Asianet Suvarna News Asianet Suvarna News

ಮಚ್ಚು ಹಿಡಿದ ವೇದನ ಮುಂದೆ ಕಲ್ಲು ಹಿಡಿದು ನಿಂತ ಕನಕ: ಯಾರು ಈ ಹುಡುಗಿ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ವೇದ’ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯಿದ್ದು, ಮಚ್ಚು ಹಿಡಿದಿರುವ ವೇದನ ಮುಂದೆ ಕಲ್ಲು ಹಿಡಿದು ನಿಂತಿರೋ ಹುಡುಗಿ ಒಬ್ಬಳ ಫಸ್ಟ್ ಲುಕ್ ಹೊರ ಬಂದಿದೆ.

ವೇದ ಟೀಸರ್ ರಿಲೀಸ್ ಆಗಿ ಸೌತ್ ಸಿನಿ ರಂಗದಲ್ಲಿ ಬೇರೆಯದ್ದೇ ಹೈಪ್ ಸೃಷ್ಟಿಸಿದೆ. ಈ ಭಾರೀ ಸೆಂಚುರಿ ಸ್ಟಾರ್ ಮತ್ತೊಂದು 100 ಡೇಸ್ ಸಿನಿಮಾ ಕೊಡುವ ಮುನ್ಸೂಚನೆ ಕೊಟ್ಟಿದ್ದಾರೆ. ಟೀಸರ್’ನಲ್ಲಿ ಶಿವಣ್ಣನನ್ನ ಹೊರತುಪಡಿಸಿ ಮತ್ತಿನ್ಯಾವ ಕ್ಯಾರೆಕ್ಟರ್’ಗಳು ರಿವೀಲ್ ಆಗಿರಲಿಲ್ಲ. ಇದೀಗ ಮಚ್ಚು ಹಿಡಿದಿರೋ ವೇದನ ಮುಂದೆ ಕಲ್ಲು ಹಿಡಿದು ನಿಂತಿರೋ ಹುಡುಗಿಯ ಫಸ್ಟ್ ಲುಕ್ ಹೊರ ಬಂದಿದೆ. ಕೈಯಲ್ಲಿ ಕಲ್ಲು ಹಿಡಿದು ನಿಂತಿರೋ ಆ ಹುಡುಗಿ ನಟ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್. ವೇದ ಸಿನಿಮಾದಲ್ಲಿ ಶಿವಣ್ಣನ ಜೊತೆ ಕನಕ ಪಾತ್ರದಲ್ಲಿ ಅದಿತಿ ಸಾಗರ್ ಅಭಿನಯಿಸಿದ್ದಾರೆ. ಈಗ ಈ ಫಸ್ಟ್ ಲುಕ್ ಫೋಟೋ ವೈರಲ್ ಆಗುತ್ತಿದೆ. 

ಪತಿಗೆ ಅರಮನೆಯಂಥ ಮನೆ ಗಿಫ್ಟ್ ಮಾಡಿದ ನಯನತಾರ