Bheema Movie: ದೀಪಾವಳಿಗೆ ಬಿಡುಗಡೆಯಾಗುತ್ತಾ ದುನಿಯಾ ವಿಜಯ್‌ ಭೀಮ ಸಿನಿಮಾ ?

ಥಿಯೇಟರ್‌ನಲ್ಲಿ ದುನಿಯಾ ವಿಜಿಯ್ ಫ್ಯಾನ್ಸ್   
ಅಭಿಮಾನಿಗಳು ಪಟಾಕಿ ಸಿಡಿಸೋ ದಿನ ಬಂದೇಬಿಡ್ತು!
ಮುಂದಿನವಾರ  ರಿಲೀಸ್ ಮಾಡಲು ಡೇಟ್ ಅನೌನ್ಸ್ !

Share this Video
  • FB
  • Linkdin
  • Whatsapp

ಸಲಗ ನಂತರ ದುನಿಯಾ ವಿಜಯ್ ನಿರ್ದೇಶಿಸಿ ನಟಿಸ್ತಿರೋ ಭೀಮ ಸಿನಿಮಾ(Bheema Movie) ಕೆಲಸಗಳು ಕೊನೆಯ ಹಂತ ತಲುಪುತ್ತಿದ್ದು, ಚಿತ್ರತಂಡ ಸಿನಿಮಾ ರಿಲೀಸ್‌ಗೆ ಡೇಟ್ ಫಿಕ್ಸ್ ಮಾಡಿಕೊಳ್ತಿದೆ. ಈಗಾಗಲೇ ಭೀಮ ಟೀಸರ್(Bheem Teaser) ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಎಬ್ಬಿಸಿದೆ. ಅದ್ರಂತೆ ನವೆಂಬರ್‌ನಲ್ಲಿ ತೆರೆಗೆ ತರೋದಕ್ಕೆ ಸಜ್ಜಾಗಿದೆ. ನವೆಂಬರ್ ನಲ್ಲಿ ದೀಪಾವಳಿ(Diwali) ಇರೋದ್ರಿಂದ ಅದೇ ಡೇಟ್‌ಗೆ ಸಿನಿಮಾ ರಿಲೀಸ್ ಮಾಡ್ಬೇಕು ಅನ್ನೋ ನಿರ್ಧಾರಕ್ಕೆ ಚಿತ್ರ ತಂಡ ಬಂದಿದೆ. ಅಧಿಕೃತವಾಗಿ ಮುಂದಿನ ವಾರ ಡೇಟ್ ಅನೌನ್ಸ್ ಮಾಡೋದ್ರ ಜೊತೆಗೆ ಪ್ರಚಾರ ಕಾರ್ಯ ಶುರು ಮಾಡಲಾಗುವುದು. ದುನಿಯಾ ವಿಜಯ್,ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ ಮತ್ತು ಪ್ರಿಯಾ ಶಠಮರ್ಷಣ ಮುಖ್ಯ ಭೂಮಿಕೆಯಲ್ಲಿದ್ದು, ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ,ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ,ವಿನೋದ್, ಗೌತಮ್ ಸಾಹಸ, ಧನು ನೃತ್ಯ ಭೀಮನಿಗಿದೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ನಿರ್ಮಾಣ ಮಾಡಿರೋ ಭೀಮ ಎಲ್ಲಾ ಆ್ಯಂಗಲ್ ನಿಂದ್ಲೂ ಚಿತ್ರರಂಗದಲ್ಲಿ ದೊಡ್ಡ ನಿರಿಕ್ಷೆಯನ್ನ ಹುಟ್ಟಿಸಿದೆ. ಅಲ್ಲದೆ ಈ ವರ್ಷದ ಬಹು ನಿರೀಕ್ಷಿತ ಚಿತ್ರವೂ ಇದೇ ಆಗಿದೆ. ಎಲ್ಲವೂ ಅಂದುಕೊಂಡಂತಾದರೆ ಭೀಮ ಸಿನಿಮಾ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಲಿದ್ದು. ಥಿಯೇಟರ್‌ನಲ್ಲಿ ದುನಿಯಾ ವಿಜಯ್ ಫ್ಯಾನ್ಸ್ ಪಟಾಕಿ ಸಿಡಿಸಿ ಹಬ್ಬ ಮಾಡಲಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಇಂದಿನಿಂದ ನಿಜ ಶ್ರಾವಣ ಮಾಸ ಆರಂಭ..ಈ ರಾಶಿಯವರಿಗೆ ವಿಷ ಜಂತುಗಳಿಂದ ತೊಂದರೆ !

Related Video