನ್ನು ಎಷ್ಟು ವಾರ ಇದೆ ಬಿಗ್‌ಬಾಸ್ ಸೀಸನ್ 10..?

First Published Dec 31, 2023, 9:36 AM IST | Last Updated Dec 31, 2023, 9:36 AM IST

‘ಬಿಗ್ ಬಾಸ್ ಕನ್ನಡ’ ಸೀಸನ್ 10 (Bigg Boss season 10) ಇನ್ನೇನು ಕಲವೇ ವಾರದಲ್ಲಿ ಫಿನಾಲೆ ಬರಲಿದೆ. ಈ ಭಾರಿ ಒಂಟಿ ಮನೆ ಕಿರೀಟ ಗೆಲ್ಲೋದ್ಯಾರು ಅನ್ನೋ ಲೆಕ್ಕಾಚಾರ ಕೂಡ ಶುರುವಾಗಿದೆ. ಸದ್ಯ ಬಿಗ್ಬಾಸ್ ಮನೆಯಲ್ಲಿ 10 ಮಂದಿ ಸ್ಪರ್ಧಿಗಳಿದ್ದಾರೆ. ಆದ್ರೆ ಇಂಟ್ರೆಸ್ಟಿಂಗ್ ಅಂದ್ರೆ ಬಿಗ್ಬಾಸ್ ಇತಿಹಾಸದಲ್ಲೇ ಮೊದಲ ಭಾರಿಗೆ ಎಂಟು ಜನ ಸ್ಪರ್ಧಿಗಳು ಒಟ್ಟಿಗೆ ನಾಮಿನೇಟ್ ಆಗಿದ್ದಾರೆ. ಈ ವಾರ ಕನ್ನಡ ಬಿಗ್‌ಬಾಸ್ ಮನೆಯಲ್ಲಿ ಎಂಟು ಜನ ನಾಮಿನೇಟ್ ಆಗಿದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್ ಗೌಡ, ಮೈಕಲ್, ಸಂಗೀತಾ ಕಾರ್ತಿಕ್, ಸಿರಿ ಹಾಗೂ ತನಿಷಾ ನಾಮಿನೇಟ್ ಆಗಿದ್ದಾರೆ. ನಮ್ರತಾ ಹಾಗೂ ಪ್ರತಾಪ್ ನಾಮಿನೇಷ್‌ನಿಂದ ಬಚಾವ್ ಆಗಿದ್ದಾರೆ. ಆದ್ರೆ ವೀಕೆಂಡ್ ಎಪಿಸೋಡ್‌ನಲ್ಲಿ ಯಾರು ಔಟ್ ಆಗುತ್ತಾರೆ ಅನ್ನೋದು ಗೊತ್ತಾಗಲಿದೆ. ಹೀಗಾಗಿ ದಿನೇ ದಿನ ಒಂಟಿ ಮನೆ ಕಹಾನಿ ಕುತೂಹಲದ ಗಟ್ಟ ತಲುಪುತ್ತಿದೆ.

ಇದನ್ನೂ ವೀಕ್ಷಿಸಿ:  ಸಂಕ್ರಾಂತಿಗೆ ರೆಡಿಯಾಗಿವೆ ಸಾಲು ಸಾಲು ಸಿನಿಮಾಗಳು..! ಎಳ್ಳು-ಬೆಲ್ಲ ಬೀರುತ್ತೇವೆ ಅಂತ ಹೇಳ್ತಿರೋದು ಯಾರೆಲ್ಲಾ..?

Video Top Stories