ಸಂಕ್ರಾಂತಿಗೆ ರೆಡಿಯಾಗಿವೆ ಸಾಲು ಸಾಲು ಸಿನಿಮಾಗಳು..! ಎಳ್ಳು-ಬೆಲ್ಲ ಬೀರುತ್ತೇವೆ ಅಂತ ಹೇಳ್ತಿರೋದು ಯಾರೆಲ್ಲಾ..?
ಸಂಕ್ರಾಂತಿ ಅಂದ್ರೆ ರೈತರಿಗೆ ಸುಗ್ಗಿ ಹಬ್ಬ. ಅದೇ ತರ ಸಿನಿಮಾ ಮಂದಿಗೂ ಸುಗ್ಗಿ ಹಬ್ಬವೇ. ಯಾಕಂದ್ರೆ ಸಂಕ್ರಾಂತಿ ಹಬ್ಬಕ್ಕೆ ಸ್ಟಾರ್ ಸಿನಿಮಾಗಳು ರಿಲೀಸ್ ಆಗೋದು ವಾಡಿಕೆ. ಸಂಕ್ರಾಂತಿಗೆ ಯಾವ್ ಸ್ಟಾರ್ ಸಿನಿಮಾ ಬರುತ್ತಪ್ಪಾ ಅಂತ ಕಾಯೋರ ಸಂಖ್ಯೆಯೂ ಹೆಚ್ಚು. ಹಾಗಾದ್ರೆ ಈ ಭಾರಿ ಎಳ್ಳು ಬೆಲ್ಲ ಬೀರೋ ಸಿನಿಮಾಗಳು ಯಾವ್ದು..? ಆ ಲೀಸ್ಟ್ ದೊಡ್ಡದೇ ಇದೆ.
ಈಯರ್ ಎಂಡ್ ಧಮಾಕ ಮುಗೀತು. ವರ್ಷದ ಕೊನೆಯಲ್ಲಿ ಸಲಾರ್ ಡಂಕಿಯಂತದ ಸಿನಿಮಾಗಳು ಹಿಟ್ ಆಗಾಯ್ತು. ಈಗ ರೆಡಿಯಾಗ್ತಿರೋದು ಸಂಕ್ರಾಂತಿ ಧಮಾಕ. ಈ ಭಾರಿಯ ಎಳ್ಳು ಬೆಲ್ಲದ ಹಬ್ಬ ಅದ್ಧೂರಿಯಾಗಿರುತ್ತೆ. ಯಾಕಂದ್ರೆ ಸೂಪರ್ ಸ್ಟಾರ್ ರಜನಿಕಾಂತ್, ಧನುಷ್, ರವಿತೇಜಾ, ಪ್ರಿನ್ಸ್ ಮಹೇಶ್ ಬಾಬುರಂತಹ ಬಿಗ್ ಸ್ಟಾರ್‌ಗಳ ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ(Sankranti festival) ರಿಲೀಸ್ ಆಗ್ತಿವೆ. ಪ್ರಿನ್ಸ್ ಮಹೇಶ್ ಬಾಬು(Mahesh Babu) ಬೆಳ್ಳಿತೆರೆ ಮೇಲೆ ಸಂಕ್ರಾಂತಿ ಸಂಗ್ರಾಮಕ್ಕೆ ರೆಡಿಯಾಗಿದ್ದಾರೆ. ಮಹೇಶ್ ಬಾಬು ಹಾಗು ಹಾಟಿ ಶ್ರೀಲೀಲಾ(Sreeleela) ನಟನೆಯ ಗುಂಟೂರು ಕಾರಂ ಸಿನಿಮಾ ಇದೇ ಸಾಂಕ್ರಾಂತಿ ಹಬ್ಬಕ್ಕೆ ಎರಡು ದಿನ ಮೊದಲು ಅಂದ್ರೆ ಜನವರಿ 12ಕ್ಕೆ ದೇಶಾದ್ಯಂತ ತೆರೆ ಕಾಣುತ್ತೆ. ಈ ಭಾರಿಯ ಸಂಕ್ರಾತಿ ಹಬ್ಬಕ್ಕೆ ಸಿನಿಮಾ ಜಾತ್ರೆ ಇರುತ್ತೆ. ಒಂದ್ ಕಡೆ ಟಾಲಿವುಡ್ನಿಂದ ಮಹೇಶ್ ಬಾಬು ಬಂದ್ರೆ ಮತ್ತೊಂದ್ ಕಡೆ ಕಾಲಿವುಡ್ನಿಂದ(Kollywood) ಧನುಷ್ ಕೂಡ ಸಂಕ್ರಾಂತಿ ಸೆಲೆಬ್ರೇಷನ್ ಹೆಚ್ಚಿಸ್ತಾರೆ. ಜನವರಿ 12ರಂದೇ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಐದು ಭಾಷೆಯಲ್ಲಿ ತೆರೆ ಕಾಣಲಿದೆ.ಟಾಲಿವುಡ್ ಮಾಸ್ ಮಹರಾಜ ರವಿತೇಜಾ ಕೂಡ ಸಂಕ್ರಾಂತಿ ಹಬ್ಬದಲ್ಲಿ ಬಾಕ್ಸಾಫಿಸ್ ಧೂಳಿಪಟ ಮಾಡೋ ಪ್ಲ್ಯಾನ್ ಮಾಡಿದ್ದಾರೆ. ರವಿತೇಜಾ ನಟನೆಯ ಈಗಲ್ ಸಿನಿಮಾ ಜನವರಿ 12ರಂದು ತೆರೆ ಮೇಲೆ ಬರುತ್ತಿದೆ. ಈಗಲ್ ಅಂದ್ರೆ ಹದ್ದು. ಇನ್ನು ಹದ್ದು ಬರ್ತಿದೆ ಅಂದ್ರೆ ಬಾಕ್ಸಾಫೀಸ್ ಬೇಟೆ ಆಡೋದು ಪಕ್ಕಾ ಅಂತ ರವಿತೇಜಾ ಫ್ಯಾನ್ಸ್ ಹೇಳ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಹೊಸ ವರ್ಷದ ಹೊಸ್ತಿಲಲ್ಲಿ ಸಂಜು ವೆಡ್ಸ್ ಗೀತಾ 2 ಸಾಂಗ್ ರಿಲೀಸ್..!