ಆದಿಪುರುಷ್ ರಿಲೀಸ್‌ಗೂ ಮೊದಲೇ ಬಾಂಬ್ ಸಿಡಿಸಿದ ವೇಣು ಸ್ವಾಮಿ! : ಪ್ರಭಾಸ್‌ಗೆ ಟೈಮ್ ಚೆನ್ನಾಗಿಲ್ಲ ಎಂದ ಸ್ಟಾರ್ ಜ್ಯೋತಿಷಿ
ತೆಲುಗಿನ ಸ್ಟಾರ್ ಜ್ಯೋತಿಷಿ ವೇಣು ಸ್ವಾಮಿ ಪ್ರಭಾಸ್ ನಟನೆಯ ಆದಿಪುರುಷ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಟಾಲಿವುಡ್ ಬಿಗ್ ಪ್ಯಾನ್ ಇಂಡಿಯಾ ಸಿನಿಮಾ, ಆದಿಪುರುಷ್. ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಈ ಸಿನಿಮಾ 3ಡಿಯಲ್ಲೂ ಬರಲಿದ್ದು ಸು.500ಕೋಟಿ ಬಂಡವಾಳದಲ್ಲಿ ರೆಡಿಯಾಗುತ್ತಿದೆ. ಇದೇ ತಿಂಗಳ ಜೂನ್ 16 ನೇ ತಾರೀಖು ಆದಿಪುರುಷ್ ರಿಲೀಸ್‌ಗೆ ರೆಡಿಯಾಗಿದ್ದು ಚಿತ್ರದ ಯಶಸ್ಸಿನ ಬಗ್ಗೆ ಜನಪ್ರಿಯ ಸ್ಟಾರ್ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾಥಿ ಪಡೆದಿರುವ ವೇಣು ಸ್ವಾಮಿ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ತೆಲುಗು ಚಿತ್ರರಂಗದ ಹಲವು ತಾರೆಯರಿಗೆ ಭವಿಷ್ಯ ಹೇಳಿ ವಿಶೇಷ ಪೂಜೆಗಳನ್ನು ಮಾಡಿಸಿರುವ ವೇಣು ಸ್ವಾಮಿ ಯೂಟ್ಯೂಬ್ ಚಾನೆಲ್ ಮೂಲಕ ಚಿತ್ರರಂಗದ ಹಲವು ತಾರೆಯರ ಭವಿಷ್ಯ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಯಾವ ಸ್ಟಾರ್ ದುಬಾರಿ ಬಾಡಿಗಾರ್ಡ್ ಹೊಂದಿದ್ದಾರೆ? : ಸಲ್ಮಾನ್ , ಯಶ್ , ವಿಜಯ್ ಅಲ್ಲ ಮತ್ಯಾರು ಗೊತ್ತಾ?