Asianet Suvarna News Asianet Suvarna News

ನಾನು ಯಶ್‌ ತುಂಬಾ ಒಳ್ಳೆ ಸ್ನೇಹಿತರು, ಗೂಗ್ಲಿ ಸಿನಿಮಾದಲ್ಲಿ ಫ್ರೆಂಡ್‌ ಆಗಿ ನಟಿಸಿದ್ದೇನೆ: ನಟ ಅಶೋಕ್ ಶರ್ಮಾ

ಸೀತಾ ರಾಮ ಸೀರಿಯಲ್‌ನಲ್ಲಿ ಅಶೋಕ್ ಪಾತ್ರದಲ್ಲಿ ನಟ ಅಶೋಕ್ ಶರ್ಮಾ ಅಭಿನಯಿಸುತ್ತಿದ್ದಾರೆ. ಈ ಪಾತ್ರದ ಬಗ್ಗೆ ಅವರು ಏನ್‌ ಹೇಳಿದ್ದಾರೆ ನೀವೆ ಕೇಳಿ..

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್‌ನಲ್ಲಿ(Seeta Rama Serial) ಸೀತಾ ಮತ್ತು ರಾಮನ ಪಾತ್ರದಷ್ಟೇ ಪ್ರಮುಖವಾದ ಪಾತ್ರ ರಾಮನ ಗೆಳೆಯ ಅಶೋಕ್ ಅವರದ್ದು. ಅಶೋಕ್ ಪಾತ್ರದಲ್ಲಿ(Ashok Character) ನಟ ಅಶೋಕ್ ಶರ್ಮಾ ಅಭಿನಯಿಸುತ್ತಿದ್ದಾರೆ. ಗೆಳೆಯ ಮತ್ತು ಗೆಳೆತನ ಅಂದ್ರೆ ಹೀಗೆ ಇರಬೇಕು ಎನ್ನುವ ಪಾತ್ರಕ್ಕೆ ಜೀವ ತುಂಬಿ, ನಾಯಕನಷ್ಟೇ ಪ್ರಮುಖ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿ, ಇದೀಗ ಅಭಿಮಾನಿಗಳ ಬಳಗವನ್ನೇ ನಟ ಅಶೋಕ್ ಶರ್ಮಾ (Ashok Sharma) ಪಡೆದಿದ್ದಾರೆ. ಅಶೋಕ್ ಕೇವಲ ನಟ ಮಾತ್ರ ಅಲ್ಲ, ಇವರೊಬ್ಬ ಅದ್ಭುತ ಸಿಂಗರ್ (singer) ಕೂಡ ಹೌದು, ಕನ್ನಡದ ಹಲವಾರು ಸಿನಿಮಾಗಳಿಗೆ ಇವರು ಹಾಡು ಹಾಡಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ರಥಸಪ್ತಮಿ ಇದ್ದು, ಸೂರ್ಯ ದೇವನ ಪೂಜೆಯಿಂದ ಸಿಗುವ ಫಲಗಳೇನು ಗೊತ್ತಾ?