Asianet Suvarna News Asianet Suvarna News

ಕಾಟೇರ ಬೆಡಗಿ ಯೋಗಾಭ್ಯಾಸ ! ಯೋಗ ಹೇಗೆ ಮಾಡ್ತಾರೆ ನೋಡಿ ಮಾಲಾಶ್ರೀ ಪುತ್ರಿ !

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕಾಟೇರ ಸಿನಿಮಾ ನಟಿ ಆರಾಧಾನ ರಾಮ್ ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ರು.
 

ಅಂತಾರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಅಂಗವಾಗಿ ಕಾಟೇರ ಸಿನಿಮಾ(Kaatera movie) ನಟಿ ಆರಾಧಾನ ರಾಮ್ (Aradhana Ram) ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ರು. ಇಂದಿರಾ ನಗರದ ಕ್ಲಬ್‌ನಲ್ಲಿ ಅಥಾಯೋಗ್ ಲಿವಿಂಗ್ ಆಯೋಜಿಸಿದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲರ ಜೊತೆ ಯೋಗ ಮಾಡಿದ್ರು . ಸುಮಾರು ಒಂದು ಗಂಟೆಗಳ ಕಾಲ ಆರಾಧಾನ ಯೋಗ ಮಾಡಿದ್ರು. ಇದೇ ಸಮಯದಲ್ಲಿ ಯೋಗ ಕೇವಲ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಶಾಂತಿ ನೀಡುತ್ತೆ ಪ್ರತಿಯೊಬ್ಬರು ಯೋಗ ಮಾಡಬೇಕು ಎಂದರು. ದರ್ಶನ್ ಜೊತೆ ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ಇವರು ನಟಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆಗಿರೋ ಬಗ್ಗೆಯೂ ಮಾಧ್ಯಮಗಳು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆರಾಧನ ನೋ ಕಮೆಂಟ್ಸ್‌ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  ಡಾಲಿಯ 'ಕೋಟಿ' ನೋಡಿ ಖುಷ್ ಹುವಾ ಎಂದ ಮಾಜಿ ಸಂಸದ! ಧನಂಜಯ್ ನಟನೆಗೆ ಕನ್ನಡದ ವಿಜಯ್ ಸೇತುಪತಿ ಎಂದ ಸಿಂಹ