ಅಬ್ಕಿ ಬಾರ್ 400 ಪಾರ್ ಬಗ್ಗೆ ಸಟ್ಟಾ ಭವಿಷ್ಯವೇನು..? ಮೋದಿ & ರಾಹುಲ್‌ಗೆ ಎಲ್ಲಿ ಏಳು..ಬೀಳು..?

ಮೋದಿ ಗೆಲುವಿಗೆ ಬ್ರೇಕ್ ಹಾಕ್ತಾರಾ ರಾಹುಲ್..? 
ಈಗ ಏನ್ ಹೇಳ್ತಿದೆ ಸಟ್ಟಾ ಬಜಾರ್ ಭವಿಷ್ಯ..?
6ನೇ ಹಂತದ ಮತದಾನ ಗೆದ್ದವರು ಯಾರು..? 
 

Share this Video
  • FB
  • Linkdin
  • Whatsapp

ದೇಶದಲ್ಲಿ ಲೋಕಸಭಾ ಚುನಾವಣೆ(Lok Sabha elections 2024) ಇನ್ನೇನು ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಭಾನುವಾರ 6ನೇ ಹಂತದ ವೋಟಿಂಗ್ ಮುಕ್ತಾಯಗೊಂಡಿದೆ. ಇನ್ನು ಉಳಿದಿರೋದು ಕೇವಲ ಒಂದು ಹಂತದ ವೋಟಿಂಗ್ ಮಾತ್ರ. 6ನೇ ಹಂತದ ವೋಟಿಂಗ್ ಒಂದು ದಿನ ಭಾಕಿ ಇರುವಾಗ ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್(Rajasthan Phalodi Satta Bazar) ಅಚ್ಚರಿ ರಿಪೋರ್ಟ್‌ವೊಂದನ್ನು ಹೊರ ಬಿಟ್ಟಿದೆ. ಈ ರಿಪೋರ್ಟ್‌ನಲ್ಲಿ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ಪಕ್ಷಗಳಿಗೆ ಅನೇಕ ಅಚ್ಚರಿಗಳಿವೆ. ದೇಶದ ಪ್ರತಿಷ್ಠಿತ ಪತ್ರಿಕೆಯಾದ ಫೈನಾನ್ಶಿಯಲ್ ಪತ್ರಿಕೆಯು, ಲೋಕಸಭಾ ಚುನಾವಣೆ ರಿಸಲ್ಟ್ ಕುರಿತು ವರದಿಯೊಂದನ್ನು ಬಿತ್ತರಿಸಿದೆ. ನಿಮಗೆಲ್ಲ ಈ ರಾಜಸ್ಥಾನದ ಸಟ್ಟಾ ಬಜಾರ್ ಬಗ್ಗೆ ಗೊತ್ತಿರಬಹುದು. 6ನೇ ಹಂತದ ಮತದಾನದ ನಂತರ ಸಟ್ಟಾ ಬಜಾರ್ ಅಚ್ಚರಿ ರಿಸಲ್ಟ್ ಅನ್ನು ರಿಲೀಸ್ ಮಾಡಿದೆ. ಸಟ್ಟಾ ಬಜಾರ್ ನುಡಿದ ರಿಸಲ್ಟ್ ಭವಿಷ್ಯವನ್ನು ಪ್ರತಿಷ್ಠಿತಿ ಪತ್ರಿಕೆಯಾದ ಫೈನಾನ್ಶಿಯಲ್ ಎಕ್ಸ್ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ಇದನ್ನೂ ವೀಕ್ಷಿಸಿ: ಮೋದಿ ಆಡಳಿತದಲ್ಲಿ ಷೇರು ಮಾರುಕಟ್ಟೆಗೆ ಉತ್ತೇಜನ..! 10ನೇ ಆರ್ಥಿಕತೆಯಿಂದ 5ನೇ ಆರ್ಥಿಕತೆಗೆ ಜಿಗಿದ ಭಾರತ..!

Related Video