Asianet Suvarna News Asianet Suvarna News

ಸಕ್ಸಸ್ ತಲೆಗೆ ಏರಿದ್ರೆ ಏನಾಗುತ್ತೆ ಅನ್ನೋದಕ್ಕೆ ನಟ ದರ್ಶನ್ ದೊಡ್ಡ ಉದಾಹರಣೆ: ಭಾಮಾ ಹರೀಶ್

ನಿರ್ಮಾಪಕರನ್ನ ಅನ್ನದಾತ ಅಂತ ಕರೆದವರು ಡಾ.ರಾಜಕುಮಾರ್. ಆದ್ರೆ ಈ ವಿಚಾರದಲ್ಲಿ ದರ್ಶನ್ ಎಲ್ಲೋ ಒಂದು ಕಡೆ ದಾರಿ ತಪ್ಪಿದ್ದಾರೆ ಅನಿಸುತ್ತೆ ಎಂದು ಭಾಮಾ ಹರೀಶ್ ಹೇಳಿದ್ದಾರೆ.

ದರ್ಶನ್ ಮೊದಲ ಚಿತ್ರ ಮೆಜೆಸ್ಟಿಕ್ ಚಿತ್ರಕ್ಕೆ ನಿರ್ಮಾಪಕನಾಗಿದ್ದೇ ನಾನು. ದರ್ಶನ್(darshan) ಆ ದಿನಗಳಲ್ಲಿ ಬಹಳ ವಿನಯವಂತನಾಗಿದ್ದ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್. ಬರ ಬರುತ್ತಾ ಅವನ ವರ್ತನೆಯಲ್ಲಿ ಬದಲಾವಣೆಯಾಯ್ತು. ಈ ಸ್ಥಿತಿಗೆ ಇವತ್ತು ಅವನ ಅಕ್ಕ ಪಕ್ಕದ ಚಮಚಗಳು ಬಕೆಟ್‌ಗಳೇ ಕಾರಣ. ಅವನಿಗೆ ಸಾಕಷ್ಟು ಭಾರಿ ಬುದ್ಧಿವಾದ ಹೇಳಿದ್ವಿ. ಅದ್ರೂ ದರ್ಶನ್ ಬದಲಾಗಲಿಲ್ಲ. ಅವನ ಹೆಂಡತಿ ವಿಜಯಲಕ್ಷ್ಮಿ ದರ್ಶನ್‌ಗೆ ಪ್ರಾರಂಭದಲ್ಲಿ ಸಾಕಷ್ಟು ಸಹಾಯ‌ ಮಾಡಿದ್ರು. ಅವರ ಫ್ಯಾಮಿಲಿ ‌ಗಲಾಟೆಯಾದ ಬಳಿಕವೂ ದರ್ಶನ್ ಬದಲಾಗಲಿಲ್ಲ. ಚಿತ್ರ ರಂಗದ ಸಾಕಷ್ಟು ‌ಜನರು ಬುದ್ಧಿವಾದ ಹೇಳಿದ್ರು. ಸಕ್ಸಸ್ ತಲೆಗೆ ಏರಿದ್ರೆ ಏನಾಗುತ್ತೆ ಅನ್ನೋದಕ್ಕೆ ದರ್ಶನ್ ಇವತ್ತು ಉದಾಹರಣೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿ ಮಾಜಿ ಅಧ್ಯಕ್ಷ ‌ಭಾಮಾ ಹರೀಶ್ (BA MA Harish) ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಮೈಸೂರಿಗೆ ದರ್ಶನ್ ಕರೆದೊಯ್ದು ಸ್ಥಳ ಮಹಜರು ಮಾಡುವುದನ್ನು ಕೈ ಬಿಟ್ಟ ಪೊಲೀಸರು: ಕಾರಣವೇನು ಗೊತ್ತಾ ?

Video Top Stories